ಡಿಸಿಪಿ ಕಾರಿನ ಮೇಲೆ ದಾಳಿ ನಡೆಸಿದ್ದ ಡಿಂಪಲ್ ಹಯಾತಿ ವಿರುದ್ಧ ಪ್ರಕರಣ: ನಟಿ ಕೋಪಕ್ಕೆ ಕಾರಣವೇನು?


ನಟಿ ಡಿಂಪಲ್ ಹಯಾತಿ ವಿರುದ್ಧ ಜುಬ್ಲಿ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಐಪಿಎಸ್ ಅಧಿಕಾರಿ ಹಾಗೂ ಟ್ರಾಫಿಕ್ ಡಿಸಿಪಿ ರಾಹುಲ್ ಹೆಗ್ಡೆ ಅವರ ಕಾರಿನ ಚಾಲಕ ಚೇತನ್ ಕುಮಾರ್ ಅವರ ಕಾರಿನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇರೆಗೆ ನಟಿ ಹಾಗೂ ಡೇವಿಡ್ ಎಂಬ ವ್ಯಕ್ತಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.