'ಹಾದಿ ತಪ್ಪಿದ ಕಂಗನಾ'; ರಾಜಕೀಯ ಅಬ್ಬರದಲ್ಲಿ ವ್ಯಕ್ತಿತ್ವ ಕಳೆದುಕೊಂಡ 'ಕ್ವೀನ್': ಕಿಡಿ ಹೊತ್ತಿಸಿದ ರಾಜೀವ್ ಮಸಂದ್!

ಹಿರಿಯ ಪತ್ರಕರ್ತ ಹಾಗೂ ಚಲನಚಿತ್ರ ವಿಮರ್ಶಕ ರಾಜೀವ್ ಮಸಂದ್ ಅವರು ಇತ್ತೀಚೆಗೆ ಸೈರಸ್ ಸೇಸ್ ಪಾಡ್‌ಕ್ಯಾಸ್ಟ್‌ನಲ್ಲಿ ಕಂಗನಾ ರಣಾವತ್ ಅವರ ಬಗ್ಗೆ ಮುಕ್ತವಾಗಿ ಮಾತನಾಡಿದ್ದು, ಈಗ ಪಕ್ಕಾ ರಾಜಕಾರಣಿಯಾಗಿರುವ ನಟಿಯ ಹಿಂದಿನ ವ್ಯಕ್ತಿತ್ವವನ್ನು ನೆನಪಿಸಿಕೊಂಡಿದ್ದಾರೆ.
 Kangana Ranaut
ಕಂಗನಾ ರಣಾವತ್
Updated on: 

ಮುಂಬೈ: ಒಂದಲ್ಲ ಒಂದು ವಿವಾದಾತ್ಮಕ ಹೇಳಿಕೆಯಿಂದಲೇ ಸದ್ದು ಮಾಡುವ ಬಿಜೆಪಿ ಸಂಸದೆ ಹಾಗೂ ಬಾಲಿವುಡ್ ನಟಿ ಕಂಗನಾ ಅವರು ರಾಜಕೀಯ ಪ್ರವೇಶದ ನಂತರ ಅವರ ನಿಜವಾದ ವ್ಯಕ್ತಿತ್ವವನ್ನು ಕಳೆದುಕೊಂಡಿದ್ದಾರೆ. ನಟಿಯಾಗಿ ಕಂಗನಾ ಇಷ್ಟವಾಗುತ್ತಾರೆ ಮಾಜಿ ಚಲನಚಿತ್ರ ವಿಮರ್ಶಕ ರಾಜೀವ್ ಮಸಂದ್ ಹೇಳಿದ್ದಾರೆ.

ಹಿರಿಯ ಪತ್ರಕರ್ತ ಹಾಗೂ ಚಲನಚಿತ್ರ ವಿಮರ್ಶಕ ರಾಜೀವ್ ಮಸಂದ್ ಅವರು ಇತ್ತೀಚೆಗೆ ಸೈರಸ್ ಸೇಸ್ ಪಾಡ್‌ಕ್ಯಾಸ್ಟ್‌ನಲ್ಲಿ ಕಂಗನಾ ರಣಾವತ್ ಅವರ ಬಗ್ಗೆ ಮುಕ್ತವಾಗಿ ಮಾತನಾಡಿದ್ದು, ಈಗ ಪಕ್ಕಾ ರಾಜಕಾರಣಿಯಾಗಿರುವ ನಟಿಯ ಹಿಂದಿನ ವ್ಯಕ್ತಿತ್ವವನ್ನು ನೆನಪಿಸಿಕೊಂಡಿದ್ದಾರೆ.

"ಕಂಗನಾ ದಿ ಆಕ್ಟರ್" ಅನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನನಗೆ ನಟಿ ಕಂಗನಾರ ಕೊರತೆ ಕಾಡುತ್ತಿದೆ. ಈಗ ಅವರೊಬ್ಬ ಹಾಸ್ಯಾಸ್ಪದ ವ್ಯಕ್ತಿಯಾಗಿದ್ದಾರೆ” ಎಂದು ಮಸಂದ್ ಅವರು, ನಟಿಯ ಪ್ರಸ್ತುತ ಸಾರ್ವಜನಿಕ ಇಮೇಜ್ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

 Kangana Ranaut
"ಕೇಸರಿ ಧರಿಸುವ ಯೋಗ ಗುರು ಸಭ್ಯತೆಯ ಎಲ್ಲಾ ಮಿತಿಗಳನ್ನು ಮೀರಿದ್ದಾರೆ": ಬಾಬಾ ರಾಮ್‌ದೇವ್ ವಿರುದ್ಧ ಕಂಗನಾ ಮತ್ತೆ ಕಿಡಿ

ಮಾಜಿ ಸಿನಿಮಾ ವಿಮರ್ಶಕ ಮತ್ತು ಪ್ರಸ್ತುತ ‘ಧರ್ಮಾ ಕೊಲ್ಯಾಬ್ ಆರ್ಟಿಸ್ಟ್ ಏಜೆನ್ಸಿ’ಯ CEO ಆಗಿರುವ ರಾಜೀವ್ ಮಸಂದ್ ಅವರು ನಟಿ-ರಾಜಕಾರಣಿ ಕಂಗನಾ ರಾಣಾವತ್ ಬಗ್ಗೆ ವ್ಯಕ್ತಪಡಿಸಿರುವ ಅಭಿಪ್ರಾಯ ಇದೀಗ ವೈರಲ್ ಆಗಿದೆ. “ಕಂಗನಾ ರಾಣಾವತ್ ತಮ್ಮ ಹಾದಿ ತಪ್ಪಿದ್ದಾರೆ” ಎಂದು ರಾಜೀವ್ ಅವರು ಅಭಿಪ್ರಾಯಪಟ್ಟಿದ್ದಾರೆ.

ಬಾಲಿವುಡ್‌ನಲ್ಲಿ ಪ್ರಭಾವಿ ವ್ಯಕ್ತಿಗಳು ಅವಕಾಶಗಳನ್ನು ಪಡೆಯುವುದನ್ನು ತಡೆಯುತ್ತಿದ್ದಾರೆ ಎಂಬ ಕಂಗನಾ ಅವರ ಪುನರಾವರ್ತಿತ ಹೇಳಿಕೆಗಳನ್ನು ಸಹ ಮಸಂದ್ ಪ್ರಶ್ನಿಸಿದ್ದಾರೆ. ಮಸಂದ್ ಪ್ರಕಾರ, ನಟರು ಆರಂಭದಲ್ಲಿ ಎದುರಿಸಬಹುದಾದ ತೊಂದರೆಗಳನ್ನು ಲೆಕ್ಕಿಸದೆ ಉದ್ಯಮವು ಅಂತಿಮವಾಗಿ ಯಶಸ್ಸಿಗೆ ಪ್ರತಿಕ್ರಿಯಿಸುತ್ತದೆ.

'ಕ್ವೀನ್' ಸಿನಿಮಾದಲ್ಲಿ ಕಂಗನಾ ಅಭಿನಯ ಹೊಗಳಿದ ವಿಮರ್ಶಕ

ತಮ್ಮ ಟೀಕೆಗಳ ಹೊರತಾಗಿಯೂ, ರಾಜೀವ್ ಮಸಂದ್ ಅವರು ಕಂಗನಾ ಅವರ ನಟನಾ ಸಾಮರ್ಥ್ಯದ ಬಗ್ಗೆ ಸಾಕಷ್ಟು ಹೊಗಳಿಕೆಯ ಮಾತುಗಳನ್ನಾಡಿದ್ದಾರೆ.

ವಿಕಾಸ್ ಬಹ್ಲ್ ಅವರ 2014ರ ಪ್ರಮುಖ ಸಿನಿಮಾ ‘ಕ್ವೀನ್’ನಲ್ಲಿನ ಕಂಗನಾ ಅಭಿನಯವನ್ನು ‘ಅದ್ಭುತ’ ಎಂದು ಶ್ಲಾಘಿಸಿದ ಅವರು, ಮುಂದುವರಿದ ಭಾಗವಾದ ‘ಕ್ವೀನ್ 2’ನಲ್ಲಿ ಅವರು ಮತ್ತೆ ಬಹ್ಲ್ ಅವರೊಂದಿಗೆ ಕೆಲಸ ಮಾಡುವುದನ್ನು ನೋಡಲು ಉತ್ಸುಕರಾಗಿದ್ದೇವೆ ಎಂದು ಹೇಳಿದ್ದಾರೆ. “ಉತ್ತಮ ಚಿತ್ರ ಎಂಬ ಕಾರಣಕ್ಕೆ ಅವರು ಸಿನಿಮಾ ಮಾಡಿದಾಗಲೆಲ್ಲ ಅದ್ಭುತವಾಗಿರುತ್ತಿದ್ದರು. ಆದರೆ ಅಂದಿನಿಂದ ಅದು ಕೇವಲ ‘ಕಂಗನಾ ಶೋ’ ಆಗಿಬಿಟ್ಟಿದೆ” ಎಂದು ರಾಜೀವ್ ‘ಸೈರಸ್ ಸೇಸ್’ ಪಾಡ್ ಕಾಸ್ಟ್ ನಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಅವರನ್ನು “ಉತ್ತಮ ನಟಿ” ಎಂದು ಕರೆದ ರಾಜೀವ್ ಅವರು, ಪಾತ್ರವಾಗಿ ಸಂಪೂರ್ಣವಾಗಿ ಬದಲಾಗಬಲ್ಲ ಕಂಗನಾಳನ್ನು ನೋಡುವ ಅವಕಾಶ ಈಗ ಸಿಗುತ್ತಿಲ್ಲ ಎಂಬ ಕೊರತೆ ವ್ಯಕ್ತಪಡಿಸಿದರು. “ಅವರ ಸಿನಿಮಾದಲ್ಲಿ ನಟಿಯ ಯಾವುದೇ ನೆರಳೂ ಕಾಣಿಸುತ್ತಿರಲಿಲ್ಲ. ಅವರೇ ಪಾತ್ರವಾಗುತ್ತಿದ್ದರು. ಹಾಗಿದ್ದರೂ ನಾನು ಭರವಸೆ ಕಳೆದುಕೊಂಡಿಲ್ಲ. ಕಂಗನಾ ಭವಿಷ್ಯದಲ್ಲಿ ತಮ್ಮ ಕಳೆದುಹೋದ ಖ್ಯಾತಿ ಮರಳಿ ಪಡೆಯಬಹುದು” ಎಂದು ಅವರು ಅಭಿಪ್ರಾಯಪಟ್ಟರು.

ಕಂಗನಾ ತಮ್ಮ ಪ್ರಸ್ತುತ ಸ್ಥಿತಿಯಿಂದ ಹೊರಬರಲು ಮೊದಲು ರಾಜಕೀಯ ಜೀವನ ತ್ಯಜಿಸಬೇಕು ಎಂಬುದನ್ನು ರಾಜೀವ್ ಒಪ್ಪಿಕೊಂಡರು. ಕಂಗನಾ ಅವರು ಆಲಿಯಾ ಭಟ್ ಅವರಿಗೆ ಸಮನಾದ ನಟಿ ಎಂದು ಹೇಳಿದ ಅವರು, ಇಬ್ಬರೂ ಹಿಂದಿ ಚಿತ್ರರಂಗದ ಅತ್ಯುತ್ತಮ ನಟಿಯರು ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com