ಆಜಂ ಖಾನ್ ವಿರುದ್ಧದ ಪ್ರಕರಣ: ಹೈಕೋರ್ಟ್ ತೀರ್ಪಿನ ವಿರುದ್ಧ ಉತ್ತರ ಪ್ರದೇಶ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಸುಪ್ರೀಂ ಕೋರ್ಟ್ ನಲ್ಲಿ ವಜಾ

ನ್ಯಾಯಮೂರ್ತಿಗಳಾದ ದೀಪಂಕರ್ ದತ್ತಾ ಮತ್ತು ಶೀಲ್ ನಾಗು ಅವರಿದ್ದ ಪೀಠ, ಇದೇ ರೀತಿಯ ಪರಿಹಾರವನ್ನು ನಿರಾಕರಿಸಿದ್ದನ್ನು ಪ್ರಶ್ನಿಸಿ ಎಸ್‌ಪಿ ನಾಯಕನ ಪತ್ನಿ ತಜೀನ್ ಫಾತ್ಮಾ ಮತ್ತು ಪುತ್ರ ಅಬ್ದುಲ್ಲಾ ಆಜಮ್ ಖಾನ್ ಅವರು ಸಲ್ಲಿಸಿದ್ದ ಮೇಲ್ಮನವಿಗಳನ್ನೂ ಪುರಸ್ಕರಿಸಿದೆ.
Azam Khan
ಆಜಂ ಖಾನ್ online desk
Updated on: 

ನಕಲಿ ಜನನ ಪ್ರಮಾಣಪತ್ರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ (ಎಸ್‌ಪಿ) ನಾಯಕ ಆಜಮ್ ಖಾನ್ ಅವರ ದೋಷಿ ತೀರ್ಪಿಗೆ ತಡೆ ನೀಡಿದ್ದ ಅಲಹಾಬಾದ್ ಹೈಕೋರ್ಟ್‌ನ ನಿರ್ಧಾರದ ವಿರುದ್ಧ ಉತ್ತರ ಪ್ರದೇಶ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಜಾಗೊಳಿಸಿದೆ.

ನ್ಯಾಯಮೂರ್ತಿಗಳಾದ ದೀಪಂಕರ್ ದತ್ತಾ ಮತ್ತು ಶೀಲ್ ನಾಗು ಅವರಿದ್ದ ಪೀಠ, ಇದೇ ರೀತಿಯ ಪರಿಹಾರವನ್ನು ನಿರಾಕರಿಸಿದ್ದನ್ನು ಪ್ರಶ್ನಿಸಿ ಎಸ್‌ಪಿ ನಾಯಕನ ಪತ್ನಿ ತಜೀನ್ ಫಾತ್ಮಾ ಮತ್ತು ಪುತ್ರ ಅಬ್ದುಲ್ಲಾ ಆಜಮ್ ಖಾನ್ ಅವರು ಸಲ್ಲಿಸಿದ್ದ ಮೇಲ್ಮನವಿಗಳನ್ನೂ ಪುರಸ್ಕರಿಸಿದೆ.

Azam Khan
ಮತ್ತೊಂದು ದ್ವೇಷ ಭಾಷಣ ಪ್ರಕರಣದಲ್ಲಿ ಆಜಂ ಖಾನ್ ದೋಷಿ: ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದ ಕೋರ್ಟ್!

ಪ್ರಾಸಿಕ್ಯೂಷನ್ ಪ್ರಕಾರ, ಈ ಪ್ರಕರಣ 2019ರ ಜನವರಿ 3ಕ್ಕೆ ಸಂಬಂಧಿಸಿದೆ. ರಾಂಪುರದ ಬಿಜೆಪಿ ಶಾಸಕರಾಗಿರುವ ಆಕಾಶ್ ಸಕ್ಸೇನಾ ಅವರು, ಆಜಮ್ ಖಾನ್ ಮತ್ತು ಅವರ ಪತ್ನಿ ತಮ್ಮ ಪುತ್ರ ಅಬ್ದುಲ್ಲಾ ಆಜಮ್ ಖಾನ್‌ಗಾಗಿ ಎರಡು ಜನನ ಪ್ರಮಾಣಪತ್ರಗಳನ್ನು ಮಾಡಿಸಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದರು.

ನಂತರ, ರಾಂಪುರ ಸೆಷನ್ಸ್ ನ್ಯಾಯಾಲಯ ಈ ಮೂವರನ್ನೂ ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್‌ಗಳಾದ 420 (ವಂಚನೆ), 467 (ಮೌಲ್ಯಯುತ ದಾಖಲೆಗಳನ್ನು ನಕಲಿ ಮಾಡುವುದು), 468 (ವಂಚಿಸುವ ಉದ್ದೇಶದಿಂದ ನಕಲಿ ದಾಖಲೆ ಸೃಷ್ಟಿಸುವುದು), 471 (ನಕಲಿ ದಾಖಲೆಯನ್ನು ಅಸಲಿ ಎಂದು ಬಳಸುವುದು), 472 (ನಕಲಿ ಮಾಡುವ ಉದ್ದೇಶದಿಂದ ನಕಲಿ ಮುದ್ರೆಗಳನ್ನು ತಯಾರಿಸುವುದು ಅಥವಾ ಹೊಂದಿರುವುದು) ಮತ್ತು 120(ಬಿ) (ಅಪರಾಧ ಸಂಚು) ಅಡಿಯಲ್ಲಿ ದೋಷಿಗಳೆಂದು ಪರಿಗಣಿಸಿ, ಮೂವರಿಗೂ ತಲಾ ಏಳು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X