ಪತಿ ವಿರುದ್ಧ ದೂರು ಕೊಡಲು ಬಂದ ಮಹಿಳೆ ಮೇಲೆ ಠಾಣೆಯಲ್ಲೇ ಅತ್ಯಾಚಾರ: ಪೋಲೀಸ್ ಅಧಿಕಾರಿ ವಶಕ್ಕೆ!

ತನ್ನ ಪತಿಯ ಕಿರುಕುಳದ ವಿರುದ್ಧ ದೂರು ನೀಡಲು ಗುರುವಾರ ರಾತ್ರಿ ಇದೇ ಪೊಲೀಸ್ ಠಾಣೆಗೆ ಬಂದಿದ್ದಾಗ, ಪೊಲೀಸ್ ವೈರ್‌ಲೆಸ್ ಆಪರೇಟರ್ ತನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ.
Jharkhand cop detained after woman alleges rape inside police station
ಸಾಂದರ್ಭಿಕ ಚಿತ್ರ
Updated on: 

ಸೆರೈಕೆಲಾ-ಖರ್ಸ್ವಾನ್: ಜಾರ್ಖಂಡ್‌ನ ಸೆರೈಕೆಲಾ-ಖರ್ಸ್ವಾನ್ ಜಿಲ್ಲೆಯಲ್ಲಿ, ಪೊಲೀಸ್ ಠಾಣೆಯೊಂದರ ಒಳಗೆ ತನ್ನ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂದು ಮಹಿಳೆಯೊಬ್ಬರು ಆರೋಪಿಸಿದ ನಂತರ, ಪೊಲೀಸ್ ಅಧಿಕಾರಿಯೊಬ್ಬರನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ ಎಂದು ಶನಿವಾರ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತನ್ನ ಪತಿಯ ಕಿರುಕುಳದ ವಿರುದ್ಧ ದೂರು ನೀಡಲು ಗುರುವಾರ ರಾತ್ರಿ ಇದೇ ಪೊಲೀಸ್ ಠಾಣೆಗೆ ಬಂದಿದ್ದಾಗ, ಪೊಲೀಸ್ ವೈರ್‌ಲೆಸ್ ಆಪರೇಟರ್ ತನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ.

ಪೊಲೀಸ್ ವರಿಷ್ಠಾಧಿಕಾರಿ ಮನೋಜ್ ಸ್ವರ್ಗಿಯಾರಿ ಅವರು, ಈ ವಿಷಯದ ಬಗ್ಗೆ ತನಿಖೆ ನಡೆಸುವಂತೆಯೂ ಮತ್ತು ಆರೋಪಿ ತಪ್ಪಿತಸ್ಥನೆಂದು ಕಂಡುಬಂದರೆ ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಉಪ-ವಿಭಾಗೀಯ ಪೊಲೀಸ್ ಅಧಿಕಾರಿ(ಸೆರೈಕೆಲಾ) ಅನುಭವ್ ಭಾರದ್ವಾಜ್ ಅವರಿಗೆ ಸೂಚಿಸಿದ್ದಾರೆ.

Jharkhand cop detained after woman alleges rape inside police station
ಪುಣೆ: 6 ವರ್ಷದ ಮಗನೊಂದಿಗೆ 18ನೇ ಮಹಡಿಯಿಂದ ಜಿಗಿದು ಮಹಿಳೆ ಆತ್ಮಹತ್ಯೆ; ಮತ್ತೊಂದು ಮದುವೆಯಾಗುವಂತೆ ಪತಿಗೆ ಡೆತ್​ನೋಟ್!

"ಮಹಿಳೆಯು ಅತ್ಯಾಚಾರದ ಆರೋಪ ಮಾಡಿರುವ ಹಿನ್ನೆಲೆಯಲ್ಲಿ ನಾವು ಈ ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಸಂತ್ರಸ್ತ ಮಹಿಳೆಯಿಂದ ಲಿಖಿತ ದೂರು ದಾಖಲಾದ ನಂತರ, ಆರೋಪಿ ತಪ್ಪಿತಸ್ಥನೆಂದು ಸಾಬೀತಾದರೆ ಆತನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ" ಎಂದು ಉಪ-ವಿಭಾಗೀಯ ಪೊಲೀಸ್ ಅಧಿಕಾರಿ(SDPO) ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X