ಉತ್ತರ ಪ್ರದೇಶ ಚುನಾವಣೆಗೂ ಮುನ್ನ ಅಖಿಲೇಶ್ ಯಾದವ್'ಗೆ ಬಿಗ್ ಶಾಕ್; BJP ಸೇರಲಿದ್ದಾರೆ SPಯ ಮೂವರು ಶಾಸಕರು!

ಎಸ್ ಪಿ ಶಾಸಕರಾದ ರಾಕೇಶ್ ಪ್ರತಾಪ್ ಸಿಂಗ್, ಅಭಯ್ ಸಿಂಗ್ ಮತ್ತು ವಿನೋದ್ ಚತುರ್ವೇದಿ ಅವರು ಬಿಜೆಪಿ ಸೇರಲು ಮುಂದಾಗಿದ್ದಾರೆ.
3 rebel SP MLAs set to join BJP on Oct 14 in big jolt to Akhilesh Yadav ahead of UP Assembly elections
ಎಸ್ ಪಿ ಶಾಸಕರಾದ ರಾಕೇಶ್ ಪ್ರತಾಪ್ ಸಿಂಗ್, ಅಭಯ್ ಸಿಂಗ್ ಮತ್ತು ವಿನೋದ್ ಚತುರ್ವೇದಿ
Updated on: 

ಅಮೇಥಿ: ಮುಂದಿನ ವರ್ಷದ ಆರಂಭದಲ್ಲಿ ನಡೆಯುವ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಗೂ ಮುನ್ನವೇ ಸಮಾಜವಾದಿ ಪಕ್ಷದ(SP) ಮುಖ್ಯಸ್ಥ ಅಖಿಲೇಶ್ ಯಾದವ್ ಅವರಿಗೆ ಭಾರೀ ಹಿನ್ನಡೆಯಾಗಿದ್ದು, ಅವರ ಪಕ್ಷದ ಮೂವರು ಬಂಡಾಯ ಶಾಸಕರು ಅಕ್ಟೋಬರ್ 14 ರಂದು ಅಮೇಥಿಯ ಗೌರಿಗಂಜ್‌ನಲ್ಲಿ ಭಾರತೀಯ ಜನತಾ ಪಕ್ಷವನ್ನು ಅಧಿಕೃತವಾಗಿ ಸೇರಲು ನಿರ್ಧರಿಸಿದ್ದಾರೆ.

ಇದು ಅಖಿಲೇಶ್ ಯಾದವ್ ಅವರಿಗೆ ದೊಡ್ಡ ರಾಜಕೀಯ ಸವಾಲಾಗಿ ಪರಿಣಿಮಿಸಿದೆ. ಎಸ್ ಪಿ ಶಾಸಕರಾದ ರಾಕೇಶ್ ಪ್ರತಾಪ್ ಸಿಂಗ್, ಅಭಯ್ ಸಿಂಗ್ ಮತ್ತು ವಿನೋದ್ ಚತುರ್ವೇದಿ ಅವರು ಬಿಜೆಪಿ ಸೇರಲು ಮುಂದಾಗಿದ್ದಾರೆ.

ಲಭ್ಯವಿರುವ ಮಾಹಿತಿಯ ಪ್ರಕಾರ, ಗೌರಿಗಂಜ್‌ನಲ್ಲಿ ನಡೆಯಲಿರುವ ಬೃಹತ್ ಕಾರ್ಯಕ್ರಮವೊಂದರಲ್ಲಿ ಈ ಮೂವರು ಶಾಸಕರು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ.

3 rebel SP MLAs set to join BJP on Oct 14 in big jolt to Akhilesh Yadav ahead of UP Assembly elections
ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಈ ಮೂವರು ನಾಯಕರು ಕಳೆದ ರಾಜ್ಯಸಭಾ ಚುನಾವಣೆಯ ಸಮಯದಲ್ಲಿ ಪಕ್ಷದ ನಿಲುವಿಗೆ ವಿರುದ್ಧವಾಗಿ ಮತ ಚಲಾಯಿಸಿದ್ದರು(ಕ್ರಾಸ್-ವೋಟಿಂಗ್).

2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ದೃಷ್ಟಿಯಿಂದ ಇವರ ಬಿಜೆಪಿ ಸೇರ್ಪಡೆಯು ಮಹತ್ವದ ಬೆಳವಣಿಗೆಯಾಗಿ ನೋಡಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com