ಡ್ರಗ್ಸ್ ಸೇವನೆ ದೃಢ: ಫುಕೆಟ್- ದೆಹಲಿ ಏರ್ ಇಂಡಿಯಾ ವಿಮಾನದ ಮುಖ್ಯ ಪೈಲಟ್ ವಜಾ!

ಆಗಸ್ಟ್ 4 ರ ಘಟನೆಯ ಕುರಿತು ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ಪ್ರಾಥಮಿಕ ವರದಿಯ ಬಿಡುಗಡೆ ಮತ್ತು ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ಕ್ರಮ ಕೈಗೊಳ್ಳಲು ಶಿಫಾರಸು ಮಾಡಿದ ಬೆನ್ನಲ್ಲೇ ಅವರನ್ನು ವಜಾಗೊಳಿಸಿರುವುದಾಗಿ ವಿಮಾನಯಾನ ಸಂಸ್ಥೆಯು ಘೋಷಿಸಿತು.
Casual Images
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ಕಳೆದ ತಿಂಗಳು ಫುಕೆಟ್ ನಿಂದ ದೆಹಲಿಗೆ ಆಗಮಿಸುತ್ತಿದ್ದಾಗ ಏಕಾಏಕಿ ಎತ್ತರವನ್ನು ಕಳೆದುಕೊಂಡು ಪ್ರಯಾಣಿಕರಿಗೆ ಜೀವಭೀತಿ ಮೂಡಿಸಿದ್ದ ವಿಮಾನದ ಮುಖ್ಯ ಪೈಲಟ್ ಡ್ರಗ್ಸ್ ಸೇವಿಸಿರುವುದು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಅವರನ್ನು ಏರ್ ಇಂಡಿಯಾ ಶುಕ್ರವಾರ ವಜಾಗೊಳಿಸಿದೆ.

ಆಗಸ್ಟ್ 4 ರ ಘಟನೆಯ ಕುರಿತು ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ಪ್ರಾಥಮಿಕ ವರದಿಯ ಬಿಡುಗಡೆ ಮತ್ತು ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ಕ್ರಮ ಕೈಗೊಳ್ಳಲು ಶಿಫಾರಸು ಮಾಡಿದ ಬೆನ್ನಲ್ಲೇ ಅವರನ್ನು ವಜಾಗೊಳಿಸಿರುವುದಾಗಿ ವಿಮಾನಯಾನ ಸಂಸ್ಥೆಯು ಘೋಷಿಸಿತು.

"ಫುಕೆಟ್-ದೆಹಲಿ ವಿಮಾನದ ಮುಖ್ಯ ಪೈಲಟ್ ಡ್ರಗ್ಸ್ ಸೇವಿಸಿರುವುದು ದೃಢಪಟ್ಟಿದೆ. ಸುರಕ್ಷತೆ, ಫಿಟ್‌ನೆಸ್ ಅಥವಾ ನಿಯಂತ್ರಕ ಅವಶ್ಯಕತೆಗಳ ಉಲ್ಲಂಘನೆಗೆ ಏರ್ ಇಂಡಿಯಾದ ನಿಯಮಗಳಿಗೆ ಅನುಗುಣವಾಗಿ, ಪೈಲಟ್‌ನ ಉದ್ಯೋಗವನ್ನು ತಕ್ಷಣದಿಂದ ಜಾರಿಗೆ ಬರುವಂತೆ ವಜಾಗೊಳಿಸಲಾಗಿದೆ" ಎಂದು ಏರ್ ಇಂಡಿಯಾ ಹೇಳಿಕೆಯಲ್ಲಿ ತಿಳಿಸಿದೆ.

ಏರ್ ಇಂಡಿಯಾ ತನ್ನ ಆರಂಭಿಕ ಹೇಳಿಕೆಯಲ್ಲಿ ವಾಯು ಪ್ರಕ್ಷುಬ್ಧುತೆ ಇದಕ್ಕೆ ಕಾರಣ ಎಂದು ಹೇಳಿತ್ತು. ಆದರೆ ನಂತರ ನಡೆಸಿದ ವೈದ್ಯಕೀಯ ಪರೀಕ್ಷೆಯಲ್ಲಿ ಮುಖ್ಯ ಪೈಲಟ್ ಗಾಂಜಾ ಸೇವಿಸಿರುವುದು ದೃಢಪಟ್ಟಿತ್ತು.

ಆಗಸ್ಟ್ 4 ರಂದು ಪುಕೆಟ್- ದೆಹಲಿ ನಡುವಿನ AI 2379 ವಿಮಾನವು ಹಾರಾಟದ ಮಧ್ಯದಲ್ಲೇ ಇದ್ದಕ್ಕಿದ್ದಂತೆ 300 ಅಡಿ ಕೆಳಕ್ಕಿಳಿದ ಪರಿಣಾಮ ನಾಲ್ವರು ಸಿಬ್ಬಂದಿ ಸೇರಿದಂತೆ 24 ಜನರು ಗಾಯಗೊಂಡಿದ್ದರು. ಈ ಘಟನೆಯಿಂದ ಕ್ಯಾಬಿನ್ ಒಳಗೆ ಗಮನಾರ್ಹ ಹಾನಿಯಾಗಿತ್ತು.

ಸೀಲಿಂಗ್ ಪ್ಯಾನೆಲ್‌, ಹ್ಯಾಂಡ್‌ರೈಲ್‌ಗಳು, ತುರ್ತು-ನಿರ್ಗಮನ ಹ್ಯಾಂಡಲ್ ಮತ್ತು ಸಿಬ್ಬಂದಿ ಸೀಟಿಗೆ ಹಾನಿಯಾಗಿತ್ತು. ವಿಮಾನ ಲ್ಯಾಂಡಿಂಗ್ ನಂತರ ಇಬ್ಬರೂ ಪೈಲಟ್‌ಗಳು ಬ್ರೀಥಲೈಸರ್ (breathalyser) ಪರೀಕ್ಷೆಗಳಿಗೆ ಒಳಗಾಗಿದ್ದರು. ಇಬ್ಬರು ಸಹ ಪೈಲಟ್ ಗಳ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದ್ದರೆ, ಮುಖ್ಯ ಪೈಲಟ್ ಸ್ಯಾಂಪಲ್ ನಲ್ಲಿ ಪಾಸಿಟಿವ್ ಬಂದಿತ್ತು. ಬಳಿಕ ದೃಢತೆಗಾಗಿ ರಕ್ತದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅಲ್ಲಿಯೂ ಫಾಸಿಟಿವ್ ಕಂಡುಬಂದಿದೆ.

Casual Images
Watch | ಫುಕೆಟ್-ದೆಹಲಿ ಏರ್ ಇಂಡಿಯಾ ವಿಮಾನ 300 ಅಡಿ ಕುಸಿತ; 12 ಮಂದಿಗೆ ಗಾಯ

ಇದನ್ನು ಗಂಭೀರವಾದ ಕಳವಳಕಾರಿ ಸಂಗತಿ ಎಂದು ಹೇಳಿದ್ದ ವಿಮಾನ ಅಪಘಾತ ತನಿಖಾ ಬ್ಯೂರೋ (AAIB) DGCA ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಶಿಫಾರಸು ಮಾಡಿತ್ತು. ಅಮಾನತುಗೊಂಡ 34 ವರ್ಷದ ಪೈಲಟ್ ಮಾನ್ಯವಾದ ಏರ್‌ಲೈನ್ ಟ್ರಾನ್ಸ್‌ಪೋರ್ಟ್ ಪರವಾನಗಿಯನ್ನು ಹೊಂದಿದ್ದರು ಮತ್ತು ಸುಮಾರು 5,055 ಗಂಟೆಗಳ ಹಾರಾಟದ ಅನುಭವವನ್ನು ಹೊಂದಿದ್ದರು. 32 ವರ್ಷದ ಸಹ-ಪೈಲಟ್ ಒಟ್ಟು 1,394 ಗಂಟೆಗಳ ಹಾರಾಟದ ಅನುಭವವನ್ನು ಹೊಂದಿದ್ದರು. ಹಾರಾಟದ ಮೊದಲು ಇಬ್ಬರೂ ಪೈಲಟ್‌ಗಳು ಸುಮಾರು 22 ಗಂಟೆಗಳ ಕಾಲ ವಿಶ್ರಾಂತಿ ಪಡೆದಿದ್ದರು ಎನ್ನಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com