ಕೇರಳಂ: ಕಾಶಿ ಕೆಫೆಯಲ್ಲಿ ಗೋಮಾಂಸ... ಗಾಂಧಿ ಪ್ರತಿಮೆ ಪಕ್ಕದಲ್ಲಿ ಜಿನ್ನಾ; Youtuber ವಿರುದ್ಧ ಕೆರಳಿದ UDF ಸರ್ಕಾರ, FIR

ಕೇರಳದ ಫೋರ್ಟ್ ಕೊಚ್ಚಿಯಲ್ಲಿರುವ "ಕಾಶಿ ಆರ್ಟ್ ಕೆಫೆ" ಬಗ್ಗೆ ವಿವಾದ ಭುಗಿಲೆದ್ದಿದೆ. ಕೆಫೆಯ ಬಗ್ಗೆ Youtuber ಮಾಡಿದ ವಿಡಿಯೋ ಕಾಣಿಸಿಕೊಂಡ ನಂತರ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಮುಖ್ಯಮಂತ್ರಿ ವಿ.ಡಿ. ಸತೀಸನ್ ವಿಡಿಯೋವನ್ನು ಟೀಕಿಸಿದ್ದಾರೆ.
YouTuber Amrit Singh Darren
ಯೂಟ್ಯೂಬರ್ ಅಮೃತ್ ಸಿಂಗ್ ಡ್ಯಾರೆನ್
Updated on: 

ಕೇರಳದ ಫೋರ್ಟ್ ಕೊಚ್ಚಿಯಲ್ಲಿರುವ "ಕಾಶಿ ಆರ್ಟ್ ಕೆಫೆ" ಬಗ್ಗೆ ವಿವಾದ ಭುಗಿಲೆದ್ದಿದೆ. ಕೆಫೆಯ ಬಗ್ಗೆ Youtuber ಮಾಡಿದ ವಿಡಿಯೋ ಕಾಣಿಸಿಕೊಂಡ ನಂತರ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಮುಖ್ಯಮಂತ್ರಿ ವಿ.ಡಿ. ಸತೀಸನ್ ವಿಡಿಯೋವನ್ನು ಟೀಕಿಸಿದರೆ, ಬಿಜೆಪಿ ಅಧ್ಯಕ್ಷ ರಾಜೀವ್ ಚಂದ್ರಶೇಖರ್ ಸಿಎಂ 'ಆಯ್ದ ಜಾತ್ಯತೀತತೆಯನ್ನು' ಪಾಲಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಕಾಶಿ ಕೆಫೆಯಲ್ಲಿ ಗೋಮಾಂಸವನ್ನು ಬಡಿಸಲಾಗುತ್ತಿದೆ ಎಂದು ವ್ಲಾಗರ್ ಅಮೃತ್ ಸಿಂಗ್ ಡ್ಯಾರೆನ್ ವಿಡಿಯೋವನ್ನು ಹಂಚಿಕೊಂಡಿದ್ದನು. ಅಲ್ಲದೆ ಕೆಫೆಯಲ್ಲಿ ಮಹಾತ್ಮ ಗಾಂಧಿ ಜೊತೆಗೆ ಪಾಕಿಸ್ತಾನದ ಮುಹಮ್ಮದ್ ಅಲಿ ಜಿನ್ನಾ ಪ್ರತಿಮೆಯನ್ನು ಸಹ ಹಾಕಲಾಗಿದೆ. ಕೆಫೆಯ ಸುತ್ತಲೂ ಹೆಚ್ಚಿನ ಮುಸ್ಲಿಂ ಜನಸಂಖ್ಯೆ ಇದೆ ಎಂದು ಹೇಳಿಕೊಂಡು ಅವರು ಪ್ರದೇಶದ ಬಗ್ಗೆಯೂ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಫೋರ್ಟ್ ಕೊಚ್ಚಿ ಪೊಲೀಸರು ಸ್ಥಳೀಯ ನಿವಾಸಿಯ ದೂರಿನ ಆಧಾರದ ಮೇಲೆ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 353(2) ಮತ್ತು 192ರ ಅಡಿಯಲ್ಲಿ ವ್ಲಾಗರ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರ ಪ್ರಕಾರ, ವೀಡಿಯೊದಲ್ಲಿ ಮಾಡಲಾದ ಆಪಾದಿತ ಕಾಮೆಂಟ್‌ಗಳು ಎರಡು ಧಾರ್ಮಿಕ ಸಮುದಾಯಗಳ ನಡುವೆ ಉದ್ವಿಗ್ನತೆಯನ್ನು ಉಂಟುಮಾಡುವ ಸಾಧ್ಯತೆಯಿದೆ.

ಅಮೃತ್ ಸಿಂಗ್ ಡ್ಯಾರೆನ್ ಈ ವೀಡಿಯೊವನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಅದರಲ್ಲಿ ಕಾಶಿ ಆರ್ಟ್ ಕೆಫೆಯ ಹೆಸರನ್ನು ಅವರು ಪ್ರಶ್ನಿಸಿದ್ದು ಹಿಂದೂಗಳ ಪವಿತ್ರ ನಗರವಾದ ಕಾಶಿಯ ಹೆಸರಿನ ಈ ಕೆಫೆಯಲ್ಲಿ ಗೋಮಾಂಸವನ್ನು ಬಡಿಸಲಾಗುತ್ತದೆ ಎಂದು ಆರೋಪಿಸಿದ್ದರು. ಮಹಾತ್ಮ ಗಾಂಧಿ ಜೊತೆಗೆ ಜಿನ್ನಾ ಅವರ ಬೆಳ್ಳಿಯ ಪ್ರತಿಮೆ ಇದೆ. ಆದಾಗ್ಯೂ, ಗಾಂಧಿ ಮತ್ತು ಜಿನ್ನಾ ಅವರನ್ನು ಒಟ್ಟಿಗೆ ಚಿತ್ರಿಸುವ ಕಲಾಕೃತಿಯನ್ನು ಹಲವಾರು ವರ್ಷಗಳ ಹಿಂದೆ ಕಲಾವಿದ ರಿಯಾಸ್ ಕೋಮು ರಚಿಸಿದ್ದರು. ಇದು ಇಬ್ಬರೂ ನಾಯಕರ ಇತಿಹಾಸ, ವಿದೇಶಿ ಆಡಳಿತದ ವಿರುದ್ಧದ ಹೋರಾಟ ಮತ್ತು ದೇಶದ ವಿಭಜನೆಯನ್ನು ಚಿತ್ರಿಸುತ್ತದೆ.

YouTuber Amrit Singh Darren
'ಮೋದಿ ಏನ್ ಅವರ ಅಪ್ಪನೂ ಹೋಗ್ತಾರೆ': ಪಾಟ್ನಾ ಕಾರ್ಯಕ್ರಮದಲ್ಲಿ ಖರ್ಗೆ ವಿವಾದಾತ್ಮಕ ಹೇಳಿಕೆ; ಭುಗಿಲೆದ್ದ ಆಕ್ರೋಶ, Video

ವಿಡಿಯೋ ವೈರಲ್ ಆದ ನಂತರ ಕೇರಳಿಗರು ಇದನ್ನು ಸಾಮಾಜಿಕ ಮಾಧ್ಯಮದಲ್ಲಿ ಟೀಕಿಸಿದ್ದರು. ಅನೇಕರು ವ್ಲಾಗರ್ ಅವರ ಕಾಮೆಂಟ್‌ಗಳಿಗೆ ಆಕ್ಷೇಪ ವ್ಯಕ್ತಪಡಿಸಿದರು. ನಂತರ, ಈ ವಿಷಯವನ್ನು ಪೊಲೀಸರ ಗಮನಕ್ಕೆ ತರಲಾಯಿತು.

ಮುಖ್ಯಮಂತ್ರಿ ವಿ.ಡಿ. ಸತೀಸನ್ ವೀಡಿಯೊವನ್ನು ಟೀಕಿಸಿದರು. ರಾಜ್ಯದ ಹೊರಗಿನ ವ್ಲಾಗರ್ ಒಬ್ಬರು ಕೇರಳದ ಪ್ರತಿಷ್ಠೆಯನ್ನು ಹಾಳು ಮಾಡಲು ಮತ್ತು ತಪ್ಪು ಮಾಹಿತಿಯನ್ನು ಹರಡುವ ಮೂಲಕ ಸಮುದಾಯಗಳ ನಡುವೆ ಉದ್ವಿಗ್ನತೆಯನ್ನು ಸೃಷ್ಟಿಸಲು ಪ್ರಯತ್ನಿಸಿದರು ಎಂದು ಆರೋಪಿಸಿದರು. ಪ್ರಕರಣ ದಾಖಲಾಗಿದ್ದು, ಕಾನೂನು ತನ್ನ ಕ್ರಮ ಕೈಗೊಳ್ಳುತ್ತದೆ ಎಂದರು. ಕೋಮು ಸಾಮರಸ್ಯವನ್ನು ಕಾಪಾಡಿಕೊಳ್ಳುವ ಬದ್ಧತೆಯನ್ನು ಅವರು ವ್ಯಕ್ತಪಡಿಸಿದರು. ವಿಡಿಯೋದಲ್ಲಿ ಮಾಡಲಾದ ಕೋಮು ಹೇಳಿಕೆಗಳನ್ನು ವಿರೋಧ ಪಕ್ಷದ ನಾಯಕ ಪಿಣರಾಯಿ ವಿಜಯನ್ ಕೂಡ ಟೀಕಿಸಿದರು.

ಏತನ್ಮಧ್ಯೆ, ಕೇರಳ ಗೃಹ ಸಚಿವ ರಮೇಶ್ ಚೆನ್ನಿತ್ತಲ ಅವರು ರಾಜ್ಯವು ಕೋಮು ದ್ವೇಷದ ತಾಣವಾಗಲು ಬಿಡುವುದಿಲ್ಲ ಎಂದು ಹೇಳಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯ ಎಂದರೆ ಜನರಲ್ಲಿ ಧಾರ್ಮಿಕ ದ್ವೇಷವನ್ನು ಹರಡಲು ಪರವಾನಗಿ ಎಂದರ್ಥವಲ್ಲ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com