

ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಕವಳಿ ಗ್ರಾಮದ ಜನರು ತಮ್ಮ ಗ್ರಾಮದಲ್ಲಿ ಬೃಹತ್ ಗಾತ್ರದ ಹುಲಿ ಓಡಾಡುತ್ತಿದೆ ಎಂದು ಭಾವಿಸಿ ಭಯಭೀತರಾಗಿದ್ದರು.
ಗುಡ್ಡದ ಮೇಲೆ ಹುಲಿ ಕುಳಿತಿರುವ ಚಿತ್ರವೊಂದು ಗ್ರಾಮಸ್ಥರ ಮೊಬೈಲ್ ನಲ್ಲಿ ಹರಿದಾಡಿತ್ತು. ಇದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಆದರೆ ಅಲ್ಲಿ ಯಾವುದೇ ಹುಲಿ ಪತ್ತೆಯಾಗಲಿಲ್ಲ.
ಅಸಲಿಗೆ ಅಲ್ಲಿ ಹುಲಿ ಇದ್ದೇ ಇರಲಿಲ್ಲ. ಎರಣ್ಣ ಹೊನ್ನುಚ್ಚಿ ಎಂಬಾತ ಕೃತಕ ಬುದ್ಧಿಮತ್ತೆ (AI) ಬಳಸಿ ಈ ಚಿತ್ರವನ್ನು ಸೃಷ್ಟಿಸಿದ್ದ. ಗುಡ್ಡದ ಛಾಯಾಚಿತ್ರವೊಂದನ್ನು ಎಡಿಟ್ ಮಾಡಿ, ಅದರ ಮೇಲೆ ಹುಲಿ ಕುಳಿತಿರುವಂತೆ ಆತ ಚಿತ್ರವನ್ನು ಸಿದ್ಧಪಡಿಸಿದ್ದ. ಯುವಕನಿಗೆ ಪಾಠ ಕಲಿಸಬೇಕು ಎಂದು ಪೊಲೀಸರು ಆತನನ್ನು ಅದೇ ಸ್ಥಳಕ್ಕೆ ಕರೆದೊಯ್ದು, ಶಿಕ್ಷೆಯಾಗಿ 50 ಬಾರಿ ಬಸ್ಕಿ ತೆಗೆಸಿದರು.