ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಬಾಹ್ಯಾಕಾಶದಲ್ಲಿ ಹಲವು ಐತಿಹಾಸಿಕ ಸಾಧನೆಗಳನ್ನು ಮಾಡಿದೆ. ತನ್ನ 100ನೇ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ ಕೀರ್ತಿಗೆ ಇಸ್ರೋ ಭಾಜನವಾಗಿದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) 1975ರಲ್ಲಿ ಭಾರತದ ಮೊದಲ ಉಪಗ್ರಹ ಆರ್ಯಭಟ್ಟಾವನ್ನು ಯಶಸ್ವಿಯಾಗಿ ಉಡಾಯಿಸಿ ಇತಿಹಾಸ ಸೃಷ್ಟಿಸಿತು.
1983ರಲ್ಲಿ ಇಸ್ರೋ, ಸಂಪರ್ಕ ಮತ್ತು ಪ್ರಸಾರಕ್ಕಾಗಿ ಇನ್ಸಾಟ್ ಸರಣಿಯ ಮೊದಲ ಉಪಗ್ರಹವನ್ನು ಉಡಾವಣೆ ಮಾಡಿತು.
2008ರಲ್ಲಿ ಇಸ್ರೋ ಮೊಟ್ಟ ಮೊದಲ ಬಾರಿಗೆ ಮಾನವರಹಿತ ಚಂದ್ರಯಾನ(ಚಂದ್ರ ಶೋಧಕ) ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಯಶಸ್ವಿ ಉಡಾವಣೆ ಮಾಡಿತು.
2012ರಲ್ಲಿ ಇಸ್ರೋ ಮಾರ್ಸ್ ಆರ್ಬಿಟರ್ ಮಿಷನ್ ಅಥವಾ ಮಂಗಳಯಾನ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಿತ್ತು. ಈ ಉಪಗ್ರಹ ಇಸ್ರೋ ಕಡಿಮೆ ಮೊತ್ತದ 450 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿತ್ತು.
2016ರಲ್ಲಿ ಇಸ್ರೋ ಪ್ರಾದೇಶಿಕ ಸಂಚಾರ ಮಾರ್ಗದರ್ಶಕ ಉಪಗ್ರಹ ಐಆರ್ಎನ್ಎನ್ಎಸ್-1ಜಿ ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿತ್ತು. ಇದರಿಂದಾಗಿ ಇದರಿಂದಾಗಿ ಇಸ್ರೋ ತನ್ನದೇ ನ್ಯಾವಿಗೇಶನ್ ಸಿಸ್ಟಮ್ ಐಆರ್ಎನ್ಎಸ್ಎಸ್ ಅನ್ನು ಹೊಂದಿದೆ.
2016ರಲ್ಲಿ ಇಸ್ರೋ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದು ಮರುಬಳಕೆ ಉಡಾವಣಾ ವಾಹನ ರೀಯೂಸಬಲ್ ಲಾಂಚ್ ವೆಹಿಕಲ್- ಟೆಕ್ನಾಲಜಿ ಡೆಮನ್‌ಸ್ಟ್ರೇಟರ್(ಆರ್‌ಎಲ್‌ವಿ-ಟಿಡಿ) ಯಶಸ್ವಿಯಾಗಿ ಉಡಾವಣೆ ಮಾಡಿತ್ತು.
2017ರಲ್ಲಿ ಇಸ್ರೋ ಏಕಕಾಲದಲ್ಲಿ 104 ಉಪಗ್ರಹಗಳನ್ನು ಉಡಾವಣೆ ಮಾಡಿ ಇತಿಹಾಸ ನಿರ್ಮಿಸಿದೆ. ಇದು ಇಲ್ಲಿಯವರೆಗೂ ಯಾವುದೇ ಬಾಹ್ಯಾಕಾಶ ಸಂಸ್ಥೆ ಮಾಡದಂತ ಮಹತ್ ಕಾರ್ಯವನ್ನು ಯಶಸ್ವಿಯಾಗಿ ಪೂರೈಸಿತ್ತು.