ಮಂಗೋಲಿಯಾದಲ್ಲಿ ಭೀಕರ "ಡ್ಜೂಡ್" ಹಿಮಪಾತ ಕಳೆದ ಜನವರಿಯಲ್ಲಿ ಮಂಗೋಲಿಯಾದಲ್ಲಿ ಸಂಭವಿಸಿದ ಭೀಕರ ಹಿಮಪಾತದಿಂದಾಗಿ ಸಾವಿರಾರು ಮಂದಿ ಪ್ರಾಣತೆತ್ತಿದ್ದರು. ಭೀಕರ ಚಳಿ ಹಾಗೂ ಹಿಮಪಾತದಿಂದಾಗಿ ಲಕ್ಷಾಂತರ ಸಾಕು ಪ್ರಾಣಿಗಳು ಕೂಡ ಅಸು ನೀಗಿದ್ದವು. 2015ರ ನವೆಂಬರ್ ನಿಂದ ಆರಂಭಗೊಂಡಿದ್ದ ಹಿಮಪಾತ ಜನವರಿ ತಿಂಗ
ನ್ಯೂಜಿಲೆಂಡ್ ನಲ್ಲಿ ಭೀತಿ ಮೂಡಿಸಿದ್ದ ಸುನಾಮಿ ಚಿಲಿಯಲ್ಲಿ ಸಂಭವಿಸಿದ್ದ ಪ್ರಬಲ ಭೂಕಂಪನದಿಂದಾಗಿ ನ್ಯೂಜಿಲೆಂಡ್ ನಲ್ಲಿ ಸುನಾಮಿ ಭೀತಿ ಆವರಿಸಿತ್ತು. ಸೆಪ್ಟೆಂಬರ್ 17ರಂದು ನ್ಯೂಜಿಲೆಂಡ್ ಕರಾವಳಿ ತೀರಕ್ಕೆ ಅಲ್ಪ ಪ್ರಮಾಣದ ಸುನಾಮಿ ಅಲೆಗಳು ಅಪ್ಪಳಿಸಿದ್ದವು.
ನೇಪಾಳದಲ್ಲೂ ಪ್ರವಾಹ ಜುಲೈ ತಿಂಗಳಲ್ಲಿ ನೇಪಾಳದ ಭೊಟೆಕೋಸಿ ನದಿಯಲ್ಲಿ ಉಂಟಾದ ಪ್ರವಾಹದಿಂದಾಗಿ ಮೂರು ಮಂದಿ ಸಾವನ್ನಪ್ಪಿದ್ದರು. ಅಂತೆಯೇ ನದಿ ಪಾತ್ರದಲ್ಲಿದ್ದ 38 ಮನೆಗಳು ಕೊಚ್ಚಿಕೊಂಡು ಹೋಗಿದ್ದವು.
ಬಾಂಗ್ಲಾದೇಶದಲ್ಲಿ ಪ್ರವಾಹ ಜುಲೈ 29ರಂದು ಬಾಂಗ್ಲಾದೇಶದಲ್ಲಿ ಉಂಟಾಗಿದ್ದ ಪ್ರಹಾವದಿಂದಾಗಿ 42 ಮಂದಿ ಅಸುನೀಗಿದ್ದರು. ಬಾಂಗ್ಲಾದ 7 ಜಿಲ್ಲೆಗಳಲ್ಲಿ ಸಂಭವಿಸಿದ್ದ ಭೀಕರ ಪ್ರವಾಹದಿಂದಾಗಿ ಸುಮಾರು 8 ಲಕ್ಷ ಮಂದಿ ನಿರಾಶ್ರಿತರಾಗಿದ್ದರು. ಬಾಂಗ್ಲಾದ ಪ್ರಮುಖ ನದಿಗಳು ಅಪಾಯಮಟ್ಟ ಮೀರಿ ಹರಿದಿದ್ದವು. ಸುಮಾರ
ಶ್ರೀಲಂಕಾದಲ್ಲಿ ರೋನು ಚಂಡ ಮಾರುತ ಮತ್ತು ಪ್ರವಾಹ ಮೇ 15ರಂದು ಶ್ರೀಲಂಕಾದಲ್ಲಿ ಸಂಭವಿಸಿದ್ದ ರೋನು ಚಂಡಮಾರುತದಿಂದಾಗಿ ಭಾರಿ ಮಳೆ ಹಾಗೂ ಪ್ರವಾಹ ಉಂಟಾಗಿತ್ತು. ಪ್ರವಾಹದಿಂದಾಗಿ ಅದರ 25 ಜಿಲ್ಲೆಗಳ ಪೈಕಿ 22 ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿತ್ತು. ಪ್ರವಾಹದಲ್ಲಿ 104 ಮಂದಿ ಸಾವನ್ನಪ್ಪಿ,
ಈಕ್ವೇಡಾರ್ ಭೂಕಂಪನ ಏಪ್ರಿಲ್ 17ರಂದು ಈಕ್ವೆಡಾರ್ ನಲ್ಲಿ ಸಂಭವಿಸಿದ್ದ ಪ್ರಬಲ ಭೂಕಂಪನದಲ್ಲಿ ಸುಮಾರು 443 ಮಂದಿ ಸಾವನ್ನಪ್ಪಿದ್ದರು. ಅಂತೆಯೇ ಭೂಕಂಪನದಿಂದಾಗಿ ಹಲವು ಕಟ್ಟಡಗಳು ನೆಲಸಮಗೊಂಡಿದ್ದವು. ಘಟನೆಯಲ್ಲಿ 4027 ಮಂದಿ ಸಾವನ್ನಪ್ಪಿದ್ದರು. ಸರ್ಕಾರಿ ಇಲಾಖೆಗಳು ತಿಳಿಸಿರುವಂತೆ 805 ಬೃಹತ್ ಕಟ್ಟಡಗ
ಪಾಕಿಸ್ತಾನದಲ್ಲಿ ಭಾರಿ ಮಳೆ-ಪ್ರವಾಹ ಇದೇ ಮಾರ್ಚ್ 7ರಂದು ಪಾಕಿಸ್ತಾನದಲ್ಲೂ ಭೀಕರ ಪ್ರವಾಹ ಉಂಟಾಗಿತ್ತು. ಖೈಬರ್ ಪಖ್ತುಂಕ್ವ ಪ್ರದೇಶದಲ್ಲಿ ಬಿದ್ದ ಭಾರಿ ಮಳೆ ಪ್ರವಾಹಕ್ಕೆ ಕಾರಣವಾಗಿತ್ತು. ಅಂದಿನ ಪ್ರವಾಹದಲ್ಲಿ ಪಾಕಿಸ್ತಾನದ ಪಂಜಾಬ್, ಬಲೂಚಿಸ್ತಾನದಲ್ಲಿ ಸುಮಾರು 62 ಮಂದಿ ಸಾವನ್ನಪ್ಪಿ, 97 ಮಂದಿ ಗಂ
ಸರ್ಬಿಯಾದಲ್ಲಿ ಭೀಕರ ಪ್ರವಾಹ ಮಾರ್ಚ್ 7ರಂದು ಸರ್ಬಿಯಾದಲ್ಲಿ ಸಂಭವಿಸಿದ್ದ ಭಾರಿ ಮಳೆ ಭೀಕರ ಪ್ರವಾಹವನ್ನು ತಂದೊಡ್ಡಿತ್ತು. ಪ್ರವಾಹದ ಅಬ್ಬರಕ್ಕೆ ಸರ್ಬಿಯಾದ ಬರೊಬ್ಬರಿ 14 ಜಿಲ್ಲೆಗಳಲ್ಲಿ ಅಕ್ಷರಶಃ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿತ್ತು. ಪ್ರವಾಹದ ರಭಸಕ್ಕೆ ಸುಮಾರು 710 ಮನೆಗಳು ಕೊಚ್ಚಿಕೊಂಡು ಹ
ಫಿಜಿಯನ್ನು ಕಾಡಿದ್ದ ಚಂಡಮಾರುತ ಫೆಬ್ರವರಿ21ರಂದು ಫಿಜಿಯಲ್ಲಿ ಸಂಭವಿಸಿದ್ದ ಟ್ರಾಪಿಕಲ್ ಚಂಡಮಾರುತ ಮಾರುತದಿಂದಾಗಿ ಸುಮಾರು 3 ಲಕ್ಷಕ್ಕೂ ಅಧಿಕ ಮಂದಿ ಅಕ್ಷರಶಃ ನೆಲೆಕಳೆದುಕೊಂಡಿದ್ದರು. ಘಟನೆಯಲ್ಲಿ ಸುಮಾರು 42 ಮಂದಿ ಸಾವಿಗೀಡಾಗಿ, 300ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಚಂಡಮಾರುತದ ಪರಿಣಾಮ ಸುಮಾರು
ತೈವಾನ್ ಭೂಕಂಪನ ಫೆಬ್ರವರಿ 6ರಂದು ಚೀನಾದ ತೈವಾನ್ ನಲ್ಲಿ ಸಂಭವಿಸಿದ್ದ ಭೀಕರ ಭೂಕಂಪನದಲ್ಲಿ ಸುಮಾರು 36 ಮಂದಿ ಸಾವನ್ನಪ್ಪಿದ್ದರು. ರಿಕ್ಟರ್ ಮಾಪಕದಲ್ಲಿ 6.6ರಷ್ಟು ತೀವ್ರತೆ ದಾಖಲಾಗಿತ್ತು. ಭೂಕಂಪನದ ತೀವ್ರತೆಗೆ ನೂರಾರು ಕಟ್ಟಡಗಳು ಕುಸಿದು ಹಲವು ಕಟ್ಡಡಗಳು ಬಿರುಕುಗೊಂಡಿದ್ದವು. ಸತತ ಒಂದು ವಾರ ನಡೆ
ಹೈಟಿ ಪ್ರವಾಹ ಹೈಟಿಯಲ್ಲಿ ಸಂಭವಿಸಿದ್ದ ಭಾರಿ ಪರಿಣಾಮ ಉಂಟಾಗಿದ್ದ ಪ್ರವಾಹದಲ್ಲಿ ಒಟ್ಟು 8 ಮಂದಿ ಸಾವನ್ನಪ್ಪಿದ್ದರು. ಭೀಕರ ಪ್ರವಾಹದಿಂದಾಗಿ ಹೈಟಿಯ ಪೋರ್ಟ್ ಡಿ ಬೆಕ್ಸ್ ಪ್ರಾಂತ್ಯ ಸಂಪೂರ್ಣ ಜಲಾವೃತ್ತವಾಗಿತ್ತು. ಪ್ರವಾಹಕ್ಕೆ ಸಿಲುಕಿ ಸುಮಾರು 1 ಸಾವಿರಕ್ಕೂ ಅಧಿಕ ಕುಟುಂಬಗಳು ನೆಲೆ ಕಳೆದುಕೊಂಡು ನಿರ
ತಾಂಜೇನಿಯಾ ಪ್ರವಾಹ ಕಳೆದ ಜನವರಿ 17 ಮತ್ತು 18ರಂದು ತಾಂಜೇನಿಯಾದಲ್ಲಿ ಸಂಭವಿಸಿದ್ದ ಭಾರಿ ಪ್ರವಾಹದಿಂದಾಗಿ ಸಾವಿರಾರು ಮನೆಗಳು ನೆಲಸಮಗೊಂಡಿದ್ದವು. ಡೊಡೊಮಾ ಮತ್ತು ಬಾಹಿ ಜಿಲ್ಲೆಗಳಲ್ಲಿ ಸಂಭವಿಸಿದ್ದ ಪ್ರವಾಹದಿಂದಾಗಿ ಸುಮಾರು 2800 ಮಂದಿ ನಿರಾಶ್ರಿತರಾಗಿದ್ದರು. ಬಾಹಿ ಜಿಲ್ಲೆಯೊಂದರಲ್ಲೇ ಸುಮಾರು 15
ಇಂಡೋನೇಷ್ಯಾ ಭೂಕಂಪ ದ್ವೀಪಗಳ ಸಮೂಹ ರಾಷ್ಟ್ರ ಇಂಡೋನೇಷ್ಯಾದಲ್ಲಿ 2016ರಲ್ಲಿ ಸರಣಿ ಭೂಕಂಪಗಳು ಸಂಭವಿಸಿದ್ದವು. ಇಂಡೋನೇಷ್ಯಾದಲ್ಲಿ ಭೂಕಂಪನ ಪ್ರದೇಶಗಳಿದ್ದು, ಇವುಗಳನ್ನು ದಿ ಫೆಸಿಫಿಕ್ ರಿಂಗ್ ಆಫ್ ಫೈರ್ ಎಂದು ಕರೆಯುತ್ತಾರೆ. ಹೀಗಾಗಿ ಈ ಪ್ರದೇಶದಲ್ಲಿ ಭೂಕಂಪನ ಸರ್ವೇ ಸಾಮಾನ್ಯ.