ಉತ್ತರ ಪ್ರದೇಶದಿಂದ ರಾಜ್ಯಸಭೆಗೆ ಚುನಾವಣೆ: BJP ಅಭ್ಯರ್ಥಿಗಳ ಪಟ್ಟಿ ಪ್ರಕಟ; ಕೇಂದ್ರ ಸಚಿವ ಹರ್ದೀಪ್ ಪುರಿಗೆ ಕೊಕ್!

ರಾಜ್ಯದಲ್ಲಿ ಅಕ್ಟೋಬರ್ 16 ರಂದು ಹತ್ತು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಬಿಜೆಪಿ ಏಳು ಸ್ಥಾನಗಳನ್ನು ಖಚಿತವಾಗಿ ಗೆಲ್ಲಲಿದ್ದು, ಎಂಟನೇ ಸ್ಥಾನವನ್ನೂ ಗೆಲ್ಲಲು ಪ್ರಯತ್ನಿಸುತ್ತಿದೆ.
Oil Minister Hardeep Puri
ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ
Updated on: 

ಲಖನೌ: ಅಕ್ಟೋಬರ್ 16 ರಂದು ಉತ್ತರ ಪ್ರದೇಶ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯಲಿರುವ ಚುನಾವಣೆಗೆ ಬಿಜೆಪಿ ಎಂಟು ಅಭ್ಯರ್ಥಿಗಳ ಹೆಸರನ್ನು ಸೋಮವಾರ ಘೋಷಿಸಿದೆ

ಬಿಜೆಪಿ ಅಭ್ಯರ್ಥಿಯಾಗಲಿದ್ದಾರೆ ಎಂದು ನಿರೀಕ್ಷಿಸಲಾಗಿದ್ದ ಕೇಂದ್ರ ಸಚಿವ ಹರ್ದೀಪ್ ಪುರಿ ಅವರ ಹೆಸರು ಈ ಪಟ್ಟಿಯಲ್ಲಿಲ್ಲ. ಇದು ಕೇಂದ್ರ ಮಟ್ಟದಲ್ಲಿಯೂ ಕೆಲವು ಬದಲಾವಣೆಗಳಾಗುವ ಸಾಧ್ಯತೆಯನ್ನು ಸೂಚಿಸುತ್ತದೆ.

ಘೋಷಿಸಲಾದ ಅಭ್ಯರ್ಥಿಗಳಲ್ಲಿ ಸಚಿವ ಧರಂಪಾಲ್ ಸಿಂಗ್, ರಾಧಾಕಾಂತ್ ಓಜಾ, ಪ್ರಕಾಶ್ ಪಾಲ್, ಮಾಜಿ ಎಂಎಲ್‌ಸಿ ವಿದ್ಯಾಸಾಗರ್ ಸೋಂಕರ್, ಗೋಪಿ ಕೃಷ್ಣ ಪಾಂಡೆ, ರಾಮ್ ಪ್ರತಾಪ್ ಸಿಂಗ್ ಚೌಹಾಣ್, ಮಾಜಿ ಲೋಕಸಭಾ ಸಂಸದೆ ಪ್ರಿಯಾಂಕಾ ಸಿಂಗ್ ರಾವತ್ ಮತ್ತು ಜಾರ್ಖಂಡ್ ರಾಜ್ಯಪಾಲ ಸಂತೋಷ್ ಗಂಗ್ವಾರ್ ಅವರ ಪುತ್ರಿ ಶ್ರುತಿ ಗಂಗ್ವಾರ್ ಸೇರಿದ್ದಾರೆ.

Oil Minister Hardeep Puri
ಗೆದ್ದಾಗ ಒಂದು ಲೆಕ್ಕ, ಸೋತಾಗ ಮತ್ತೊಂದು ಲೆಕ್ಕ: ರಾಹುಲ್ ಆರೋಪಗಳಿಗೆ 12 ರಾಜ್ಯಗಳ ಸಿಎಂಗಳನ್ನೇ ರಂಗಕ್ಕಿಳಿಸಿದ ಬಿಜೆಪಿ!

ರಾಜ್ಯದಲ್ಲಿ ಅಕ್ಟೋಬರ್ 16 ರಂದು ಹತ್ತು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಬಿಜೆಪಿ ಏಳು ಸ್ಥಾನಗಳನ್ನು ಖಚಿತವಾಗಿ ಗೆಲ್ಲಲಿದ್ದು, ಎಂಟನೇ ಸ್ಥಾನವನ್ನೂ ಗೆಲ್ಲಲು ಪ್ರಯತ್ನಿಸುತ್ತಿದೆ.

"ಇಂದು ಘೋಷಿಸಲಾದ ಎಲ್ಲಾ ಅಭ್ಯರ್ಥಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು. ಪ್ರತಿಯೊಬ್ಬರಿಗೂ ಐತಿಹಾಸಿಕ ಗೆಲುವು ಸಿಗಲಿ ಎಂದು ಹಾರೈಸುತ್ತೇನೆ" ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ 'ಎಕ್ಸ್' (X) ನಲ್ಲಿ ಪೋಸ್ಟ್ ಮಾಡಿದ್ದಾರೆ.

ಬಿಜೆಪಿಯ ಈ ಪಟ್ಟಿಯಲ್ಲಿ ಹಿಂದುಳಿದ ವರ್ಗಗಳು, ದಲಿತರು ಮತ್ತು ಬ್ರಾಹ್ಮಣರಿಗೆ ಪ್ರಾತಿನಿಧ್ಯ ನೀಡಲಾಗಿದೆ.

ಸಚಿವ ಧರಂಪಾಲ್ ಸಿಂಗ್ ಅವರು ಲೋಧ್ ಸಮುದಾಯಕ್ಕೆ ಸೇರಿದವರು. ರಾಮಾಕಾಂತ್ ಓಜಾ ಮತ್ತು ಗೋಪಿ ಕೃಷ್ಣ ಪಾಂಡೆ ಅವರು ಬ್ರಾಹ್ಮಣ ಸಮುದಾಯವನ್ನು ಪ್ರತಿನಿಧಿಸುತ್ತಾರೆ.

ಪ್ರಕಾಶ್ ಪಾಲ್ ಅವರು ಉತ್ತರ ಪ್ರದೇಶದಲ್ಲಿ ಪಕ್ಷದ ಒಬಿಸಿ (OBC) ಮೋರ್ಚಾದ ಅಧ್ಯಕ್ಷರಾಗಿದ್ದಾರೆ ಮತ್ತು ಶ್ರುತಿ ಗಂಗ್ವಾರ್ ಕೂಡ ಒಬಿಸಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ.

ವಿದ್ಯಾಸಾಗರ್ ಸೋಂಕರ್ ಮತ್ತು ಪ್ರಿಯಾಂಕಾ ರಾವತ್ ಅವರು ದಲಿತ ಸಮುದಾಯಕ್ಕೆ ಸೇರಿದವರಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com