
ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್ (Saif Ali Khan) ಚಾಕು ಇರಿತಕ್ಕೆ ಒಳಗಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಆರೋಗ್ಯ ಸ್ಥಿತಿಯ ಬಗ್ಗೆ ಮುಂಬೈ ನ ಲೀಲಾವತಿ ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ.
6 ಬಾರಿ ಇರಿತಕ್ಕೆ ಒಳಗಾಗಿರುವ ಸೈಫ್ ಅಲಿ ಖಾನ್ ಅವರಿಗೆ ಸತತ 5 ಗಂಟೆಗಳ ಶಸ್ತ್ರಚಿಕಿತ್ಸೆ ಬಳಿಕ ಅವರ ದೇಹದಿಂದ 2.5 ಇಂಚ್ ಬ್ಲೇಡ್ ನ್ನು ಹೊರತೆರೆಯಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಸೈಫ್ ಅಲಿ ಖಾನ್ ಅತ್ಯುತ್ತಮವಾಗಿ ಚೇತರಿಸಿಕೊಳ್ಳುತ್ತಿದ್ದಾರೆ, ಅವರು ಈಗ ನಡೆಯುವ ಸ್ಥಿತಿಯಲ್ಲಿದ್ದಾರೆ, ಹೆಚ್ಚಿನ ಸಮಸ್ಯೆ ಇಲ್ಲ" ಎಂದು ಚಿಕಿತ್ಸೆ ನೀಡುತ್ತಿರುವ ಡಾ. ನಿತಿನ್ ಡಾಂಗೆ ಹೇಳಿದ್ದಾರೆ. "ನಾವು ಅವರನ್ನು ಐಸಿಯುನಿಂದ ವಿಶೇಷ ವಾರ್ಡ್ ಗೆ ಸ್ಥಳಾಂತರಿಸಿದ್ದೇವೆ. ಅವರ ಬೆನ್ನುಮೂಳೆಯಲ್ಲಿ ಗಾಯವಾದ ಕಾರಣ ಸುಮಾರು ಒಂದು ವಾರದವರೆಗೂ ಸಂದರ್ಶಕರ ಸಂಚಾರವನ್ನು ನಿರ್ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.
"ಪಾರ್ಶ್ವವಾಯು ಎದುರಾಗುವ ಅಪಾಯವಿಲ್ಲ" ಎಂದು ವೈದ್ಯರು ಹೇಳಿದ್ದಾರೆ. ಲೀಲಾವತಿ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ನೀರಜ್ ಉತ್ತಮಿ, ಸೈಫ್ ಅಲಿ ಖಾನ್ "ಸಿಂಹದಂತೆ" ಆಸ್ಪತ್ರೆಗೆ ನಡೆದರು ಮತ್ತು ಅವರ ಮಗ ತೈಮೂರ್ ಅಲಿ ಖಾನ್ ಅವರ ಜೊತೆಗಿದ್ದರು ಎಂದು ಹೇಳಿದ್ದಾರೆ. ಸೈಫ್ ಅಲಿ ಖಾನ್ ಆಸ್ಪತ್ರೆಗೆ ಬಂದ ಕ್ಷಣದಲ್ಲಿ ಸ್ಟ್ರೆಚರ್ ಅನ್ನು ಸಹ ಬಳಸಲಿಲ್ಲ ಎಂದು ಅವರು ಹೇಳಿದರು.
"ಅವರು ಆಸ್ಪತ್ರೆಗೆ ಬಂದಾಗ ರಕ್ತದಲ್ಲಿ ತೊಯ್ದಿದ್ದರು. ಅವರು 'ನಿಜವಾದ ನಾಯಕ," ಎಂದು ಉತ್ತಮಿ ಹೇಳಿದ್ದಾರೆ. "ಅವರು ತುಂಬಾ ಅದೃಷ್ಟಶಾಲಿ. ಚಾಕು ಇನ್ನು ಕೇವಲ 2 ಮಿಮೀ ಒಳಗೆ ಹೋಗಿದ್ದರೆ ಅವರಿಗೆ ಗಂಭೀರ ಗಾಯವಾಗಿ ಅಪಾಯ ಎದುರಾಗುತ್ತಿತ್ತು ಎಂದು ಉತ್ತಮಿ ಹೇಳಿದ್ದಾರೆ.
ಸೈಫ್ ಅಲಿ ಖಾನ್ ಅವರ ಕುಟುಂಬ ಸದಸ್ಯರು ವಾಸಿಸುವ 12 ಅಂತಸ್ತಿನ ಅಪಾರ್ಟ್ಮೆಂಟ್ ನಲ್ಲಿ ಸೈಫ್ ಮೇಲೆ ಮಧ್ಯರಾತ್ರಿ ದಾಳಿ ನಡೆದಿತ್ತು.
Advertisement