ದಿವ್ಯಾಗರ್ ಬೀಚ್‌ನಲ್ಲಿ ಭೀಕರ ದುರಂತ: ಸಮುದ್ರದ ಅಲೆಗಳಿಗೆ ಸಿಲುಕಿ ಕೊಚ್ಚಿ ಹೋದ 8 ವಿದ್ಯಾರ್ಥಿಗಳು!

25 ಹುಡುಗರು, 17 ಹುಡುಗಿಯರು ಮತ್ತು ಆರು ಶಿಕ್ಷಕರನ್ನೊಳಗೊಂಡ 48 ಜನರ ಗುಂಪು ಇಂದು ಸಂಜೆ 5:30ರ ಸುಮಾರಿಗೆ ಕಡಲತೀರಕ್ಕೆ ತೆರಳಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Eight Students From Pune Drown While Holidaying At Beach In Maharashtra's Raigad
ಸಮುದ್ರದ ಅಲೆಗಳಿಗೆ ಕೊಚ್ಚಿ ಹೋದ ಎಂಟು ವಿದ್ಯಾರ್ಥಿಗಳು
Updated on: 

ರಾಯಗಢ/ಮುಂಬೈ: ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ದಿವ್ಯಾಗರ್ ಕಡಲತೀರದಲ್ಲಿ ಗುರುವಾರ ಭೀಕರ ದುರಂತವೊಂದು ಸಂಭವಿಸಿದ್ದು, ಪ್ರವಾಸ ಬಂದಿದ್ದ ಎಂಟು ವಿದ್ಯಾರ್ಥಿಗಳು ಸಮುದ್ರದ ಪಾಲಾಗಿದ್ದಾರೆ.

ಪ್ರವಾಸ ಬಂದಿದ್ದ ಪುಣೆಯ ಎಂಟು ವಿದ್ಯಾರ್ಥಿಗಳು ಸಮುದ್ರದ ಪ್ರಬಲ ಅಲೆಗಳ ಸೆಳೆತಕ್ಕೆ ಸಿಲುಕಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮೃತಪಟ್ಟವರೆಲ್ಲರೂ 16 ವರ್ಷದವರಾಗಿದ್ದು, ಅವರ ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿದ್ಯಾರ್ಥಿಗಳು ಪುಣೆ ಜಿಲ್ಲೆಯ ಅಲಂದಿಯಲ್ಲಿರುವ 'ವಿನ್ನರ್ಸ್ ಅಕಾಡೆಮಿ' ಎಂಬ ಖಾಸಗಿ ತರಬೇತಿ ಕೇಂದ್ರದ ವಿದ್ಯಾರ್ಥಿಗಳಾಗಿದ್ದು, ಪ್ರವಾಸಕ್ಕಾಗಿ ಬಂದಿದ್ದರು ಎಂದು ಪೊಲೀಸರು ಹೇಳಿದ್ದಾರೆ.

25 ಹುಡುಗರು, 17 ಹುಡುಗಿಯರು ಮತ್ತು ಆರು ಶಿಕ್ಷಕರನ್ನೊಳಗೊಂಡ 48 ಜನರ ಗುಂಪು ಇಂದು ಸಂಜೆ 5:30ರ ಸುಮಾರಿಗೆ ಕಡಲತೀರಕ್ಕೆ ತೆರಳಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿದ್ಯಾರ್ಥಿಗಳು ಸಮುದ್ರಕ್ಕಿಳಿದಾಗ, ನೀರಿನ ಆಳ ಮತ್ತು ಪ್ರವಾಹದ ವೇಗವನ್ನು ಸರಿಯಾಗಿ ಅಂದಾಜಿಸಲು ಸಾಧ್ಯವಾಗದೆ ನೀರಿನ ಸೆಳೆತಕ್ಕೆ ಸಿಲುಕಿ ಎಂಟು ವಿದ್ಯಾರ್ಥಿಗಳು ಕೊಚ್ಚಿಹೋದರು ಎಂದು ಅವರು ವಿವರಿಸಿದ್ದಾರೆ.

Eight Students From Pune Drown While Holidaying At Beach In Maharashtra's Raigad
ಬಾಯ್ಲರ್‌ ಸ್ಫೋಟ: ಮಂಗಳೂರಿನ MRPLನಿಂದ ಮೃತ ಕಾರ್ಮಿಕನ ಕುಟುಂಬಕ್ಕೆ 1.2 ಕೋಟಿ ರೂ ಪರಿಹಾರ ಘೋಷಣೆ

ಘಟನೆಗೆ ತಕ್ಷಣವೇ ಸ್ಪಂದಿಸಿದ ದಿವ್ಯಾಗರ್‌ನ 'ಭಾವು ಮಾರುತಿ ಸಾಳುಂಖೆ ಮಹಾಕಾಳಿ ವಾಟರ್ ಸ್ಪೋರ್ಟ್ಸ್'ನ ಮಾಲೀಕ ಭಾವು ಸಾಳುಂಖೆ ಮತ್ತು ಅವರ ತಂಡವು ತಕ್ಷಣವೇ ರಕ್ಷಣಾ ಕಾರ್ಯಾಚರಣೆ ಕೈಗೊಂಡಿತು. ತಮ್ಮ ಪ್ರಾಣವನ್ನೂ ಲೆಕ್ಕಿಸದೆ, ವಾಟರ್ ಸ್ಪೋರ್ಟ್ಸ್ ತಂಡವು ಸಮುದ್ರದಿಂದ ಎಂಟು ವಿದ್ಯಾರ್ಥಿಗಳ ಮೃತರ ದೇಹಗಳನ್ನು ಹೊರತೆಗೆಯುವಲ್ಲಿ ಯಶಸ್ವಿಯಾಯಿತು ಎಂದು ಅವರು ತಿಳಿಸಿದ್ದಾರೆ.

ದುರಂತದ ಬಗ್ಗೆ ಮಾಹಿತಿ ಪಡೆದ ಕೂಡಲೇ, ದಿಘಿ ಸಾಗರಿ ಬೋರ್ಲಿ ಪಂಚತನ್ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ (API) ಸಂತೋಷ್ ಅವತಿ ಅವರು ತಮ್ಮ ತಂಡದೊಂದಿಗೆ ಸ್ಥಳಕ್ಕೆ ಧಾವಿಸಿದರು. ಸ್ಥಳೀಯ ಗ್ರಾಮಸ್ಥರ ಸಹಾಯದಿಂದ ಪೊಲೀಸರು ಮೃತದೇಹಗಳನ್ನು ವಶಕ್ಕೆ ಪಡೆದು, ಮರಣೋತ್ತರ ಪರೀಕ್ಷೆ ಹಾಗೂ ಅಗತ್ಯ ಕಾನೂನು ಪ್ರಕ್ರಿಯೆಗಳಿಗಾಗಿ ಬೋರ್ಲಿ ಪಂಚತನ್‌ನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ(PHC) ರವಾನಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com