ಪುಣೆ: 6 ವರ್ಷದ ಮಗನೊಂದಿಗೆ 18ನೇ ಮಹಡಿಯಿಂದ ಜಿಗಿದು ಮಹಿಳೆ ಆತ್ಮಹತ್ಯೆ; ಮತ್ತೊಂದು ಮದುವೆಯಾಗುವಂತೆ ಪತಿಗೆ ಡೆತ್​ನೋಟ್!

ಮೃತ ಮಹಿಳೆಯನ್ನು ಏಕ್ತಾ ಬಂಗಡ್ ಎಂದು ಗುರುತಿಸಲಾಗಿದ್ದು, ಅವರು ಕಳೆದ ಕೆಲವು ವರ್ಷಗಳಿಂದ ಬೆನ್ನುಮೂಳೆಗೆ ಸಂಬಂಧಿಸಿದ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ.
Pune: Woman jumps from 18th floor with 6-year-old son, note urges husband to remarry
ಏಕ್ತಾ ಬಂಗಡ್
Updated on: 

ಪುಣೆ: 33 ವರ್ಷದ ಮಹಿಳೆಯೊಬ್ಬರು ತಮ್ಮ ಆರು ವರ್ಷದ ಮಗನೊಂದಿಗೆ ವಸತಿ ಕಟ್ಟಡವೊಂದರ 18ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಶುಕ್ರವಾರ ಮಹಾರಾಷ್ಟ್ರದ ಪಿಂಪ್ರಿ-ಚಿಂಚವಾಡದಲ್ಲಿ ನಡೆದಿದೆ.

ಮೃತ ಮಹಿಳೆಯನ್ನು ಏಕ್ತಾ ಬಂಗಡ್ ಎಂದು ಗುರುತಿಸಲಾಗಿದ್ದು, ಅವರು ಕಳೆದ ಕೆಲವು ವರ್ಷಗಳಿಂದ ಬೆನ್ನುಮೂಳೆಗೆ ಸಂಬಂಧಿಸಿದ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ.

ಪೊಲೀಸರು ಅವರ ಮನೆಯಿಂದ ಏಳರಿಂದ ಎಂಟು ಪುಟಗಳ ಟಿಪ್ಪಣಿಯನ್ನು (ಡೆತ್ ನೋಟ್) ವಶಪಡಿಸಿಕೊಂಡಿದ್ದು, ಘಟನೆಗೆ ಕಾರಣವಾದ ಸನ್ನಿವೇಶಗಳ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

Pune: Woman jumps from 18th floor with 6-year-old son, note urges husband to remarry
ಪೋಸ್ಟ್ ಆಫೀಸ್'ನಲ್ಲೇ ಪತ್ನಿ ಮೇಲೆ ರಾಡ್ ನಿಂದ ಹಲ್ಲೆ; ಬಳಿಕ ಗುಂಡು ಹಾರಿಸಿಕೊಂಡು ಪತಿ ಆತ್ಮಹತ್ಯೆ!

ಈ ಘಟನೆಯು ಸಂಜೆ 6.30ರ ಸುಮಾರಿಗೆ 'ಸಿಗ್ನೇಚರ್ ಪಾರ್ಕ್' ಎಂಬ ವಸತಿ ಸಂಕೀರ್ಣದಲ್ಲಿ ನಡೆದಿದೆ. ಇಲ್ಲಿ ಏಕ್ತಾ ಅವರು ತಮ್ಮ ಪತಿ ಮನೋಜ್ ಬಂಗಡ್ ಮತ್ತು ಮಗ ಮಾಧವ್ ಅವರೊಂದಿಗೆ ವಾಸಿಸುತ್ತಿದ್ದರು. ಮನೋಜ್ ಅವರು ಪುಣೆಯ ಐಟಿ ಕಂಪನಿಯೊಂದರಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಏಕ್ತಾ ತಮ್ಮ ಮಗನನ್ನು ಕಟ್ಟಡದ 18ನೇ ಮಹಡಿಯ ಕಾರಿಡಾರ್‌ಗೆ ಕರೆದೊಯ್ದು ಅಲ್ಲಿಂದ ಕೆಳಗೆ ಜಿಗಿದಿದ್ದಾರೆ ಎನ್ನಲಾಗಿದೆ. ಘಟನೆಯಲ್ಲಿ ತಾಯಿ ಮತ್ತು ಮಗ ಇಬ್ಬರೂ ಮೃತಪಟ್ಟಿದ್ದಾರೆ.

ಮತ್ತೊಂದು ಮದುವೆಯಾಗುವಂತೆ ಪತಿಗೆ ಮನವಿ

ಈ ಪ್ರಕರಣದಲ್ಲಿ ಪೊಲೀಸರಿಗೆ ದೊರೆತಿರುವ 7ರಿಂದ 8 ಪುಟಗಳ ಪತ್ರ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಸಾವಿಗೂ ಮುನ್ನ ಏಕ್ತಾ ಬರೆದಿದ್ದಾರೆ ಎನ್ನಲಾದ ಪತ್ರದಲ್ಲಿ ಪತಿಯ ಬಗ್ಗೆ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ.

ತಮ್ಮ ಸಾವಿನ ಬಳಿಕ ಪತಿ ಮತ್ತೊಂದು ಮದುವೆಯಾಗಿ ಹೊಸ ಜೀವನ ಆರಂಭಿಸಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ. ಅಲ್ಲದೇ ಮಗನ ಭವಿಷ್ಯದ ಬಗ್ಗೆಯೂ ಅವರು ಆತಂಕ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ. ತಾಯಿ ಇಲ್ಲದಿರುವುದನ್ನು ಮಗ ಅರ್ಥಮಾಡಿಕೊಳ್ಳಲು ಕಷ್ಟಪಡಬಹುದು. ಮುಂದೆ ಆತ ಪದೇಪದೇ ತಾಯಿಯ ಬಗ್ಗೆ ಪ್ರಶ್ನಿಸಬಹುದು ಎಂಬ ಆತಂಕವನ್ನು ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ, ಮಗನಿದ್ದರೆ ಪತಿಗೆ ಮರುಮದುವೆಯಾಗಲು ತೊಂದರೆಯಾಗಬಹುದು ಎಂಬ ಕಳವಳವನ್ನೂ ವ್ಯಕ್ತಪಡಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.

ಪೊಲೀಸರಿಂದ ತನಿಖೆ

ಘಟನೆ ನಡೆದ ಬೆನ್ನಲ್ಲೇ ವಾಕಡ್ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆಕಸ್ಮಿಕ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸರು ಮನೆಯಲ್ಲಿ ಪತ್ತೆಯಾದ ಪತ್ರವನ್ನು ವಶಕ್ಕೆ ಪಡೆದು ಅದರಲ್ಲಿರುವ ಅಂಶಗಳನ್ನು ಪರಿಶೀಲಿಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X