ಆಂಧ್ರ ಪ್ರದೇಶ ಚುನಾವಣೆಯಲ್ಲಿ ಐತಿಹಾಸಿಕ ಜಯ ದಾಖಲಿಸಿದ ಪವರ್ ಸ್ಟಾರ್ ಪವನ್ ಕಲ್ಯಾಣ್ ಗೆ ಅದ್ಧೂರಿ ಸ್ವಾಗತ ದೊರೆತಿದೆ.
ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಎನ್ ಡಿಎ ಮೈತ್ರಿಕೂಟದ ಮಿತ್ರಪಕ್ಷಗಳಾದ ಟಿಡಿಪಿ ಮತ್ತು ಜನಸೇನಾ ಪಕ್ಷಗಳು ಐತಿಹಾಸಿಕ ಜಯ ದಾಖಲಿಸಿದೆ.
ಈ ವೇಳೆ ಮನೆಯ ಗೇಟ್ ಬಳಿ ಕಾದು ನಿಂತಿದ್ದ ಮೆಗಾ ಫಾಮಿಲಿಯ ಕುಟುಂಬ ಸದಸ್ಯರು ಪವನ್ ಕಲ್ಯಾಣ್ ಮತ್ತು ದಂಪತಿಗೆ ಆರತಿ ಮಾಡಿ ಹೂಗುಚ್ಚ ನೀಡಿ ಸ್ವಾಗತಿಸಿದರು.
ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಎನ್ ಡಿಎ ಮೈತ್ರಿಕೂಟದ ಮಿತ್ರಪಕ್ಷಗಳಾದ ಟಿಡಿಪಿ ಮತ್ತು ಜನಸೇನಾ ಪಕ್ಷಗಳು ಐತಿಹಾಸಿಕ ಜಯ ದಾಖಲಿಸಿದೆ.
ಈ ಜಯ ಬೆನ್ನಲ್ಲೇ ನಟ ಪವನ್ ಕಲ್ಯಾಣ್ ತಮ್ಮ ಅಣ್ಣ ಚಿರಂಜೀವಿ ಮನೆಗೆ ತೆರಳಿದ್ದಾರೆ.
ಅಣ್ಣ ಚಿರಂಜೀವಿ ಮನೆಗೆ ಬಂದ ಪವನ್ ಕಲ್ಯಾಣ್ ಗೆ ಕುಟುಂಬ ಸದಸ್ಯರು ಭರ್ಜರಿ ಸ್ವಾಗತ ನೀಡಿದ್ದಾರೆ.
ಅಣ್ಣಂದಿರಾದ ಚಿರಂಜೀವಿ, ನಾಗಬಾಬು, ನಟ ರಾಮ್ ಚರಣ್ ಸೇರಿದಂತೆ ಮೆಗಾ ಕುಟುಂಬದ ಎಲ್ಲ ಸದಸ್ಯರು ಪವನ್ ಕಲ್ಯಾಣ್ ಗೆ ಅದ್ಧೂರಿ ಸ್ವಾಗತ ನೀಡಿದರು.
ಪವನ್ ಕಲ್ಯಾಣ್ ಕಾರಿನಿಂದ ಇಳಿಯುತ್ತಲೇ ಪವನ್ ಕಲ್ಯಾಣ್ ಮತ್ತು ಅವರ ಪತ್ನಿ ಮೇಲೆ ಅಭಿಮಾನಿಗಳು ಹೂವಿನ ಸುರಿಮಳೆ ಗೈದರು.
ಈ ವೇಳೆ ಮನೆಯ ಗೇಟ್ ಬಳಿ ಕಾದು ನಿಂತಿದ್ದ ಮೆಗಾ ಫಾಮಿಲಿಯ ಕುಟುಂಬ ಸದಸ್ಯರು ಪವನ್ ಕಲ್ಯಾಣ್ ಮತ್ತು ದಂಪತಿಗೆ ಆರತಿ ಮಾಡಿ ಹೂಗುಚ್ಚ ನೀಡಿ ಸ್ವಾಗತಿಸಿದರು.
ಈಗಾಗಲೇ ಚುನಾವಣೆಯಲ್ಲಿ ತಮ್ಮ ಸಹೋದರನ ಯಶಸ್ಸಿನ ಬಗ್ಗೆ ಹೆಮ್ಮೆ ಪಡುತ್ತಿರುವ ಮೆಗಾಸ್ಟಾರ್ ಚಿರಂಜೀವಿ ಅವರು ಪವನ್ ಕಲ್ಯಾಣ್ ದಂಪತಿಗೆ ರೇಷ್ಮೆ ಬಟ್ಟೆಗಳನ್ನು ನೀಡಿ ಗೌರವಿಸಿದರು.
ಈ ವೇಳೆ ಚಿರಂಜೀವಿಯವರನ್ನು ನೋಡುತ್ತಲೇ ನಟ ಪವನ್ ಕಲ್ಯಾಣ್ ಚಿರಂಜೀವಿ ಕಾಲಿಗೆರಗಿ ಆಶೀರ್ವಾದ ಪಡೆದರು. ಈ ವೇಳೆ ಚಿರಂಜೀವಿ ಪವನ್ ಕಲ್ಯಾಣ್ ಗೆ ಮುತ್ತಿಟ್ಟು ಪ್ರೀತಿ ತೋರಿದರು.
ಅಂದಹಾಗೆ ಕಳೆದ 10 ವರ್ಷಗಳಿಂದ ಆಂಧ್ರ ಪ್ರದೇಶ ರಾಜಕೀಯದಲ್ಲಿ ಸತತ ಸೋಲು ಕಂಡಿದ್ದ ಪವನ್, ಈ ಬಾರಿ ಐತಿಹಾಸಿಕ ಜಯ ದಾಖಲಿಸಿದ್ದಾರೆ.
ಅಂದಹಾಗೆ ಕಳೆದ 10 ವರ್ಷಗಳಿಂದ ಆಂಧ್ರ ಪ್ರದೇಶ ರಾಜಕೀಯದಲ್ಲಿ ಸತತ ಸೋಲು ಕಂಡಿದ್ದ ಪವನ್, ಈ ಬಾರಿ ಐತಿಹಾಸಿಕ ಜಯ ದಾಖಲಿಸಿದ್ದಾರೆ.
ಜನಸೇನಾ ಪಕ್ಷ ಸ್ಪರ್ಧಿಸಿದ್ದ ಎಲ್ಲ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಭರ್ಜರಿ ಜಯ ಸಾಧಿಸಿದ್ದು, 21 ಅಭ್ಯರ್ಥಿಗಳು ವಿಧಾನಸಭಾ ಮತ್ತು ಇಬ್ಬರು ಲೋಕಸಭಾ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಹಾಲಿ ಟಿಡಿಪಿ ಸರ್ಕಾರದಲ್ಲಿ ಪವನ್ ಕಲ್ಯಾಣ್ ಮತ್ತು ಅವರ ಜನಸೇನಾ ಪಕ್ಷಕ್ಕೆ ಪ್ರಮುಖ ಹುದ್ದೆಗಳನ್ನು ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.