ಪಾಕ್ ಬ್ಯೂಟಿ ಕ್ರೀಮ್‌ಗಳಲ್ಲಿ ಹೆಚ್ಚಿನ 'ಮರ್ಕ್ಯೂರಿ ವಿಷ' ಪತ್ತೆ! ಪ್ರಯೋಗಾಲಯ ವರದಿಯಲ್ಲಿ ಬಹಿರಂಗ

ಜುಲೈ 9 ರಂದು ನಾಂದೇಡ್‌ನ ಮಕ್ಕಾ ಗಲ್ಲಿ ಪ್ರದೇಶದಲ್ಲಿರುವ 'ಅಫ್ರಾ ಕಲೆಕ್ಷನ್' (ಅಫ್ರಾ ಟೂರ್ಸ್ ಅಂಡ್ ಟ್ರಾವೆಲ್ಸ್) ಎಂಬ ಅಂಗಡಿಯ ಮೇಲೆ ದಾಳಿ ನಡೆಸಿದಾಗ ಸುಮಾರು 39.69 ಲಕ್ಷ ರೂ. ಮೌಲ್ಯದ ಈ ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಗಿತ್ತು
Casual Images
ಸಾಂದರ್ಭಿಕ ಚಿತ್ರ
Updated on: 

ನಾಂದೇಡ್: ಪಾಕಿಸ್ತಾನದ ಮತ್ತೊಂದು ಕುತಂತ್ರ ಬಯಲಾಗಿದೆ. ಮಹಾರಾಷ್ಟ್ರದ ನಾಂದೇಡ್ ಪೊಲೀಸರು ಸುಮಾರು ನಾಲ್ಕು ತಿಂಗಳ ಹಿಂದೆ ವಶಪಡಿಸಿಕೊಂಡ, 'ಮೇಡ್ ಇನ್ ಪಾಕಿಸ್ತಾನ್' (ಪಾಕಿಸ್ತಾನದಲ್ಲಿ ತಯಾರಾದ) ಸೌಂದರ್ಯವರ್ಧಕ ಉತ್ಪನ್ನಗಳಲ್ಲಿ ಪಾದರಸ ಮತ್ತು ಆರ್ಸೆನಿಕ್‌ನಂತಹ ವಿಷಕಾರಿ ಭಾರ ಲೋಹಗಳು ಅಪಾಯಕಾರಿ ಮಟ್ಟದಲ್ಲಿವೆ ಎಂದು ಸರ್ಕಾರಿ ಪ್ರಯೋಗಾಲಯದ ವರದಿ ಬಹಿರಂಗಪಡಿಸಿದೆ.

ಜುಲೈ 9 ರಂದು ನಾಂದೇಡ್‌ನ ಮಕ್ಕಾ ಗಲ್ಲಿ ಪ್ರದೇಶದಲ್ಲಿರುವ 'ಅಫ್ರಾ ಕಲೆಕ್ಷನ್' (ಅಫ್ರಾ ಟೂರ್ಸ್ ಅಂಡ್ ಟ್ರಾವೆಲ್ಸ್) ಎಂಬ ಅಂಗಡಿಯ ಮೇಲೆ ದಾಳಿ ನಡೆಸಿದಾಗ ಸುಮಾರು 39.69 ಲಕ್ಷ ರೂ. ಮೌಲ್ಯದ ಈ ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಗಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ದಾಳಿಯ ವೇಳೆ ಸಂಗ್ರಹಿಸಿದ ಮಾದರಿಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಿದಾಗ, ಎರಡು ಸೌಂದರ್ಯವರ್ಧಕ ಕ್ರೀಮ್‌ಗಳಲ್ಲಿ ಪಾದರಸದ ಪ್ರಮಾಣವು ಅಪಾಯಕಾರಿ ಮಟ್ಟದಲ್ಲಿರುವುದು ಕಂಡುಬಂದಿದೆ. ಇದು ಸೌಂದರ್ಯವರ್ಧಕ ನಿಯಮಾವಳಿಗಳ ಅಡಿಯಲ್ಲಿ ನಿಗದಿಪಡಿಸಿದ ಅನುಮತಿಸುವ ಮಿತಿಗಿಂತಲೂ ಬಹಳ ಹೆಚ್ಚಾಗಿದೆ.

'ಪಾರ್ಲಿ 24ಕೆ ಗೋಲ್ಡ್ ಗ್ಲೀಮ್ ಬ್ಯೂಟಿ ಕ್ರೀಮ್' (PARLEY 24K Gold Gleam Beauty Cream) ನಲ್ಲಿ 48,453.44 ಪಿಪಿಎಂ (PPM) ಪಾದರಸವಿರುವುದು ಪತ್ತೆಯಾಗಿದೆ, ಆದರೆ ಇದಕ್ಕೆ ಅನುಮತಿಸಲಾದ ಗರಿಷ್ಠ ಮಿತಿ ಕೇವಲ 1 ಪಿಪಿಎಂ ಆಗಿದೆ. ಅದೇ ರೀತಿ, 'ಗೋರಿ ಬ್ಯೂಟಿ ಕ್ರೀಮ್ ವಿತ್ ಲೈಕೋಪೀನ್' (GOREE Beauty Cream with Lycopene) ನಲ್ಲಿ 6,924.94 ಪಿಪಿಎಂ ಪಾದರಸ ಪತ್ತೆಯಾಗಿದೆ.

ಇಟ್ವಾರಾ ಪೊಲೀಸ್ ಠಾಣೆಯ ತಂಡ ಮತ್ತು ಆಹಾರ ಮತ್ತು ಔಷಧ ಆಡಳಿತ (FDA) ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಈ ದಾಳಿ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Casual Images
ಶಿವಸೇನೆ (ಯುಬಿಟಿ)ಯ ಆರು ಬಂಡಾಯ ಸಂಸದರಿಗೆ ವೈ-ಪ್ಲಸ್ ಭದ್ರತೆ ಒದಗಿಸಿದ ಮಹಾರಾಷ್ಟ್ರ ಪೊಲೀಸರು!

ಅಂಗಡಿಯ ನಿರ್ವಾಹಕ ಮೊಹಮ್ಮದ್ ಜಿಯಾವುದ್ದೀನ್ ಮೊಹಮ್ಮದ್ ವಾಜಿದ್ ಅವರ ಬಳಿ, ಉರ್ದು ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಲೇಬಲ್ ಹೊಂದಿರುವ ಹಾಗೂ ಪಾಕಿಸ್ತಾನದಲ್ಲಿ ತಯಾರಾದವು ಎಂದು ಹೇಳಿಕೊಳ್ಳುವ ಸೌಂದರ್ಯವರ್ಧಕ ಉತ್ಪನ್ನಗಳು ಪತ್ತೆಯಾಗಿದ್ದವು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X