'ಸುಂದರಕಾಂಡ ಪಾರಾಯಣ' ಸಂಪೂರ್ಣಗೊಳಿಸಿದ ದಿನವೇ ಶ್ರೀರಾಮನ ವಿಗ್ರಹ ಸಿದ್ಧವಾಗಿತ್ತು: ಇದೊಂದು ದೈವಿಕ ಸನ್ನಿವೇಶ; ಉಪಸನಾ ಕೊನಿಡೇಲಾ

93 ವರ್ಷದ ತಾತನಿಗಾಗಿ ಅಪರೂಪದ ಶ್ರೀರಾಮನ ವಿಗ್ರಹವನ್ನು ಕೆತ್ತಿದ ಅರುಣ್ ಯೋಗಿರಾಜ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
Upasana Konidela
ಉಪಸನಾ ಕೊನಿಡೇಲಾ
Updated on

ಹೈದರಾಬಾದ್: ನಾನು ಸುಂದರಕಾಂಡ ಪಾರಾಯಣವನ್ನು ಸಂಪೂರ್ಣಗೊಳಿಸಿದ ದಿನವೇ ಶ್ರೀರಾಮನ ವಿಗ್ರಹ ಸಂಪೂರ್ಣವಾಗಿ ಸಿದ್ಧವಾಗಿತ್ತು. ಇದನ್ನು ನಾನು ಕೇವಲ ಕಾಕತಾಳೀಯ ಎಂದು ಭಾವಿಸುವುದಿಲ್ಲ. ಬದಲಿಗೆ ಇದೊಂದು ದೈವಿಕ ಸನ್ನಿವೇಶ ಮತ್ತು ರಾಮನ ಲೀಲೆ ಎಂದು ನಂಬುತ್ತೇನೆ ಉಪಸನಾ ಕೊನಿಡೇಲಾ ಹೇಳಿದ್ದಾರೆ.

ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೊ ಹಂಚಿಕೊಂಡಿರುವ ಉಪಾಸನಾ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. 93 ವರ್ಷದ ತಾತನಿಗಾಗಿ ಅಪರೂಪದ ಶ್ರೀರಾಮನ ವಿಗ್ರಹವನ್ನು ಕೆತ್ತಿದ ಅರುಣ್ ಯೋಗಿರಾಜ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಜೊತೆಗೆ ಸೆಪ್ಟೆಂಬರ್ 21ರಂದು ಹಿಂದೂ ಮಹಾಕಾವ್ಯ ರಾಮಾಯಣದ ಐದನೇ ಅಧ್ಯಾಯವಾದ ‘ಸುಂದರಕಾಂಡ ಪಾರಾಯಣ’ವನ್ನು ಪೂರ್ಣಗೊಳಿಸಿರುವುದಾಗಿ ತಿಳಿಸಿದ್ದಾರೆ.

ನಟ ರಾಮ್ ಚರಣ್ ಪತ್ನಿ ಉಪಾಸನಾ ಕೊನಿಡೇಲಾ ಅವರು ಆಗಾಗ ಧಾರ್ಮಿಕ ಪೂಜೆಯಲ್ಲಿ ಪಾಲ್ಗೊಳ್ಳುವ ವಿಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾ ಇರುತ್ತಾರೆ. ಇದೀಗ ಅವರು, ಅಯೋಧ್ಯೆಯ ‘ರಾಮಲಲ್ಲಾ’ ಮೂರ್ತಿಯನ್ನು ಕೆತ್ತಿದ ಮೈಸೂರಿನ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ಅವರಿಂದ ಶ್ರೀರಾಮನ ವಿಗ್ರಹವೊಂದನ್ನು ಪಡೆದುಕೊಂಡಿರುವುದಾಗಿ ಬಹಿರಂಗಪಡಿಸಿದ್ದಾರೆ

ನನ್ನ ಸುಂದರಕಾಂಡ ಪಾರಾಯಣ ಪೂರ್ಣಗೊಳ್ಳುತ್ತಿದ್ದಂತೆಯೇ, ಜೀವನದಲ್ಲೊಂದು ವಿಶೇಷ ಹಾಗೂ ದೈವಿಕ ಘಟನೆ ಸಂಭವಿಸಿದೆ. ಅಯೋಧ್ಯೆಯ ರಾಮಲಲ್ಲಾ ಮೂರ್ತಿಯನ್ನು ಕೆತ್ತಿದ ಶಿಲ್ಪಿ ಅರುಣ್ ಯೋಗಿರಾಜ್ ಅವರಿಗೆ, ನನ್ನ 93 ವರ್ಷದ ತಾತನಿಗಾಗಿ ಶ್ರೀರಾಮನ ವಿಶೇಷ ವಿಗ್ರಹವೊಂದನ್ನು ಕೆತ್ತಿಕೊಡುವಂತೆ ವರ್ಷದ ಹಿಂದೆ ವಿನಂತಿಸಿದ್ದೆ. ನನ್ನ ತಾತನ ಜೀವಮಾನದ ಸುಂದರಕಾಂಡ ಭಕ್ತಿಯೇ ನನಗೆ ಈ ಕಾರ್ಯಕ್ಕೆ ನಿರಂತರ ಪ್ರೇರಣೆಯಾಗಿತ್ತು ಎಂದಿದ್ದಾರೆ.

Upasana Konidela
ಮಂತ್ರಾಲಯದಲ್ಲಿ ರಾಯರ ದರ್ಶನ ಪಡೆದ ರಾಮ್ ಚರಣ್ ಪತ್ನಿ ಉಪಾಸನಾ ಕೊನಿಡೇಲ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com