ಸಂಪೂರ್ಣ 'ವಂದೇ ಮಾತರಂ' ಹಾಡುವಂತೆ ರಾಹುಲ್ ಗಾಂಧಿಗೆ ಸವಾಲೆಸೆದ ಬಿಜೆಪಿ ಸಂಸದೆ; ಬಾಲಿವುಡ್ ನಟ ಹೃತಿಕ್ ರೋಷನ್ ಪ್ರತಿಕ್ರಿಯೆ

ಸಾಮಾಜಿಕ ಜಾಲತಾಣ ಮತ್ತು ಡಿಜಿಟಲ್ ಸಂವಹನ ವಿಭಾಗದ ಕಾಂಗ್ರೆಸ್‌ನ ರಾಷ್ಟ್ರೀಯ ಸಂಚಾಲಕಿ ರುಚಿರಾ ಚತುರ್ವೇದಿ ಅವರು ಒಂದು ತಿಂಗಳ ಹಿಂದೆ ಹಂಚಿಕೊಂಡಿದ್ದ ಈ ವಿಡಿಯೋಗೆ ನಟ ಪ್ರತಿಕ್ರಿಯಿಸಿದ್ದಾರೆ.
ಬನ್ಸುರಿ ಸ್ವರಾಜ್ - ಹೃತಿಕ್ ರೋಷನ್
ಬನ್ಸುರಿ ಸ್ವರಾಜ್ - ಹೃತಿಕ್ ರೋಷನ್
Updated on: 

ನವದೆಹಲಿ: ಪಿತೃಪ್ರಧಾನ ವ್ಯವಸ್ಥೆಯನ್ನು ಬುಡಮೇಲು ಮಾಡಲು ಬಯಸುವುದಾದರೆ ಸಂಪೂರ್ಣ 'ವಂದೇ ಮಾತರಂ' ಗೀತೆಯನ್ನು ಪಠಿಸುವಂತೆ ರಾಹುಲ್ ಗಾಂಧಿಯವರನ್ನು ಆಗ್ರಹಿಸಿ ಬಿಜೆಪಿ ಸಂಸದೆ ಬನ್ಸೂರಿ ಸ್ವರಾಜ್ ಅವರು ನೀಡಿದ್ದ ಹೇಳಿಕೆಗೆ ಬಾಲಿವುಡ್ ಸೂಪರ್‌ಸ್ಟಾರ್ ಹೃತಿಕ್ ರೋಷನ್ ತಡವಾಗಿ ಪ್ರತಿಕ್ರಿಯಿಸಿದ್ದಾರೆ.

ಒಂದು ತಿಂಗಳ ಹಳೆಯ ವಿಡಿಯೋವೊಂದು ಈಗ ನಟನ ಗಮನ ಸೆಳೆದಿದ್ದು, ಅದಕ್ಕೆ ಕಮೆಂಟ್ ಮಾಡುವ ಮೂಲಕ ಪ್ರತಿಕ್ರಿಯಿಸಿದ್ದಾರೆ.

'ನಾನು ಇಂದು ನಿಮಗೆ ಒಂದು ಸವಾಲು ಹಾಕುತ್ತಿದ್ದೇನೆ. ನೀವು ಪಿತೃಪ್ರಧಾನ ವ್ಯವಸ್ಥೆಯನ್ನು (patriarchy) ಧ್ವಂಸಗೊಳಿಸಲು ಬಯಸುತ್ತೀರಿ- ಸರಿ, ಅದು ನಿಮ್ಮ ಇಷ್ಟ. ಆದರೆ, ಕ್ರಿಸ್ಮಸ್ ಗೀತೆಗಳನ್ನು ಹಾಡುವುದು, 'ವಂದೇ ಮಾತರಂ' ಅನ್ನು ಪೂರ್ತಿಯಾಗಿ ಹಾಡುವುದು ಹಾಗೂ 'ಶಿವ ತಾಂಡವ'ವನ್ನು ಪಠಿಸುವುದರಲ್ಲಿ ನನಗೆ ಯಾವುದೇ ಮುಜುಗರವಿಲ್ಲ. ಹಾಗಾಗಿ, ನಾನು ನಿಮಗೆ ಸವಾಲು ಹಾಕುತ್ತೇನೆ: ನೀವು ನಿಜವಾಗಿಯೂ ಪಿತೃಪ್ರಧಾನ ವ್ಯವಸ್ಥೆಯನ್ನು ಧ್ವಂಸಗೊಳಿಸಲು ಬಯಸುವುದಾದರೆ, ಮುಂದೆ ಬಂದು 'ವಂದೇ ಮಾತರಂ'ನ ಸಂಪೂರ್ಣ ಆವೃತ್ತಿಯನ್ನು ಹಾಡಿ' ಎಂದು ದೆಹಲಿ ಬಿಜೆಪಿ ಸಂಸದೆ ಹೇಳಿದ್ದಾರೆ.

ಪುಣೆಯಲ್ಲಿ ನಡೆದ 'ಛಾತ್ರೋನ್ ಕಿ ಗೂಂಜ್' (ವಿದ್ಯಾರ್ಥಿಗಳ ದನಿ) ಕಾರ್ಯಕ್ರಮವೊಂದರಲ್ಲಿ ರಾಹುಲ್ ಗಾಂಧಿಯವರು 'ಮನುಸ್ಮೃತಿಯ ಮನಸ್ಥಿತಿ'ಯನ್ನು ಟೀಕಿಸುತ್ತಲೇ 'ಪಿತೃಪ್ರಧಾನ ವ್ಯವಸ್ಥೆಯನ್ನು ಧ್ವಂಸಗೊಳಿಸಿ' ಎಂದು ಕರೆ ನೀಡಿದ್ದಕ್ಕೆ ಪ್ರತಿಕ್ರಿಯೆಯಾಗಿ ಅವರು ಈ ಮಾತುಗಳನ್ನು ಆಡಿದ್ದಾರೆ.

ಸಾಮಾಜಿಕ ಜಾಲತಾಣ ಮತ್ತು ಡಿಜಿಟಲ್ ಸಂವಹನ ವಿಭಾಗದ ಕಾಂಗ್ರೆಸ್‌ನ ರಾಷ್ಟ್ರೀಯ ಸಂಚಾಲಕಿ ರುಚಿರಾ ಚತುರ್ವೇದಿ ಅವರು ಒಂದು ತಿಂಗಳ ಹಿಂದೆ ಹಂಚಿಕೊಂಡಿದ್ದ ಈ ವಿಡಿಯೋಗೆ ನಟ ಪ್ರತಿಕ್ರಿಯಿಸಿದ್ದಾರೆ.

'Huh? ಇದು ನಿಜವೇ? ವಾವ್' ಎಂದು ಆ ಪೋಸ್ಟ್‌ಗೆ ಕಮೆಂಟ್ ಮಾಡಿದ್ದಾರೆ.

ಈ ವರ್ಷದ 80ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಪೂರ್ಣವಾಗಿ ಪ್ರಸಾರವಾದ ರಾಷ್ಟ್ರಗೀತೆ 'ವಂದೇ ಮಾತರಂ' ಗೀತೆಯು ಪಿತೃಪ್ರಧಾನ ವ್ಯವಸ್ಥೆಯನ್ನು ಬುಡಮೇಲು ಮಾಡಲು ಹೇಗೆ ಸಹಾಯ ಮಾಡುತ್ತದೆ ಎಂಬುದು ಸ್ಪಷ್ಟವಾಗಿಲ್ಲ.

'ಕಿಂಗ್, ನಿನ್ನೊಳಗಿರುವ 'ಕ್ರಿಶ್' (Krish) ಅನ್ನು ಹೊರತರು' ಎಂದು ಬಳಕೆದಾರರೊಬ್ಬರು ಹೃತಿಕ್ ಅವರ ಪೋಸ್ಟ್‌ನಲ್ಲಿ ಕಾಮೆಂಟ್ ಮಾಡಿದ್ದಾರೆ; ಇದು ನಟನ ಸೂಪರ್-ಹೀರೋ ಚಿತ್ರ 'ಕ್ರಿಶ್' ಅನ್ನು ಉಲ್ಲೇಖಿಸುತ್ತದೆ.

'ಬ್ರೋ... ಹಿಮಾಚಲ ಪ್ರದೇಶದ ಅದೇ ಪಕ್ಷದ ಮತ್ತೊಬ್ಬ ರಾಜಕಾರಣಿ ಅವರಿಗಿಂತಲೂ ಒಂದು ಹೆಜ್ಜೆ ಮುಂದಿದ್ದಾರೆ' ಎಂದು ಬಿಜೆಪಿ ಸಂಸದೆ ಕಂಗನಾ ರಣಾವತ್ ಅವರತ್ತ ಗಮನ ಸೆಳೆಯುತ್ತಾ ಮತ್ತೊಬ್ಬರು ಪ್ರತಿಕ್ರಿಯಿಸಿದರು.

'ನಿಮ್ಮ ಕಾಮೆಂಟ್ ದಿನವನ್ನೇ ಅದ್ಭುತವಾಗಿಸಿತು' ಎಂದು ಇನ್ನೊಬ್ಬರು ಹೇಳಿದರು.

ಆಗಸ್ಟ್‌ನಲ್ಲಿ ಪುಣೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಮಹಿಳೆಯರನ್ನು ಮಗಳು, ಪತ್ನಿ ಅಥವಾ ತಾಯಿ ಎಂಬ ಮೂರು ಚೌಕಟ್ಟುಗಳಲ್ಲಿ ಬಂಧಿಸಿಡಲಾಗುತ್ತದೆ. ಆದರೆ, ಅವರು ವಾಸ್ತವವಾಗಿ ತಮ್ಮದೇ ಆದ ಅಸ್ತಿತ್ವವನ್ನು ಹೊಂದಿದ್ದಾರೆ ಎಂಬುದನ್ನು ಒತ್ತಿಹೇಳಿದರು.

'ನೀವು ಈ ದೇಶದ ಅಡಿಪಾಯ ಮತ್ತು ಭವಿಷ್ಯವಾಗಿದ್ದೀರಿ. ಪಿತೃಪ್ರಧಾನ ವ್ಯವಸ್ಥೆಯು ನಿಮ್ಮನ್ನು ದಮನಿಸುತ್ತದೆ, ಭಯಭೀತಗೊಳಿಸುತ್ತದೆ ಮತ್ತು ನಿಯಂತ್ರಿಸುತ್ತದೆ. ಈ ಪಿತೃಪ್ರಧಾನ ವ್ಯವಸ್ಥೆಯನ್ನು ಬುಡಮೇಲು ಮಾಡಲು ನಾವೆಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು. ಆ ವ್ಯವಸ್ಥೆಯನ್ನು ಧ್ವಂಸಗೊಳಿಸಿ. ನಿಮಗಾಗಿ ನನ್ನದೊಂದು ಸರಳ ಸಂದೇಶವಿದು: ದೃಢವಾಗಿ ಧ್ವನಿ ಎತ್ತಿ, ಹೆಮ್ಮೆಯಿಂದಿರಿ ಮತ್ತು ಸಮಾಜದಲ್ಲಿ ನಿಮ್ಮ ಸ್ಥಾನಕ್ಕಾಗಿ ಹೋರಾಡಿ' ಎಂದು ಅವರು ಮಹಿಳೆಯರಿಗೆ ಕರೆ ನೀಡಿದರು.

ಈ ವರ್ಷ 'ವಂದೇ ಮಾತರಂ'ಗೆ 150 ವರ್ಷಗಳು ತುಂಬುತ್ತಿವೆ; ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಮಹತ್ವದ ಪಾತ್ರ ವಹಿಸಿದ್ದ ಇದು, ದೇಶದ ರಾಷ್ಟ್ರೀಯ ಪ್ರಜ್ಞೆಯಲ್ಲಿ ಇಂದಿಗೂ ವಿಶೇಷ ಸ್ಥಾನವನ್ನು ಹೊಂದಿದೆ. ಇತ್ತೀಚೆಗೆ 'ವಂದೇ ಮಾತರಂ'ನ ಪೂರ್ಣ ಆವೃತ್ತಿಗೆ ರಾಷ್ಟ್ರಗೀತೆಗೆ ಇರುವಂತೆಯೇ ಕಾನೂನು ರಕ್ಷಣೆ ನೀಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com