2015ರಲ್ಲಿ ಭಾರತದ ಆಟೋ ಮೊಬೈಲ್ ಕ್ಷೇತ್ರದಲ್ಲಿ ಸಾಕಷ್ಟು ಬೆಳವಣಿಗೆಗಳಾಗಿದ್ದು, ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಕಾರುಗಳ ಮಾರಾಟ ಪ್ರಮಾಣ ಕ್ಷೀಣಿಸಿದೆ ಎಂದು ತಜ್ಞರು ತಿಳಿಸಿದ್ದಾರೆ. ಕಳೆದ ಏಪ್ರಿಲ್ ನಲ್ಲಿನ ವರದಿಯಂತೆ ಭಾರತದಲ್ಲಿ ಕಾರು ಮಾರಾಟ ಪ್ರಮಾಣ ಶೇ.10.15ಕ್ಕೆ ಕುಸಿದಿತ್ತು, ಇ
ನಂ-9 ಮಾರುತಿ ಸೆಲೇರಿಯೋ ಒಂಭತ್ತನೇ ಸ್ಥಾನದಲ್ಲಿ ಮಾರುತಿ ಸಂಸ್ಥೆಯ ಸೆಲೇರಿಯೋ ಸರಣಿಯ ಕಾರುಗಳಿದ್ದು, 2015ರಲ್ಲಿ 6,956 ಕಾರುಗಳು ಮಾರಾಟವಾಗಿವೆ.
ನಂ-8 ಹುಂಡೈ ಇಯಾನ್ ಎಂಟನೇ ಸ್ಥಾನದಲ್ಲಿ ಮಾರುತಿ ಸಂಸ್ಥೆಯ ಇಯಾನ್ ಸರಣಿಯ ಕಾರುಗಳಿದ್ದು, ಈ ಬಾರಿ 7,154 ಕಾರುಗಳು ಮಾರಾಟವಾಗಿವೆ.
ನಂ-7 ಮಾರುತಿ ಬಲೇನೋ ಏಳನೇ ಸ್ಥಾನದಲ್ಲಿ ಮಾರುತಿ ಸಂಸ್ಥೆಯ ಬಲೇನೋ ಕಾರುಗಳಿದ್ದು, ಪ್ರಸಕ್ತ ಸಾಲಿನಲ್ಲಿ ಈ ಸರಣಿಯ 9,074 ಕಾರುಗಳು ಮಾರಾಟವಾಗಿವೆ.
ನಂ-6 ಹುಂಡೈ ಐ20 ಆರನೇ ಸ್ಥಾನದಲ್ಲಿ ಹುಂಡೈ ಸಂಸ್ಥೆಯ ಐ20 ಸರಣಿಯ ಕಾರುಗಳಿದ್ದು, ಪ್ರಸಕ್ತ ಸಾಲಿನಲ್ಲಿ ಈ ಸರಣಿಯ 10,074 ಕಾರುಗಳು ಮಾರಾಟವಾಗಿವೆ.
ನಂ-5 ಮಾರುತಿ ಸ್ವಿಫ್ಟ್ ಐದನೇ ಸ್ಥಾನದಲ್ಲಿ ಮಾರುತಿ ಸಂಸ್ಥೆಯ ಸ್ವಿಫ್ಟ್ ಕಾರುಗಳಿದ್ದು, 2015ರಲ್ಲಿ 11, 859 ಕಾರುಗಳು ಮಾರಾಟವಾಗಿವೆ.
ನಂ-4 ಹುಂಡೈ ಗ್ರಾಂಡ್ ಐ10 ನಾಲ್ಕನೇ ಸ್ಥಾನದಲ್ಲಿ ಹುಂಡೈ ಸಂಸ್ಥೆಯ ಐ10 ಸರಣಿಯ ಕಾರುಗಳಿದ್ದು, ಪ್ರಸಕ್ತ ಸಾಲಿನಲ್ಲಿ ಈ ಸರಣಿಯ 12, 899 ಕಾರುಗಳು ಮಾರಾಟವಾಗಿವೆ
ನಂ-3 ಮಾರುತಿ ವ್ಯಾಗನಾರ್ ಮಾರುತಿ ಸಂಸ್ಥೆಯ ವ್ಯಾಗನಾರ್ ಸರಣಿಯ ಕಾರುಗಳು ಮೂರನೇ ಸ್ಥಾನದಲ್ಲಿದ್ದು, ಈ ವರ್ಷ 13, 986 ಕಾರುಗಳು ಮಾರಾಟವಾಗಿವೆ.
ನಂ-2 ಮಾರುತಿ ಸಂಸ್ಥೆಯ ಸೆಡಾನ್ ಡಿಸೈರ್ ಎರಡನೇ ಸ್ಥಾನದಲ್ಲಿ ಮತ್ತದೇ ಮಾರುತ ಸಂಸ್ಥೆ ಇದ್ದು, ಮಾರುತಿಯ 15, 463 ಸೆಡಾನ್ ಡಿಸೈರ್ ಕಾರುಗಳು ಮಾರಾಟವಾಗಿವೆ.
ನಂ-1 ಮಾರುತಿ ಸಂಸ್ಥೆಯ ಆಲ್ಟೋ ಖ್ಯಾತ ಕಾರು ತಯಾರಿಕಾ ಸಂಸ್ಥೆ ಮಾರುತಿ ಪ್ರಸಕ್ತ ವರ್ಷ ಮೊದಲ ಸ್ಥಾನದಲ್ಲಿದ್ದು, ಭಾರತದಲ್ಲಿ ಒಟ್ಟಾರೆ 21, 995 ಕಾರುಗಳನ್ನು ಮಾರಾಟದೊಂದಿಗೆ ಅಗ್ರ ಸ್ಥಾನ ಪಡೆದಿದೆ.
ನಂ-10 ಮಹೀಂದ್ರ ಬೊಲೆರೋ 10ನೇ ಸ್ಥಾನದಲ್ಲಿ ಮಹೀಂದ್ರ ಸಂಸ್ಥೆ ಬೊಲೆರೋ ಸರಣಿಯ ಕಾರುಗಳಿದ್ದು, ಪ್ರಸಕ್ತ ಸಾಲಿನಲ್ಲಿ 6,875 ಕಾರುಗಳು ಮಾರಾಟವಾಗಿವೆ.