'ರಾಹುಲ್ ಗಾಂಧಿಯನ್ನು ಅಣಕು ಪ್ರಧಾನಿ ಮಾಡಿ; ಪ್ರತಿದಿನ ಪ್ರಧಾನ ಮಂತ್ರಿ, ಪ್ರಧಾನ ಮಂತ್ರಿ ಅಂತ ಭಜನೆ ಮಾಡಿ': 'ಮಹಾಭಿಯೋಗ'ಕ್ಕೆ BJP ಟಾಂಗ್

ನೀವು ಸೃಷ್ಟಿಸಿರುವ ಈ 'ಅಣಕು ಸಂಸತ್ತಿ'ನಲ್ಲಿ, ಆಡಳಿತ ಪಕ್ಷದ ಕಡೆ ರಾಹುಲ್ ಗಾಂಧಿಯವರನ್ನು ಕುರ್ತಾ-ಪೈಜಾಮ ಧರಿಸುವಂತೆ ಮಾಡಿ(ಟಿ-ಶರ್ಟ್ ಬೇಡ), ಪ್ರಧಾನಿ ಮಾಡಿ. ಅಲ್ಲಿ ಪ್ರತಿದಿನ ಅವರನ್ನು 'ಪ್ರಧಾನ ಮಂತ್ರಿ, ಪ್ರಧಾನ ಮಂತ್ರಿ' ಎಂದು ಕರೆಯುತ್ತಾ ಅವರ ಭಜನೆ-ಕೀರ್ತನೆಗಳನ್ನು ನಡೆಸಿ".
'Make Him A Mock PM': BJP's Jibe At Rahul Gandhi Over 'Impeachment' Move
ಸಂಬಿತ್ ಪಾತ್ರ, ರಾಹುಲ್ ಗಾಂಧಿ
Updated on: 

ನವದೆಹಲಿ: ಎಸ್ಐಆರ್ ವಿವಾದದ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಿರುದ್ಧ ಕಾಂಗ್ರೆಸ್ ನೇತೃತ್ವ ಇಂಡಿಯಾ ಮೈತ್ರಿಕೂಟ ಪಕ್ಷಗಳು ನಡೆಸಿದ 'ಅಣಕು ಮಹಾಭಿಯೋಗ'ಕ್ಕೆ(mock impeachment) ಆಡಳಿತರೂಢ ಬಿಜೆಪಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.

ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಕಟುವಾಗಿ ಟೀಕಿಸಿದ ಬಿಜೆಪಿ, ಈ ಅಣಕು ಸಂಸತ್ತಿನಲ್ಲಿ ರಾಹುಲ್ ಗಾಂಧಿಗೆ ಕುರ್ತಾ-ಪೈಜಾಮ ತೊಡಿಸಿ ಅಣಕು ಪ್ರಧಾನಿ ಮಾಡಿ ಎಂದು ಶನಿವಾರ ವಾಗ್ದಾಳಿ ನಡೆಸಿದೆ.

ಇಂದು ಸಂಜೆ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಬಿಜೆಪಿ ಸಂಸದ ಸಂಬಿತ್ ಪಾತ್ರ ಅವರು, "ಅವರನ್ನು(ರಾಹುಲ್ ಗಾಂಧಿ) ಈ 'ಅಣಕು ಸಂಸತ್ತಿ'ನಲ್ಲಿ 'ಅಣಕು ಪ್ರಧಾನಿ'ಯನ್ನಾಗಿ ಮಾಡಿ" ಎಂದು ಹೇಳಿದರು.

ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಸಾಧ್ಯವಾಗದ ಕಾರಣ, ಪ್ರತಿಭಟನೆಗಳ ಮೂಲಕ ಸರ್ಕಾರವನ್ನು ಉರುಳಿಸಲು ವಿರೋಧ ಪಕ್ಷ ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂದು ಅವರು ಆರೋಪಿಸಿದರು.

'Make Him A Mock PM': BJP's Jibe At Rahul Gandhi Over 'Impeachment' Move
ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ಇಂಡಿಯಾ ಬ್ಲಾಕ್ ಆರು ಆರೋಪ ಪ್ರಸ್ತಾಪ; ವಜಾಗೊಳಿಸಲು, ದೇಶದ್ರೋಹದ ವಿಚಾರಣೆಗೆ ಒತ್ತಾಯ; Video

ಆಡಳಿತಾರೂಢ ಬಿಜೆಪಿಗೆ ಅನಗತ್ಯ ಅನುಕೂಲ ಮಾಡಿಕೊಡುವ ಉದ್ದೇಶದಿಂದ ನಡೆದಿದೆ ಎನ್ನಲಾದ ಚುನಾವಣಾ ಅಕ್ರಮಗಳಲ್ಲಿ ಜ್ಞಾನೇಶ್ ಕುಮಾರ್ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. 'ವಿಶೇಷ ಸಮಗ್ರ ಪರಿಷ್ಕರಣೆ'ಗೆ (Special Intensive Revision - SIR) ಸಂಬಂಧಿಸಿದ ಅನೇಕ ನಿರ್ಧಾರಗಳನ್ನು, ಇತರ ಇಬ್ಬರು ಚುನಾವಣಾ ಆಯುಕ್ತರ ಗಮನಕ್ಕೆ ತರದೆ ಅಥವಾ ಅವರ ಸ್ಪಷ್ಟ ಅನುಮೋದನೆ ಪಡೆಯದೆ ತಾವೇ ತೆಗೆದುಕೊಂಡಿದ್ದಾರೆ ಎಂದು ಪತ್ರಿಕೆಯೊಂದರಲ್ಲಿ ವರದಿ ಪ್ರಕಟವಾದ ನಂತರ, ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ತೆಗೆದುಹಾಕಬೇಕೆಂದು ಕಾಂಗ್ರೆಸ್ ಆಗ್ರಹಿಸುತ್ತಿದೆ.

ವಿರೋಧ ಪಕ್ಷಗಳು ಇಂದು ಅಣಕು ಸಂಸತ್ 'ನಕಲಿ ಅಧಿವೇಶನ'ವೊಂದನ್ನು ಆಯೋಜಿಸಿ, ಜ್ಞಾನೇಶ್ ಕುಮಾರ್ ಅವರ ವಿರುದ್ಧ 'ಸಾರ್ವಜನಿಕ ಮಹಾಭಿಯೋಗ' ಪ್ರಕ್ರಿಯೆಯನ್ನು ಆರಂಭಿಸಿತು.

ಈ ಅಣಕು ಅಧಿವೇಶನಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ನಾಯಕ, "ಸಹೋದರರೇ, ನಿಮಗೆ ನನ್ನದೊಂದು ವಿನಮ್ರ ಮನವಿ ಏನೆಂದರೆ, ದಯವಿಟ್ಟು ಈ ಸಂಸತ್ತನ್ನು ವಿಸರ್ಜಿಸಬೇಡಿ. ನೀವು ಸೃಷ್ಟಿಸಿರುವ ಈ 'ಅಣಕು ಸಂಸತ್ತಿ'ನಲ್ಲಿ, ಆಡಳಿತ ಪಕ್ಷದ ಕಡೆ ರಾಹುಲ್ ಗಾಂಧಿಯವರನ್ನು ಕುರ್ತಾ-ಪೈಜಾಮ ಧರಿಸುವಂತೆ ಮಾಡಿ(ಟಿ-ಶರ್ಟ್ ಬೇಡ), ಪ್ರಧಾನಿ ಮಾಡಿ. ಅಲ್ಲಿ ಪ್ರತಿದಿನ ಅವರನ್ನು 'ಪ್ರಧಾನ ಮಂತ್ರಿ, ಪ್ರಧಾನ ಮಂತ್ರಿ' ಎಂದು ಕರೆಯುತ್ತಾ ಅವರ ಭಜನೆ-ಕೀರ್ತನೆಗಳನ್ನು ನಡೆಸಿ" ಎಂದು ತಿರುಗೇಟು ನೀಡಿದ್ದಾರೆ.

ವಿರೋಧ ಪಕ್ಷದ ಉದ್ದೇಶವು 'ಸ್ಪೆಷಲ್ ಇಂಟೆನ್ಸಿವ್ ರಿವಿಷನ್' (SIR) ಅಥವಾ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಕಳವಳ ವ್ಯಕ್ತಪಡಿಸುವುದಲ್ಲ, ಬದಲಾಗಿ ಸರ್ಕಾರವನ್ನೇ ಬದಲಾಯಿಸುವುದಾಗಿದೆ ಎಂದು ಆರೋಪಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X