'ದೊಡ್ಡ ಅದೃಷ್ಟ, ಭಗವಾನ್ ರಾಮನ ಆಶೀರ್ವಾದ': ರಾಮ ಮಂದಿರ ಟ್ರಸ್ಟ್‌ CEO ಜಿತೇಂದ್ರ ಮಿಶ್ರಾ ಮೊದಲ ಪ್ರತಿಕ್ರಿಯೆ

ರಾಮ ಮಂದಿರ ಟ್ರಸ್ಟ್‌ CEO ಆಗಿ ನೇಮಕಗೊಂಡ ನಂತರ ಮೊದಲ ಬಾರಿ ಪ್ರತಿಕ್ರಿಯಿಸಿದ ನಿವೃತ್ತ ಏರ್ ಮಾರ್ಷಲ್ ಜಿತೇಂದ್ರ ಮಿಶ್ರಾ ಅವರು, ಉನ್ನತ ಹುದ್ದೆಗೆ ಆಯ್ಕೆಯಾಗಿದ್ದು ತಮ್ಮ ಅದೃಷ್ಟ ಎಂದು ಹೇಳಿದ್ದಾರೆ.
Air Marshal (retd) Mishra calls Ram Temple Trust role 'blessings of Lord Ram'
ಜಿತೇಂದ್ರ ಮಿಶ್ರಾ
Updated on

ಲಖನೌ: ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಮೊದಲ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನಿವೃತ್ತ ಏರ್ ಮಾರ್ಷಲ್ ಜಿತೇಂದ್ರ ಮಿಶ್ರಾ ಅವರನ್ನು ಆಯ್ಕೆ ಮಾಡಲಾಗಿದೆ.

ರಾಮ ಮಂದಿರ ಟ್ರಸ್ಟ್‌ CEO ಆಗಿ ನೇಮಕಗೊಂಡ ನಂತರ ಮೊದಲ ಬಾರಿ ಪ್ರತಿಕ್ರಿಯಿಸಿದ ನಿವೃತ್ತ ಏರ್ ಮಾರ್ಷಲ್ ಜಿತೇಂದ್ರ ಮಿಶ್ರಾ ಅವರು, ಉನ್ನತ ಹುದ್ದೆಗೆ ಆಯ್ಕೆಯಾಗಿದ್ದು ತಮ್ಮ ಅದೃಷ್ಟ ಎಂದು ಹೇಳಿದ್ದಾರೆ.

ತಮ್ಮ ನೇಮಕಾತಿಯ ಬಗ್ಗೆ ಪ್ರತಿಕ್ರಿಯಿಸಿದ ಮಿಶ್ರಾ, ಹಲವಾರು ಅಭ್ಯರ್ಥಿಗಳಲ್ಲಿ ನಾನು ಆಯ್ಕೆಯಾಗಿರುವುದು ಭಗವಾನ್ ರಾಮನ ಆಶೀರ್ವಾದ ಎಂದು ಭಾವಿಸುತ್ತೇನೆ ಎಂದು ಹೇಳಿದ್ದಾರೆ.

Air Marshal (retd) Mishra calls Ram Temple Trust role 'blessings of Lord Ram'
ರಾಮ ಮಂದಿರ ಟ್ರಸ್ಟ್‌ಗೆ ಮೊದಲ CEO ನೇಮಕ; 'ಆಪರೇಷನ್ ಸಿಂಧೂರ್'​​ನಲ್ಲಿ ಭಾಗಿಯಾಗಿದ್ದ ಜಿತೇಂದ್ರ ಮಿಶ್ರಾ ಹೆಸರು ಘೋಷಣೆ!

"... ಅವರು ಹಲವು ಅಭ್ಯರ್ಥಿಗಳಲ್ಲಿ ನನ್ನ ಆಯ್ಕೆ ಮಾಡಿರುವುದು ಒಂದು ದೊಡ್ಡ ಅದೃಷ್ಟ ಎಂದು ಭಾವಿಸುತ್ತೇನೆ. ವಾಯುಪಡೆಯಲ್ಲಿ 43 ವರ್ಷಗಳ ಕಾಲ ದೇಶ ಸೇವೆ ಸಲ್ಲಿಸಿದ ನಂತರ, ಶ್ರೀ ರಾಮ ಮಂದಿರ ಮತ್ತು ಶ್ರೀ ರಾಮ ಭಕ್ತರಿಗೆ ಸೇವೆ ಸಲ್ಲಿಸಲು ನನಗೆ ಅವಕಾಶ ನೀಡಿದ್ದಾರೆ. ಇದು ಶ್ರೀ ರಾಮನ ಆಶೀರ್ವಾದ ಎಂದು ನಾನು ಪರಿಗಣಿಸುತ್ತೇನೆ..." ಎಂದು ಏರ್ ಮಾರ್ಷಲ್(ನಿವೃತ್ತ) ಮಿಶ್ರಾ ತಿಳಿಸಿದ್ದಾರೆ.

ಭಾರತೀಯ ವಾಯುಪಡೆಯಲ್ಲಿ ಹಲವಾರು ಕಮಾಂಡಿಂಗ್ ಹುದ್ದೆಗಳನ್ನು ಹೊಂದಿದ್ದ ಮಿಶ್ರಾ ಅವರು, ಆಪರೇಷನ್ ಸಿಂಧೂರ್ ಸಮಯದಲ್ಲಿ ಪಶ್ಚಿಮ ಕಮಾಂಡ್‌ನ ಮುಖ್ಯಸ್ಥರಾಗಿದ್ದರು. ಇದೀಗ ರಾಮ ಮಂದಿರ ಟ್ರಸ್ಟ್‌ CEO ಆಗಿ ನೇಮಕಗೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com