ಪೋಸ್ಟ್ ಆಫೀಸ್'ನಲ್ಲೇ ಪತ್ನಿ ಮೇಲೆ ರಾಡ್ ನಿಂದ ಹಲ್ಲೆ; ಬಳಿಕ ಗುಂಡು ಹಾರಿಸಿಕೊಂಡು ಪತಿ ಆತ್ಮಹತ್ಯೆ!

ಪತಿಯ ಭೀಕರ ಹಲ್ಲೆಯಿಂದ ಪತ್ನಿಯ ತಲೆಗೆ ಗಂಭೀರ ಗಾಯವಾಗಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
Man attacks wife with rod, shoots himself at post office
ಸಾಂದರ್ಭಿಕ ಚಿತ್ರ
Updated on: 

ಇಡುಕ್ಕಿ: ಕೇರಳದ ಇಡುಕ್ಕಿಯಲ್ಲಿರುವ ಕುಳಿತ್ತೋಳು ಅಂಚೆ ಕಚೇರಿಯೊಂದರಲ್ಲಿ ಗುತ್ತಿಗೆ ಆಧಾರದ ಮೇಲೆ ಪೋಸ್ಟ್‌ಮಾಸ್ಟರ್ ಆಗಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರ ಮೇಲೆ, ಅವರ ಪತಿ ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಿ, ಬಳಿಕ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಶುಕ್ರವಾರ ನಡೆದಿದೆ.

ಪತಿಯ ಭೀಕರ ಹಲ್ಲೆಯಿಂದ ಪತ್ನಿಯ ತಲೆಗೆ ಗಂಭೀರ ಗಾಯವಾಗಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಲ್ಲೆಗೊಳಗಾದ ಮಹಿಳೆಯನ್ನು ಶ್ರೀಜಾ ಎಂದು ಗುರುತಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Man attacks wife with rod, shoots himself at post office
ಪತ್ನಿ ಅಕ್ರಮ ಸಂಬಂಧ ಪ್ರಶ್ನಿಸಿದ ಪತಿಗೆ 12 ಬಾರಿ ಇರಿದ ಜಿಮ್‌ ಟ್ರೈನರ್‌; ಭೀಕರ ಕೃತ್ಯ ಸಿಸಿಟಿವಿಯಲ್ಲಿ ಸೆರೆ!

ಮಹಿಳೆಯ ಪತಿ ಸಂತೋಷ್, ಇಂದು ಬೆಳಗ್ಗೆ 9.30ರ ಸುಮಾರಿಗೆ ಕಚೇರಿಯಲ್ಲಿದ್ದಾಗ ಆಕೆಯ ಹಿಂಬದಿಯಿಂದ ಬಂದು ಕಬ್ಬಿಣದ ಸರಳಿನಿಂದ ತಲೆಗೆ ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ.

ಈ ವೇಳೆ ಕಚೇರಿಯಲ್ಲಿದ್ದ ಕೆಲವರು ಮಹಿಳೆಯ ಸಹಾಯಕ್ಕೆ ಧಾವಿಸಿದಾಗ, ಸಂತೋಷ್ ಅವರತ್ತ ಬಂದೂಕನ್ನು ತೋರಿಸಿ ಅವರನ್ನು ದೂರವಿರಿಸಿ, ನಂತರ ತಾನೇ ಗುಂಡು ಹಾರಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಪೊಲೀಸರ ಪ್ರಕಾರ, ಈ ದಂಪತಿಗಳ ನಡುವೆ ಕೌಟುಂಬಿಕ ವಿಷಯಗಳಿಗೆ ಸಂಬಂಧಿಸಿದಂತೆ ಕಳೆದ ಕೆಲವು ದಿನಗಳಿಂದ ಪದೇ ಪದೇ ಜಗಳ ನಡೆಯುತ್ತಿತ್ತು. ಆದರೆ, ಈ ಹಲ್ಲೆಗೆ ನಿಖರವಾದ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ.

ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X