ನೆಹರೂ ನಿಧನರಾಗಿ 60 ವರ್ಷ ಕಳೆದರೂ ಟೀಕೆ; ದೇಶದ ಬಗ್ಗೆ ಅವರಿಗಿದ್ದ ದೃಢ ಬದ್ಧತೆಗೆ ಸಾಕ್ಷಿ: ಪ್ರಿಯಾಂಕಾ ಗಾಂಧಿ

ಭಾರತದ ಮೊದಲ ಪ್ರಧಾನಿ ನೆಹರು ಅವರಿಗೆ ಗೌರವ ಸಲ್ಲಿಸಿದ ವಯನಾಡ್ ಸಂಸದೆ, ನೆಹರು ಒಬ್ಬ ಕ್ರಾಂತಿಕಾರಿ, ದೂರದೃಷ್ಟಿಯುಳ್ಳ ವ್ಯಕ್ತಿ ಮತ್ತು ರಾಷ್ಟ್ರ ನಿರ್ಮಾತೃವಾಗಿದ್ದ ಅಸಾಧಾರಣ ಮಾನವ ಎಂದು ಬಣ್ಣಿಸಿದರು.
Priyanka Gandhi
ಪ್ರಿಯಾಂಕಾ ಗಾಂಧಿ
Updated on: 

ನವದೆಹಲಿ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಶನಿವಾರ ಜವಾಹರಲಾಲ್ ನೆಹರು ಅವರ ಜನ್ಮದಿನದಂದು ಅವರನ್ನು ಸ್ಮರಿಸಿದರು. ನೆಹರು ನಿಧನರಾಗಿ 60 ವರ್ಷಗಳಿಗೂ ಹೆಚ್ಚು ಕಾಲ ಕಳೆದಿದ್ದರೂ, ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ನಾಶಪಡಿಸಲು ಬಯಸುವವರಿಂದ ಅವರು ಇಂದಿಗೂ ಟೀಕೆಗೆ ಒಳಗಾಗುತ್ತಿರುವುದು, ಭಾರತದ ಬಗ್ಗೆ ಅವರಿಗಿದ್ದ ದೃಢ ಬದ್ಧತೆಗೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.

ಭಾರತದ ಮೊದಲ ಪ್ರಧಾನಿ ನೆಹರು ಅವರಿಗೆ ಗೌರವ ಸಲ್ಲಿಸಿದ ವಯನಾಡ್ ಸಂಸದೆ, ನೆಹರು ಒಬ್ಬ ಕ್ರಾಂತಿಕಾರಿ, ದೂರದೃಷ್ಟಿಯುಳ್ಳ ವ್ಯಕ್ತಿ ಮತ್ತು ರಾಷ್ಟ್ರ ನಿರ್ಮಾತೃವಾಗಿದ್ದ ಅಸಾಧಾರಣ ಮಾನವ ಎಂದು ಬಣ್ಣಿಸಿದರು.

'ಅವರು ನಿಧನರಾಗಿ ಅರವತ್ತು ವರ್ಷಗಳಿಗೂ ಹೆಚ್ಚು ಕಾಲ ಕಳೆದಿದ್ದರೂ, ನಮ್ಮ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ನಾಶಮಾಡಲು ಬಯಸುವವರಿಂದ ಅವರು ಇಂದಿಗೂ ಟೀಕೆಗೆ ಒಳಗಾಗುತ್ತಿದ್ದಾರೆ ಎಂಬುದು ನಿಜ ಸಂಗತಿ. ಇದು ನೆಹರೂ ಅವರಿಗೆ ಭಾರತದ ಬಗ್ಗೆ ಅವರಿಗಿದ್ದ ದೃಢ ಬದ್ಧತೆಗೆ ಸಾಕ್ಷಿಯಾಗಿದೆ' ಎಂದು ಅವರು 'ಎಕ್ಸ್'ನಲ್ಲಿ ತಿಳಿಸಿದ್ದಾರೆ.

Priyanka Gandhi
ಇಷ್ಟು ವರ್ಷ ನನ್ನ ತಾಯಿ ಬಗ್ಗೆ BJP-RSS ಸುಳ್ಳುಗಳನ್ನೇ ಹೇಳಿವೆ, ಈಗ ಸೋನಿಯಾ ಗಾಂಧಿ ಸತ್ಯ ಹೇಳುತ್ತಿದ್ದಾರೆ: ಪ್ರಿಯಾಂಕಾ ಗಾಂಧಿ

'ನಮ್ಮ ದೇಶದ ಮೇಲಿನ ಅವರ ಪ್ರೀತಿಯು ಸದಾಕಾಲ ನಮಗೆ ಮಾರ್ಗದರ್ಶನ ನೀಡಲಿ' ಎಂದೂ ಅವರು ಸೇರಿಸಿದ್ದಾರೆ.

ನೆಹರೂ ಅವರು 1889ರ ಇದೇ ದಿನದಂದು ಅಲಹಾಬಾದ್‌ನಲ್ಲಿ (ಈಗಿನ ಪ್ರಯಾಗರಾಜ್) ಜನಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X