ಥಾಯ್ಲೆಂಡ್‌ನ ಆಂಟೋನಿಯಾ ಪೊರ್ಸಿಲ್ಡ್ ಮತ್ತು ಆಸ್ಟ್ರೇಲಿಯಾದ ಮೊರಾಯಾ ವಿಲ್ಸನ್ ಅವರು ಸೌಂದರ್ಯ ಸ್ಪರ್ಧೆಯಲ್ಲಿ ಕ್ರಮವಾಗಿ ಮೊದಲ ಮತ್ತು ಎರಡನೇ ರನ್ನರ್ ಅಪ್ ಆಗಿ ಆಯ್ಕೆಯಾಗಿದ್ದಾರೆ.
23 ವರ್ಷದ ಶೆನ್ನಿಸ್ ಪಲಾಸಿಯೋಸ್, 2022ರ ಮಿಸ್ ಯೂನಿವರ್ಸ್ ಆರ್ ಬೊನ್ನಿ ನೊಲಾ ಅವರಿಂದ ಕಿರೀಟವನ್ನು ಧರಿಸಿ ಭಾವುಕರಾದರು.
2016 ರಲ್ಲಿ ಮಿಸ್ ಯೂನಿವರ್ಸ್ ಶೆನ್ನಿಸ್ ಪಲಾಸಿಯೋಸ್ ತನ್ನ ಮೊದಲ ಪ್ರದರ್ಶನವನ್ನು ಮಾಡಿದರು. 2016ರಲ್ಲಿ ಅವರು ಮಿಸ್ ಟೀನ್ ನಿಕರಗಾವ ಕಿರೀಟ ಧರಿಸಿದ್ದರು.
ಮಿಸ್ ಯೂನಿವರ್ಸ್ 2023 ಶೆನ್ನಿಸ್ ಪಲಾಸಿಯೋಸ್ ಕಿರೀಟವನ್ನು ಅಲಂಕರಿಸಿದ ನಂತರ ಪ್ರೇಕ್ಷಕರನ್ನು ಸ್ವಾಗತಿಸಿದರು. ಭಾರತೀಯ ಕಾಲಮಾನ ಪ್ರಕಾರ ಇಂದು ನವೆಂಬರ್ 19 ರಂದು ಎಲ್ ಸಾಲ್ವಡಾರ್‌ನ ಸ್ಯಾನ್ ಸಾಲ್ವಡಾರ್‌ನಲ್ಲಿರುವ ಜೋಸ್ ಅಡಾಲ್ಫೋ ಪಿನೆಡಾ ಅರೆನಾದಲ್ಲಿ ಸೌಂದರ್ಯ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
2020 ರಲ್ಲಿ, ಶೆನ್ನಿಸ್ ಪಲಾಸಿಯೋಸ್ ಅವರು ಮಿಸ್ ಮುಂಡೋ ನಿಕರಾಗುವಾ 2020 ರ ವಿಜೇತರಾಗಿಯೂ ಆಯ್ಕೆಯಾಗಿದ್ದರು. ಮೇ 31, 2000 ರಂದು ನಿಕರಾಗುವಾ, ಮನಾಗುವಾದಲ್ಲಿ ಜನಿಸಿದರು.
ಶೆನ್ನಿಸ್ ಪಲಾಸಿಯೊಸ್ ಪೋರ್ಟೊ ರಿಕೊದ ಸ್ಯಾನ್ ಜುವಾನ್‌ನಲ್ಲಿ ನಡೆದ ವಿಶ್ವ ಸುಂದರಿ 2021 ಸ್ಪರ್ಧೆಯಲ್ಲಿ ನಿಕರಾಗುವಾವನ್ನು ಪ್ರತಿನಿಧಿಸಿದರು. ಟಾಪ್ 40 ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದರು.