ಮತದಾರರ ಧರ್ಮದ ಬಗ್ಗೆ ಯಾವುದೇ ಡೇಟಾ ಇಲ್ಲ: ಹಿಂದೂಗಳು ನಾಪತ್ತೆ ಎಂದ CM ಯೋಗಿಗೆ CEO ಕೌಂಟರ್‌!

ಚುನಾವಣಾ ಆಯೋಗದ ದತ್ತಾಂಶದಲ್ಲಿ(ಡೇಟಾಬೇಸ್) ಮತದಾರರ ಧರ್ಮ ಅಥವಾ ಜಾತಿಯ ಕುರಿತಾದ ಯಾವುದೇ ಮಾಹಿತಿ ಇರುವುದಿಲ್ಲ ಎಂದು ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಸ್ಪಷ್ಟಪಡಿಸಿದ್ದಾರೆ.
Yogi Adityanath
ಯೋಗಿ ಆದಿತ್ಯನಾಥ್online desk
Updated on: 

ಲಖನೌ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ರಾಜ್ಯದ ಮತದಾರರ ಪಟ್ಟಿಯಿಂದ 1.27 ಕೋಟಿ ಹಿಂದೂ ಮತದಾರರನ್ನು ಕೈಬಿಡಲಾಗಿದೆ ಎಂದು ಆರೋಪಿಸಿದ್ದರು. ಇದರ ಬೆನ್ನಲ್ಲೇ ಮಂಗಳವಾರ ಉತ್ತರ ಪ್ರದೇಶ ಮುಖ್ಯ ಚುನಾವಣಾ ಅಧಿಕಾರಿ ನವದೀಪ್ ರಿನ್ವಾ ಅವರು ಸ್ಪಷ್ಟನೆ ನೀಡಿದ್ದಾರೆ.

ಚುನಾವಣಾ ಆಯೋಗದ ದತ್ತಾಂಶದಲ್ಲಿ(ಡೇಟಾಬೇಸ್) ಮತದಾರರ ಧರ್ಮ ಅಥವಾ ಜಾತಿಯ ಕುರಿತಾದ ಯಾವುದೇ ಮಾಹಿತಿ ಇರುವುದಿಲ್ಲ ಎಂದು ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ, 'ವಿಶೇಷ ಸಮಗ್ರ ಪರಿಷ್ಕರಣೆ' (Special Intensive Revision - SIR) ಪ್ರಕ್ರಿಯೆಯ ಸಂದರ್ಭದಲ್ಲಿ ನಿರ್ದಿಷ್ಟ ಸಮುದಾಯವೊಂದನ್ನು ಗುರಿಯಾಗಿಸುವ ಯಾವುದೇ ಷಡ್ಯಂತ್ರ ನಡೆದಿಲ್ಲ ಎಂದು ಅವರು ಹೇಳಿದ್ದಾರೆ.

ಇಂದು ಲಖನೌನ ಲೋಕ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಿನ್ವಾ, ಮತದಾರರ ಪಟ್ಟಿಯಲ್ಲಿ ಮತದಾರರ ಹೆಸರು, ವಯಸ್ಸು, ಲಿಂಗ, ಮನೆಯ ಸಂಖ್ಯೆ ಮತ್ತು ಸಂಬಂಧಿಕರ ಹೆಸರುಗಳಂತಹ ವಿವರಗಳು ಮಾತ್ರ ಇರುತ್ತವೆಯೇ ಹೊರತು, ಅವರ ಧರ್ಮ ಅಥವಾ ಜಾತಿಯ ಬಗ್ಗೆ ಯಾವುದೇ ಮಾಹಿತಿ ಇರುವುದಿಲ್ಲ ಎಂದು ತಿಳಿಸಿದರು.

Yogi Adityanath
'ಅಪ್ಪನ ತೊಡೆಯ ಮೇಲೆ ಅಮ್ಮ' ಹೇಳಿಕೆ: BJP, RSS ಮನಸ್ಸಿನಲ್ಲಿ ದ್ವೇಷ ತುಂಬಿಕೊಂಡಿವೆ - ರಾಹುಲ್ ಗಾಂಧಿ ಕಿಡಿ!
Yogi Adityanath
SIR ಪ್ರಕ್ರಿಯೆ ಮುಕ್ತಾಯ: ರಾಜ್ಯಗಳಿಗೆ SSR ಆರಂಭಿಸಲು ಚುನಾವಣಾ ಆಯೋಗ ಸೂಚನೆ; ಡಿಸೆಂಬರ್ 1ಕ್ಕೆ ಕರಡು ಮತದಾರರ ಪಟ್ಟಿ ಪ್ರಕಟ..!

ನಮ್ಮ ದತ್ತಾಂಶವು ಧರ್ಮ, ಜಾತಿಯಂತಹ ಯಾವುದೇ ವಿವರಗಳನ್ನ ಒಳಗೊಂಡಿಲ್ಲ. ನಮ್ಮ ಮತದಾರರ ಪಟ್ಟಿಯನ್ನು ಬಳಸಿಕೊಂಡು ಈ ಅಂಶಗಳ ಆಧಾರದ ಮೇಲೆ ಧರ್ಮದ ವಿಶ್ಲೇಷಣೆ ನಡೆಸುವುದು ಅಸಾಧ್ಯ ಎಂದಿದ್ದಾರೆ.

ಮತದಾರರನ್ನು ಧರ್ಮ ಅಥವಾ ಜಾತಿಯ ಆಧಾರದ ಮೇಲೆ ವರ್ಗೀಕರಿಸುವ ಯಾವುದೇ ವಿಶ್ಲೇಷಣೆಯು, ಸಾರ್ವಜನಿಕವಾಗಿ ಲಭ್ಯವಿರುವ ಮತದಾರರ ಪಟ್ಟಿಗಳನ್ನು ಬಳಸಿಕೊಂಡು, ಹೆಸರುಗಳಿಂದ ಅಂತಹ ವಿವರಗಳನ್ನು ಗುರುತಿಸುವ ತಂತ್ರಾಂಶದ (ಸಾಫ್ಟ್‌ವೇರ್) ಮೂಲಕ ನಡೆಸಲಾದ ಸ್ವತಂತ್ರ ಮೌಲ್ಯಮಾಪನಗಳಾಗಿರಬಹುದು ಎಂದು ರಿನ್ವಾ ಅಭಿಪ್ರಾಯಪಟ್ಟರು.

ಎಸ್‌ಐಆರ್‌ ನಂತರ ನವೀಕರಿಸಿದ ಮತದಾರರ ಪಟ್ಟಿಗಳು ಪಿಡಿಎಫ್ ರೂಪದಲ್ಲಿ ಡೌನ್‌ಲೋಡ್ ಮಾಡಲು ಲಭ್ಯವಿದೆ. ವ್ಯಕ್ತಿಗಳು ಮತ್ತು ಸಂಸ್ಥೆಗಳು ಡೇಟಾವನ್ನ ಡೇಟಾಬೇಸ್‌ಗಳಾಗಿ ಪರಿವರ್ತಿಸಲು ಮತ್ತು ತಮ್ಮದೇ ಆದ ವಿಶ್ಲೇಷಣೆಯನ್ನ ನಡೆಸಲು ಅವಕಾಶ ನೀಡುತ್ತದೆ ಎಂದು ಅವರು ಗಮನಸೆಳೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X