ವಿಡಿಯೋ
ಥೈಲ್ಯಾಂಡ್ ನ ಫುಕೆಟ್‌ನಿಂದ ದೆಹಲಿಗೆ ತೆರಳುತ್ತಿದ್ದ AI2379 ಏರ್ ಇಂಡಿಯಾ ವಿಮಾನವು ಮಂಗಳವಾರ ಹಾರಾಟದ ವೇಳೆ ಟರ್ಬುಲೆನ್ಸ್ ಅಂದರೆ ಗಾಳಿಯ ಪ್ರಕ್ಷುಬ್ಧತೆಗೆ ಸಿಲುಕಿದೆ.
ಇದರಿಂದಾಗಿ ವಿಮಾನವು 300 ಅಡಿ ಕೆಳಕ್ಕೆ ಕುಸಿದಿದೆ. ಈ ಘಟನೆಯಲ್ಲಿ 12 ಪ್ರಯಾಣಿಕರು ಮತ್ತು ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ವಿಮಾನ ನಿಲ್ದಾಣದಲ್ಲಿ ತೆಗೆದ ದೃಶ್ಯಗಳಲ್ಲಿ ಟರ್ಮಿನಲ್ ಗೇಟ್ ಹೊರಗೆ ಆಂಬುಲೆನ್ಸ್‌ಗಳು ನಿಯೋಜಿಸಲಾಗಿದ್ದವು.
ಕೆಲ ಪ್ರಯಾಣಿಕರನ್ನು ವೀಲ್‌ಚೇರ್‌ಗಳಲ್ಲಿ ಹೊರತೆಗೆದುಕೊಂಡು ಬರುತ್ತಿರುವುದು ಕಂಡುಬಂದಿದೆ.
ಇನ್ನು ಕೆಲವರನ್ನು ತಲೆಗೆ ಬ್ಯಾಂಡೇಜ್ ಹಾಕಿಸಿಕೊಂಡ ಸ್ಥಿತಿಯಲ್ಲಿ ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯಲಾಗಿದೆ. ವಿಡಿಯೋ ಇಲ್ಲಿದೆ ನೋಡಿ.