ದಾದಾಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ; ರಿಷಬ್ ಶೆಟ್ಟಿ ಭರವಸೆಯ ನಟ
ಮುಂಬೈಯಲ್ಲಿ ಕಳೆದ ರಾತ್ರಿ ದಾದಾಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಬಾಲಿವುಡ್ ನ ನಟ, ನಟಿಯರು ಸೇರಿ ಹಲವು ಕಲಾವಿದರು ರೆಡ್ ಕಾರ್ಪೆಟ್ ನಲ್ಲಿ ಮಿಂಚಿದರು.
ಮುಂಬೈಯಲ್ಲಿ ಕಳೆದ ರಾತ್ರಿ ದಾದಾಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಕಳೆದ ವರ್ಷ ತೆರೆಕಂಡು ಅಪಾರ ಯಶಸ್ಸು ಗಳಿಸಿದ ಕನ್ನಡದ ಚಿತ್ರ ಕಾಂತಾರ ಚಿತ್ರದ ನಟನೆ, ನಿರ್ದೇಶನಕ್ಕೆ ರಿಷಬ್ ಶೆಟ್ಟಿ ಅವರಿಗೆ 2023ನೇ ಸಾಲಿನ ಭರವಸೆಯ ನಟ ಪ್ರಶಸ್ತಿ ಸಿಕ್ಕಿದೆ.
ಬಿಳಿ ಸೀರೆಯಲ್ಲಿ ಉಟ್ಟ ಆಲಿಯಾ ಅಂದವಾಗಿ ಕಾಣುತ್ತಿದ್ದರು. ಈ ಸಂದರ್ಭಕ್ಕಾಗಿ ರೇಖಾ ಅವರು ತಮ್ಮ ನೆಚ್ಚಿನ ಕಾಂಜೀವರಂ ಸೀರೆಯನ್ನು ಧರಿಸಿ ಬಂದು ಕಂಗೊಳಿಸಿದರು.
ಅತ್ಯುತ್ತಮ ನಟಿ ಪ್ರಶಸ್ತಿ ಗಳಿಸಿದ ಆಲಿಯಾ ಭಟ್
ಕಾಂತಾರ ಚಿತ್ರವನ್ನು ನಿರ್ದೇಶಿಸಿ ನಟಿಸಿ ಡಿವೈನ್ ಸ್ಟಾರ್ ಎಂದು ಅಭಿಮಾನಿಗಳಿಂದ ಪ್ರೀತಿಯ ಬಿರುದು ಪಡೆದಿರುವ ರಿಷಬ್ ಶೆಟ್ಟಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದಿದ್ದಾರೆ.
'ಈ ಪ್ರೀತಿ, ಪುರಸ್ಕಾರಕ್ಕೆ ನಾನು ಸದಾ ಚಿರಋಣಿ. ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸಿಕ್ಕಿರುವುದು ನನಗೆ ಇನ್ನಷ್ಟು ಸಿನೆಮಾ ಮಾಡುವ,ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ' ಎಂದು ರಿಷಬ್ ಶೆಟ್ಟಿ ಬರೆದುಕೊಂಡಿದ್ದಾರೆ.
'ನನ್ನನ್ನು ನಂಬಿ ಅವಕಾಶ ಕೊಟ್ಟಿದ ಹೊಂಬಾಳೆ ಫಿಲ್ಮ್ ಮತ್ತು ವಿಜಯ್ ಕಿರಗಂದೂರು ಸರ್ ಅವರಿಗೆ ಋಣಿಯಾಗಿರುವೆ. ನಿಮ್ಮ ಜೊತೆ ಕೈ ಜೋಡಿಸಿ ಹೆಚ್ಚು ಸಿನಿಮಾ ಮಾಡಲು ಕಾಯುತ್ತಿರುವೆ' ಎಂದು ಹೇಳಿದ್ದಾರೆ.
'ಕಾಂತಾರ ಇಡೀ ತಂಡದಿಂದ ಇದು ಸಾಧ್ಯವಾಗಿದ್ದು ಹೀಗಾಗಿ ಪ್ರತಿಯೊಬ್ಬ ಕಲಾವಿದರು ಮತ್ತು ತಂತ್ರಜ್ಞರಿಗೆ ಈ ಪ್ರಶಸ್ತಿಯನ್ನು ಅರ್ಪಿಸುವೆ. ನನ್ನ ಪಿಲ್ಲರ್ ಆಫ್ ಲೈಫ್ ಪ್ರಗತಿ ಶೆಟ್ಟಿ ಕೂಡ' ಎಂದು ಹೇಳಿದ್ದಾರೆ.
ಈ ಪ್ರಶಸ್ತಿಯನ್ನು ದೈವ ನರ್ತಕರು, ಕರ್ನಾಟಕದ ಜನತೆ, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಮತ್ತು ಭಗವಾನ್ ಸರ್‌ಗೆ ಅರ್ಪಿಸುವೆ ಎಂದಿದ್ದಾರೆ.
ಅತ್ಯುತ್ತಮ ನಟ 2023 ವಿಮರ್ಶಕರ ಆಯ್ಕೆ ಪ್ರಶಸ್ತಿ ಪಡೆದ ವರುಣ್ ಧವನ್
'ರೋಜಾ' ಗಾಯಕ ಟ್ರೋಫಿಯನ್ನು ಗೆದ್ದು ಹರಿಹರನ್ ನೀಲಿ ಸೂಟ್ ನಲ್ಲಿ ಬಂದು ಟ್ರೋಫಿ ಪಡೆದುಕೊಂಡರು.
'ದೂಬಾ ದೂಬಾ' ಗಾಯಕ ಮೋಹಿತ್ ಚೌಹಾಣ್ ತನ್ನ ಸಿಗ್ನೇಚರ್ ಕ್ಯಾಪ್ ಅನ್ನು ಪ್ರದರ್ಶಿಸಿದರು.
ಪಿಂಕ್ ಸಲ್ವಾರ್ ಕಮೀಜ್ ನಲ್ಲಿ ಮಗನೊಂದಿಗೆ ಬಂದ ರೂಪಾ ಗಂಗೂಲಿ
ಬ್ಲಾಕ್ ಔಟ್ ಫಿಟ್ ನಲ್ಲಿ ನಿರ್ದೇಶಕ ಆರ್ ಬಲ್ಕಿ
'ಡಾಪರ್' ಮನೀಷ್ ಗೀಕಿ ಗ್ಲಾಸ್ ಜೊತೆಗೆ ಬ್ಲಿಂಗಿ ಜಾಕೆಟ್ ಧರಿಸಿದ ಮನೀಶ್ ಪಾಲ್