ಭಾರತೀಯ ವಾಯುಪಡೆಗೆ 88: ಪ್ರವಾಹ ಪೀಡಿತ ಉತ್ತರಾಖಂಡದಲ್ಲಿ 'ಆಪರೇಷನ್ ರಾಹತ್', ಒಂದು ನೆನಪು

ಭಾರತೀಯ ವಾಯುಸೇನೆ 88ನೇ ಸಂಸ್ಥಾಪನಾ ದಿನವನ್ನು ಆಚರಿಸಿಕೊಳ್ಳುತ್ತಿದ್ದು, ಉತ್ತರಪ್ರದೇಶದ ಘಾಜಿಯಾಬಾದ್'ನಲ್ಲಿರುವ ಹಿಂಡನ್ ವಾಯುನೆಲೆಯಲ್ಲಿ ವಿಶೇಷ ಪರೇಡ್ ನಡೆಯಿತು.
ಶತ್ರುಗಳ ವಿರುದ್ಧ ಯಾವಾಗಲೆಲ್ಲ ಹೋರಾಡುವ ಅಗತ್ಯವಿರುತ್ತದೋ ಆಗೆಲ್ಲಾ ಭಾರತೀಯ ವಾಯುಪಡೆ ಸಿದ್ದವಿರುತ್ತದೆ. ವಾಯುಪಡೆಯ ಹಲವು ಧೈರ್ಯಶಾಲಿ ಸಿಬ್ಬಂದಿಗಳು ದೇಶಾದ್ಯಂತ ಹಲವು ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸಿದ್ದಾರೆ.  ಭಾರತ ಬಾಹ್ಯಾಕಾಶದ ರಕ್ಷಣಾಪಡೆ ವಾಯುಪಡೆ ಇಂದು 88ನೇ ವರ್ಷಾಚರಣೆಯನ್ನು ಆಚರಿಸಿಕೊಳ್ಳುತ್ತಿದೆ

Updated on
2013ರಲ್ಲಿ ಉತ್ತರಾಖಂಡ್ ನಲ್ಲಿ ಪ್ರವಾಹ ಉಂಟಾದ ಸಂದರ್ಭದಲ್ಲಿ ಭಾರತೀಯ ವಾಯುಪಡೆ ನಡೆಸಿದ ಆಪರೇಷನ್ ರಾಹತ್ ನ ಹಿನ್ನೋಟ ಇಲ್ಲಿದೆ. 2013ರಲ್ಲಿ ಭಾರತೀಯ ವಾಯುಪಡೆ ಇದುವರೆಗೆ ವಿಶ್ವದಲ್ಲಿಯೇ ಅತಿದೊಡ್ಡ ಹೆಲಿಬೋರ್ನ್ ಸ್ಥಳಾಂತರಿಸುವಿಕೆ ಕಾರ್ಯಾಚರಣೆಯನ್ನು ನಡೆಸಿತ್ತು. 2013ರ ಜೂನ್ ನಲ್ಲಿ ಪರ್ವತ ಪ್ರದೇಶ ಉತ್ತರಾಖಂ

ಪ್ರವಾಹದಲ್ಲಿ ಸಿಕ್ಕಿಹಾಕಿಕೊಂಡಿದ್ದ ಸುಮಾರು 25 ಸಾವಿರ ಜನರನ್ನು ವಾಯುಪಡೆ ರಕ್ಷಿಸಿತ್ತು, ಅದು 45 ಹೆಲಿಕಾಪ್ಟರ್ ಮತ್ತು 150 ಪೈಲಟ್ ಗಳನ್ನು ಮತ್ತು 400 ವಾಯುಪಡೆ ಸಿಬ್ಬಂದಿಗಳನ್ನು ಬಳಸಿಕೊಂಡು.

ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ 1318 ಗಂಟೆ ಹಾರಾಡಿ 800 ಟನ್ ಗಳಷ್ಟು ಪರಿಹಾರ ಸಾಮಗ್ರಿಗಳನ್ನು ಆಪರೇಷನ್ ರಾಹತ್ ಕಾರ್ಯಾಚರಣೆ ಭಾಗವಾಗಿ ಹೊತ್ತೊಯ್ದಿತ್ತು.

ಪ್ರವಾಹದಲ್ಲಿ ಸಿಕ್ಕಿಹಾಕಿಕೊಂಡ ಜನರನ್ನು ಸುರಕ್ಷಿತ ಪ್ರದೇಶಕ್ಕೆ ತಂದಿದ್ದು ಮಾತ್ರವಲ್ಲದೆ ಪ್ರವಾಹದಲ್ಲಿ ಗಾಯಗೊಂಡವರ ಚಿಕಿತ್ಸೆಗೆ ವೈದ್ಯರು, ವೈದ್ಯಕೀಯ ಉಪಕರಣಗಳು, ಔಷಧಿಗಳು, ಆಹಾರ, ರಕ್ಷಣಾ ಕಾರ್ಯಕರ್ತರನ್ನು ಕೇದಾರನಾಥಕ್ಕೆ ಸಾಗಿಸಿತ್ತು.

ಈ ಸಂದರ್ಭದಲ್ಲಿ ಮೊಬೈಲ್ ಫೋನ್ ಬಹಳ ಪ್ರಮುಖ ಪಾತ್ರ ವಹಿಸಿತ್ತು. ಯುವ ಪೈಲಟ್ ಗಳು ವಾಟ್ಸಾಪ್ ಮತ್ತು ಇತರ ಮೊಬೈಲ್ ಅಪ್ಲಿಕೇಶನ್ ಗಳನ್ನು ಫೋಟೋಗಳು, ಮ್ಯಾಪ್ ಮತ್ತು ಇತರ ಮಾಹಿತಿಗಳನ್ನು ವಿನಿಮಯ ಮಾಡಿಕೊಳ್ಳಲು ಪರಿಣಾಮಕಾರಿಯಾಗಿ ಬಳಸಿಕೊಂಡರು.

ಪ್ರವಾಹದಲ್ಲಿ ಸಿಕ್ಕಿಹಾಕಿಕೊಂಡ ನಾಗರಿಕರನ್ನು ಸುರಕ್ಷಿತ ಸ್ಥಳಗಳಿಗೆ ಕರೆತರಲು ವಾಯುಪಡೆ ಅಧಿಕಾರಿಗಳು ಸತತ 15 ಗಂಟೆಗಳಿಗೂ ಹೆಚ್ಚು ಕಾಲ ಈ ಸಮಯದಲ್ಲಿ ಕೆಲಸ ಮಾಡಿದ್ದಿದೆ.

ಆಪರೇಷನ್ ರಾಹತ್ ನ ಮೊದಲ ಹಂತದಲ್ಲಿ ಒಟ್ಟು 19,600 ಮಂದಿಯನ್ನು ಏರ್ ಲಿಫ್ಟ್ ಮಾಡಲಾಯಿತು. ಒಟ್ಟು 3 ಲಕ್ಷದ 82 ಸಾವಿರದ 400 ಕೆಜಿ ಸಾಮಗ್ರಿಗಳನ್ನು ಸಾಗಾಟ ಮಾಡಲಾಯಿತು. ಆಗ ಉತ್ತರಾಖಂಡ್ ನಲ್ಲಿ ಏರ್ ವೈಸ್ ಮಾರ್ಷಲ್ ಎಸ್ ಆರ್ ಕೆ ನಾಯರ್ ಸಮನ್ವಯಕಾರರಾಗಿ ಕೆಲಸ ಮಾಡುತ್ತಿದ್ದರು.

ಜನರನ್ನು ಏರ್ ಲಿಫ್ಟ್ ಮಾಡಿ ರಸ್ತೆಗೆ ಕರೆತರಲು ಆಂಟನೊವ್-32 ಮತ್ತು ವಿಶ್ವದ ಅತಿದೊಡ್ಡ ಹೆಲಿಕಾಪ್ಟರ್ ಎಂಐ 26ನ್ನು ಬಳಸಿಕೊಳ್ಳಲಾಯಿತು.

ಜೂನ್ ಕೊನೆಯ ಹೊತ್ತಿಗೆ ಭಾರತೀಯ ವಾಯುಪಡೆ ಸಿ-130ಜೆ ಸೂಪರ್ ಹರ್ಕ್ಯುಲ್ಸ್ ವಿಮಾನವನ್ನು ಸೇವೆಗೆ ಬಳಸಿಕೊಂಡಿತು.

ಎಂಐ 17, ಹೆಚ್ ಎಎಲ್ ಧ್ರುವ, ಚೀತಾ ಹೆಲಿಕಾಪ್ಟರ್, ಮಿಲ್ ಎಂಐ-26 ಭಾರದ ಸಾಗಾಟ ಹೆಲಿಕಾಪ್ಟರ್, ಎಎನ್ 32ಎಸ್ ಸಾಗಾಟ ವಿಮಾನ, ಹೆಚ್ ಎಸ್-748 ಸಾಗಾಟ ವಿಮಾನ ಮತ್ತು ಐಎಲ್-76 ಅಧಿಕ ಸಾಗಾಟ ವಿಮಾನ ವನ್ನು ಸಹ ಬಳಸಿಕೊಳ್ಳಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com