'ಜಿರಳೆಗಳ ಸಂತತಿ ಬೆಳೆಯಲು ಬಿಡಬೇಡಿ': CJP ವಿರುದ್ಧ ಪಶ್ಚಿಮ ಬಂಗಾಳದ ಸಿಎಂ ಸುವೇಂದು ಅಧಿಕಾರಿ ಕಿಡಿ

'ಬಂಗಾಳದ ಹಿಂದಿನ ಸರ್ಕಾರಕ್ಕೆ ರಾಷ್ಟ್ರೀಯತೆಯ ಬಗ್ಗೆ ಯಾವುದೇ ಅರಿವಿರಲಿಲ್ಲ, ಅದು ಓಲೈಕೆ ರಾಜಕಾರಣದಲ್ಲಿ ತೊಡಗಿತ್ತು ಮತ್ತು ರಾಜ್ಯವನ್ನು 'ಬೃಹತ್ ಬಾಂಗ್ಲಾದೇಶ'ವನ್ನಾಗಿ ಪರಿವರ್ತಿಸಲು ಯೋಜನೆ ರೂಪಿಸಿತ್ತು' ಎಂದು ದೂರಿದರು.
West Bengal CM Suvendu Adhikari
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ
Updated on: 

ಪ್ರಧಾನಿ ನರೇಂದ್ರ ಮೋದಿ ಅವರ ಬೆಂಬಲಕ್ಕೆ ನಿಲ್ಲುವಂತೆ ಜನರಿಗೆ ಕರೆ ನೀಡಿದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ, 'ಕಾಕ್ರೋಚ್ ಜನತಾ ಪಾರ್ಟಿ' (CJP), 'ದಿಮಾಗಿ ನಕ್ಸಲ್' ಮತ್ತು 'ತುಕ್ಡೆ ತುಕ್ಡೆ' ಗ್ಯಾಂಗ್‌ಗಳನ್ನು ತೀವ್ರವಾಗಿ ಟೀಕಿಸಿದರು.

'ಪ್ರಧಾನಿ ಮೋದಿ ಅವರ ಬೆಂಬಲಕ್ಕೆ ನಿಲ್ಲಿ; 'ದಿಮಾಗಿ ನಕ್ಸಲ್'ಗಳು, 'ತುಕ್ಡೆ ತುಕ್ಡೆ' ಗ್ಯಾಂಗ್ ಮತ್ತು ಜಿರಳೆಗಳ (ಕಾಕ್ರೋಚ್‌ಗಳ) ಸಂತತಿ ಬೆಳೆಯಲು ಬಿಡಬೇಡಿ' ಎಂದು ಅಧಿಕಾರಿ ಹೇಳಿದರು. CJP ಪ್ರಭಾವವನ್ನು ಕೀಟಗಳು ಮತ್ತು ಕೊರೊನಾವೈರಸ್ ಹರಡುವಿಕೆಗೆ ಹೋಲಿಸಿದ ಮರುದಿನವೇ, ಅವರು ತಮ್ಮ ಟೀಕೆಯನ್ನು ಇನ್ನಷ್ಟು ತೀವ್ರಗೊಳಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, 'ಬಂಗಾಳದ ಹಿಂದಿನ ಸರ್ಕಾರಕ್ಕೆ ರಾಷ್ಟ್ರೀಯತೆಯ ಬಗ್ಗೆ ಯಾವುದೇ ಅರಿವಿರಲಿಲ್ಲ, ಅದು ಓಲೈಕೆ ರಾಜಕಾರಣದಲ್ಲಿ ತೊಡಗಿತ್ತು ಮತ್ತು ರಾಜ್ಯವನ್ನು 'ಬೃಹತ್ ಬಾಂಗ್ಲಾದೇಶ'ವನ್ನಾಗಿ ಪರಿವರ್ತಿಸಲು ಯೋಜನೆ ರೂಪಿಸಿತ್ತು. ಅದಕ್ಕಾಗಿಯೇ ಅವರು ರಾಜ್ಯಕ್ಕಾಗಿ ಪ್ರತ್ಯೇಕ ಗೀತೆಯನ್ನು ರಚಿಸಿದ್ದರು, ಧ್ವಜವೊಂದನ್ನು ವಿನ್ಯಾಸಗೊಳಿಸಿದ್ದರು ಮತ್ತು ಬಾಂಗ್ಲಾದೇಶದ 'ಜೋಯ್ ಬಾಂಗ್ಲಾ' ಘೋಷಣೆಯನ್ನು ಅಳವಡಿಸಿಕೊಂಡಿದ್ದರು' ಎಂದು ಹೇಳಿದರು.

ಭಾನುವಾರ ರಾಮನಗರದಲ್ಲಿ ಮಾತನಾಡಿದ ಅಧಿಕಾರಿ, ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯತೆಯನ್ನು ಬಿತ್ತುವ ಸಲುವಾಗಿ ಶೈಕ್ಷಣಿಕ ಸಂಸ್ಥೆಗಳಲ್ಲಿ ಪ್ರತಿ ವರ್ಷ ಭಾಷಣ, ರಸಪ್ರಶ್ನೆ ಮತ್ತು ಚರ್ಚಾ ಸ್ಪರ್ಧೆಗಳನ್ನು ಆಯೋಜಿಸುವಂತೆ ಕರೆ ನೀಡಿದರು ಎಂದು ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ.

'ಕೊರೋನವೈರಸ್‌ನಂತೆ ಹರಡಲು ಪ್ರಯತ್ನಿಸುತ್ತಿರುವ ಜಿರಳೆಗಳು, ತಿಗಣೆಗಳು ಮತ್ತು 'ತುಕ್ಡೆ ತುಕ್ಡೆ ಗ್ಯಾಂಗ್‌'ಗಳಂತಹ ಉಪದ್ರವಿಗಳನ್ನು ನಿಯಂತ್ರಿಸಲು 'ಹಿಟ್' (Hit) ಸ್ಪ್ರೇ (ಒಂದು ವೇಳೆ ಅವು ಹರಡಲು ಪ್ರಯತ್ನಿಸದಿದ್ದಿದ್ದರೆ) ಸಿಂಪಡಿಸಿ ಇವುಗಳ ನಿರ್ಮೂಲನೆ ಮಾಡುವ ಅಗತ್ಯವಿದೆ' ಎಂದು ಹೇಳಿದರು.

West Bengal CM Suvendu Adhikari
'CJP ಕರೆ ನೀಡಿದ್ದ ಪ್ರತಿಭಟನೆಯಲ್ಲಿ ನಾನು ಭಾಗಿಯಾಗಿಲ್ಲ': ದೆಹಲಿ ಹೈಕೋರ್ಟ್‌ಗೆ ನೇಹಾ ಬೋರಾ ಸ್ಪಷ್ಟನೆ

ಎಡಪಕ್ಷಗಳು ಹಾಗೂ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್‌ನ (ಟಿಎಂಸಿ) 15 ವರ್ಷಗಳ ಆಡಳಿತವು ಬಂಗಾಳದ ಪರಂಪರೆ ಮತ್ತು ಸಂಸ್ಕೃತಿಯನ್ನು ದುರ್ಬಲಗೊಳಿಸಲು ಪ್ರಯತ್ನಿಸಿವೆ ಎಂದು ಅವರು ಆರೋಪಿಸಿದರು.

'ನಾಸ್ತಿಕ' ಕಮ್ಯುನಿಸ್ಟರ 34 ವರ್ಷಗಳ ಸುದೀರ್ಘ ಆಡಳಿತ ಮತ್ತು ಟಿಎಂಸಿಯ 15 ವರ್ಷಗಳ ಆಡಳಿತವು ಜನರ ಪರಂಪರೆ ಹಾಗೂ ಸಂಸ್ಕೃತಿಯನ್ನು ಅಳಿಸಿಹಾಕಲು ಪ್ರಯತ್ನಿಸಿದವು' ಎಂದರು.

ಶೈಕ್ಷಣಿಕ ಸಂಸ್ಥೆಗಳಲ್ಲಿ NCC ಸೇರ್ಪಡೆಗೊಳ್ಳುವುದನ್ನು ತಡೆಯಲು ಹಿಂದಿನ ಟಿಎಂಸಿ ಸರ್ಕಾರವು ಪ್ರಯತ್ನಿಸಿತ್ತು ಮತ್ತು ಅದರ ಬದಲಿಗೆ 'ಜೈ ಹಿಂದ್ ವಾಹಿನಿ'ಯನ್ನು ಪರಿಚಯಿಸಿತ್ತು. ಎನ್‌ಸಿಸಿಯಲ್ಲಿ ಇರುವುದು ವಿದ್ಯಾರ್ಥಿಗಳಿಗೆ ಸಶಸ್ತ್ರ ಪಡೆಗಳಲ್ಲಿ 'ಅಗ್ನಿವೀರ'ರಾಗಿ ಆಯ್ಕೆಯಾಗಲು ಸಹಾಯ ಮಾಡುತ್ತಿತ್ತು ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com