ಪಶ್ಚಿಮ ಬಂಗಾಳ ಉಪ ಚುನಾವಣೆ: ಪೊಲೀಸರೊಂದಿಗೆ ಮಾತಿನ ಚಕಮಕಿ: ಶಾಸಕ ಹುಮಾಯೂನ್ ಕಬೀರ್ ಬಂಧನ

ಪಶ್ಚಿಮ ಬಂಗಾಳದ ನಂದಿಗ್ರಾಮ ಮತ್ತು ರೇಜಿನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಇಂದು ಉಪ ಚುನಾವಣೆ ನಡೆಯುತ್ತಿದೆ.
Humayun Kabir
ಹುಮಾಯೂನ್ ಕಬೀರ್
Updated on: 

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಉಪಚುನಾವಣೆ ಮಂಗಳವಾರ ಉದ್ವಿಗ್ನ ವಾತಾವರಣದಲ್ಲಿ ಆರಂಭವಾಗಿದ್ದು, ಪೊಲೀಸರೊಂದಿಗೆ ಮಾತಿನ ಚಕಮಕಿಯ ನಂತರ ರೆಜಿನಗರದಲ್ಲಿ ಎಜೆಯುಪಿ(AJUP) ಮುಖ್ಯಸ್ಥ ಹಾಗೂ ಶಾಸಕ ಹುಮಾಯೂನ್ ಕಬೀರ್ ಅವರನ್ನು ಬಂಧಿಸಲಾಗಿದೆ.

ಪಶ್ಚಿಮ ಬಂಗಾಳದ ನಂದಿಗ್ರಾಮ ಮತ್ತು ರೇಜಿನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಇಂದು ಉಪ ಚುನಾವಣೆ ನಡೆಯುತ್ತಿದೆ. ನಂದಿಗ್ರಾಮದಲ್ಲಿ ಮತದಾರರಿಗೆ ಬೆದರಿಕೆ ಹಾಕಿದ ಹಾಗೂ ಮತದಾನದಲ್ಲಿ ಅಕ್ರಮ ನಡೆದಿರುವ ಆರೋಪಗಳು ಕೇಳಿಬಂದಿದೆ. ಇದರಿಂದಾಗಿ ರಾಜಕೀಯವಾಗಿ ಸೂಕ್ಷ್ಮವಾಗಿರುವ ಈ ಎರಡೂ ಕ್ಷೇತ್ರಗಳಲ್ಲಿನ ಕಾನೂನು-ಸುವ್ಯವಸ್ಥೆಯ ಪರಿಸ್ಥಿತಿ ತೀವ್ರ ಗಮನ ಸೆಳೆದಿದೆ.

ಮುರ್ಷಿದಾಬಾದ್‌ನ ರೆಜಿನಗರದಲ್ಲಿರುವ ತಮ್ಮ ಪಕ್ಷದ ಕಚೇರಿಯಲ್ಲಿ ಪೊಲೀಸ್ ಸಿಬ್ಬಂದಿಯೊಂದಿಗೆ ತೀವ್ರ ವಾಗ್ವಾದ ನಡೆಸಿದ ಕಬೀರ್ ಅವರನ್ನು ಬಂಧಿಸಲಾಗಿದೆ.

Humayun Kabir
ಬಂಗಾಳ Bypoll, ಕ್ಷಣಕ್ಕೊಂದು ತಿರುವು: ನಾಮಪತ್ರ ಹಿಂತೆಗೆತ ಘೋಷಿಸಿದ್ದ ರೆಜಿನಗರ್ ಟಿಎಂಸಿ ಅಭ್ಯರ್ಥಿ ಆಲಂ ಚೌಧರಿ ಯು-ಟರ್ನ್!

ತನ್ನ ನಿವಾಸ ಹಾಗೂ ಮತಗಟ್ಟೆಯ ಬಳಿ ಪೊಲೀಸರನ್ನು ನಿಯೋಜಿಸಿರುವ ವಿಚಾರವಾಗಿ ಪೊಲೀಸರ ವಿರುದ್ಧ ವಾಗ್ದಾಳಿ ನಡೆಸಿದ್ದ ಹುಮಾಯೂನ್ ಕಬೀರ್ ಅವರು, ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರ ಸೂಚನೆಯ ಮೇರೆಗೆ ಪೊಲೀಸರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಅಲ್ಲದೆ ಪೊಲೀಸ್ ದೌರ್ಜನ್ಯವನ್ನು ವಿರೋಧಿಸುವಂತೆ ನಿವಾಸಿಗಳಿಗೆ ಕರೆ ನೀಡಿದ ಕೆಲವೇ ಗಂಟೆಗಳಲ್ಲಿ ಕಬೀರ್ ಅವರನ್ನು ಬಂಧಿಸಲಾಗಿದೆ.

ಕಬೀರ್ ಅವರ ಪುತ್ರ ಗೋಲಂ ನಬಿ ಆಜಾದ್ ಅವರು ಎಜೆಯುಪಿ ಅಭ್ಯರ್ಥಿಯಾಗಿ ರೆಜಿನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ರೇಜಿನಗರದಲ್ಲಿ ಮತ ಚಲಾಯಿಸಿದ ಬೆನ್ನಲ್ಲೆ ಕಬೀರ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com