ತಾಯಿ ನಿಧನ: ದುಃಖದಲ್ಲೂ ಕರ್ತವ್ಯ ಪೂರ್ಣಗೊಳಿಸಿದ CM ಯೋಗಿ ಆದಿತ್ಯನಾಥ್; ಪ್ರಧಾನಿ ಮೋದಿ ಸಾಂತ್ವನ!

ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಸಿಎಂ ಯೋಗಿ ಆದಿತ್ಯನಾಥ್ ಅವರ ತಾಯಿ ಸಾವಿತ್ರಿ ದೇವಿ ಅವರು ಇಂದು ಬೆಳಗ್ಗೆ ಪಂಚುರ್‌ನಲ್ಲಿ ಕೊನೆಯುಸಿರೆಳೆದರು. ಪೌರಿ ಜಿಲ್ಲಾಡಳಿತವು ಈ ಸಾವಿನ ಸುದ್ದಿಯನ್ನು ಖಚಿತಪಡಿಸಿದೆ.
Yogi Adityanath-PM Modi
ಪ್ರಧಾನಿ ಮೋದಿ-ಯೋಗಿ ಆದಿತ್ಯಾನಾಥ್
Updated on: 

ಗೋರಖ್‌ಪುರ/ಲಖನೌ: ಉತ್ತರಾಖಂಡದ ಪೌರಿ ಗರ್ವಾಲ್ ಜಿಲ್ಲೆಯ ಪಂಚುರ್ ಗ್ರಾಮದಲ್ಲಿರುವ ತಮ್ಮ ಪೂರ್ವಜರ ಮನೆಯಲ್ಲಿ, 91 ವರ್ಷದ ತಾಯಿ ಸಾವಿತ್ರಿ ದೇವಿ ನಿಧನರಾದ ಸುದ್ದಿ ತಿಳಿದಿದ್ದರೂ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಶುಕ್ರವಾರ ಗೋರಖ್‌ಪುರದಲ್ಲಿ ತಮ್ಮ ಅಧಿಕೃತ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ನಿರ್ಧರಿಸಿದರು.

ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಸಿಎಂ ಯೋಗಿ ಆದಿತ್ಯನಾಥ್ ಅವರ ತಾಯಿ ಸಾವಿತ್ರಿ ದೇವಿ ಅವರು ಇಂದು ಬೆಳಗ್ಗೆ ಪಂಚುರ್‌ನಲ್ಲಿ ಕೊನೆಯುಸಿರೆಳೆದರು. ಪೌರಿ ಜಿಲ್ಲಾಡಳಿತವು ಈ ಸಾವಿನ ಸುದ್ದಿಯನ್ನು ಖಚಿತಪಡಿಸಿದೆ.

ಆ ಸಮಯದಲ್ಲಿ, ಯೋಗಿ ಆದಿತ್ಯನಾಥ್ ಅವರು ಗೋರಖ್‌ಪುರದಲ್ಲಿ 'ಸ್ವಾಮಿ ವಿವೇಕಾನಂದ ಯುವ ಸಬಲೀಕರಣ ಯೋಜನೆ'ಯ ಅಡಿಯಲ್ಲಿ ಟ್ಯಾಬ್ಲೆಟ್‌ಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Yogi Adityanath-PM Modi
ನಾಳೆ ಪ್ರಧಾನಿ ಮೋದಿಯಿಂದ 'ನಿತೀಶ್ ಸೇತು' ಉದ್ಘಾಟನೆ

ಈ ಕಾರ್ಯಕ್ರಮದಲ್ಲಿ 50,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ತರಬೇತಿ ಪಡೆಯುತ್ತಿರುವವರು ಪಾಲ್ಗೊಂಡಿದ್ದರು.

ತಾಯಿ ಸಾವಿನ ದುಃಖದ ನಡುವೆಯೂ, ಮುಖ್ಯಮಂತ್ರಿಗಳು ಕಾರ್ಯಕ್ರಮವನ್ನು ಅರ್ಧಕ್ಕೆ ಬಿಟ್ಟು ಹೋಗಲಿಲ್ಲ; ಬದಲಾಗಿ, ತಮ್ಮ ಭಾಷಣವನ್ನು ಪೂರ್ಣಗೊಳಿಸಿ, ನಿಗದಿತ ಟ್ಯಾಬ್ಲೆಟ್ ವಿತರಣಾ ಕಾರ್ಯವನ್ನೂ ನೆರವೇರಿಸಿಕೊಟ್ಟರು.

ನಂತರ ಅವರು ಗೋರಖ್‌ನಾಥ ದೇವಸ್ಥಾನಕ್ಕೆ ತೆರಳಿದರು. ಅಲ್ಲಿಂದ ರಾಜ್ಯ ರಾಜಧಾನಿ ಲಖನೌಗೆ ಮರಳಿ, ಮಧ್ಯಾಹ್ನ ಉತ್ತರಾಖಂಡದ ಪಂಚುರ್ ಗ್ರಾಮಕ್ಕೆ ಪ್ರಯಾಣ ಬೆಳೆಸಿದರು.

ವೇದಿಕೆಯಲ್ಲಿದ್ದ ಮಾಜಿ ಐಎಎಸ್ ಅಧಿಕಾರಿ ಹಾಗೂ ಮುಖ್ಯಮಂತ್ರಿಯವರ ಸಲಹೆಗಾರ ಅವನೀಶ್ ಅವಸ್ಥಿ ಮತ್ತು ಗೋರಖ್‌ಪುರ ಸಂಸದ ರವಿ ಕಿಶನ್ ಅವರಿಗೆ ಮುಖ್ಯಮಂತ್ರಿಯವರ ತಾಯಿಯ ನಿಧನದ ಸುದ್ದಿ ಮೊದಲು ತಿಳಿಯಿತು ಎಂದು ಮೂಲಗಳು ತಿಳಿಸಿವೆ.

ಆ ಸಮಯದಲ್ಲಿ ಮುಖ್ಯಮಂತ್ರಿಗಳು ಸಭಿಕರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಭಾಷಣ ಮುಗಿಸುತ್ತಿದ್ದಂತೆ ಅವರಿಗೆ ಈ ವಿಷಯವನ್ನು ತಿಳಿಸಲಾಯಿತು.

ಈ ಸಂದರ್ಭದಲ್ಲಿ ಅವರು ಕ್ಷಣಕಾಲ ಮೌನವಾಗಿ ನಿಂತರು. ಆದರೂ, ಕಾರ್ಯಕ್ರಮದ ಸ್ಥಳದಿಂದ ತೆರಳುವ ಮೊದಲು, ವಿದ್ಯಾರ್ಥಿಗಳೊಂದಿಗೆ ನಿಗದಿಯಾಗಿದ್ದ ಸಂವಾದವನ್ನು ಅವರು ಮುಂದುವರಿಸಿದರು.

ಕರೆ ಮಾಡಿ ಸಾಂತ್ವನ ಹೇಳಿದ ಪ್ರಧಾನಿ ಮೋದಿ

ಸಾವಿತ್ರಿ ದೇವಿ ಅವರ ನಿಧನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ. ಸಿಎಂ ಯೋಗಿ ಆದಿತ್ಯನಾಥ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಪ್ರಧಾನಿ ಮೋದಿ, ಮಾತೃವಿಯೋಗದ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಸಾಂತ್ವನ ಹೇಳಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಷಾ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಸೇರಿದಂತೆ ಅನೇಕ ನಾಯಕರು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್​ ಹಂಚಿಕೊಳ್ಳುವ ಮೂಲಕ ಸಂತಾಪ ವ್ಯಕ್ತಪಡಿಸಿದ್ದು, ತಾಯಿಯ ಅಗಲಿಕೆಯು ಜೀವನದಲ್ಲಿ ಎಂದಿಗೂ ತುಂಬಲಾರದ ನಷ್ಟ ಮತ್ತು ಸಹಿಸಲಾಗದ ನೋವು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X