ಹುತಾತ್ಮ ಭಗತ್ ಸಿಂಗ್ ಸ್ಮರಣೆ: ಸ್ವಾತಂತ್ರ್ಯ ಹೋರಾಟಗಾರನ ಬಗ್ಗೆ ನೀವು ಅರಿಯದ ಮಾಹಿತಿ ಇಲ್ಲಿದೆ
ಭಗತ್ ಸಿಂಗ್ ಹುಟ್ಟಿದ್ದು 1907, ಸೆ.28 ರಂದು ಈಗ ಪಾಕ್ ನಲ್ಲಿರುವ ಪಂಜಾಬ್ ನ ಲ್ಯಾಲ್ ಪುರ ಜಿಲ್ಲೆಯಲ್ಲಿ. ಮಾರ್ಕ್ಸ್ ವಾದಿ, ಸಮಾಜವಾದಿ ಕ್ರಾಂತಿಕಾರಿಯಾಗಿದ್ದ ಭಗತ್ ತಮ್ಮ 23 ನೇ ವಯಸ್ಸಿನಲ್ಲಿ ಸ್ವಾತಂತ್ರ್ಯ ಹೋರಾಟಕ್ಕಾಗಿ ಜೀವ ಅರ್ಪಿಸಿದ್ದರು. ಇಂದಿಗೂ ಯುವಕರಿಗೆ ಸ್ಪೂರ್ತಿ. ಅವರ ಬಗ್ಗೆ ಅಪರೂಪದ ಮಾಹಿತಿ ಇಲ್ಲಿದೆ.
ಭಗತ್ ಸಿಂಗ್ ಹುಟ್ಟಿದ್ದು 1907, ಸೆ.28 ರಂದು ಈಗ ಪಾಕ್ ನಲ್ಲಿರುವ ಪಂಜಾಬ್ ನ ಲ್ಯಾಲ್ ಪುರ ಜಿಲ್ಲೆಯಲ್ಲಿ. ಮಾರ್ಕ್ಸ್ ವಾದಿ, ಸಮಾಜವಾದಿ ಕ್ರಾಂತಿಕಾರಿಯಾಗಿದ್ದ ಭಗತ್ ತಮ್ಮ 23 ನೇ ವಯಸ್ಸಿನಲ್ಲಿ ಸ್ವಾತಂತ್ರ್ಯ ಹೋರಾಟಕ್ಕಾಗಿ ಜೀವ ಅರ್ಪಿಸಿದ್ದರು. ಇಂದಿಗೂ ಯುವಕರಿಗೆ ಸ್ಪೂರ್ತಿ. ಅವರ ಬಗ್ಗೆ ಅಪರೂಪದ ಮಾಹಿತಿ ಇಲ
ಗತ್ ಸಿಂಗ್ ಬಹುಮುಖಿ ಪ್ರತಿಭೆ, ನಟ. ಕಾಲೇಜು ದಿನಗಳಲ್ಲಿ ಆತ ವೇದಿಕೆಯ ಮೇಲೆ ನಟಿಸುತ್ತಿದ್ದದ್ದು ಜನಪ್ರಿಯತೆ ಗಳಿಸಿತ್ತು. ರಾಣಾ ಪ್ರತಾಪ್ ಹಾಗೂ ಚಂದ್ರ ಗುಪ್ತ ಮೌರ್ಯನ ಪಾತ್ರಗಳ ಅಭಿನಯ ಹೆಚ್ಚು ಜನಪ್ರಿಯತೆ ಗಳಿಸಿದ್ದವು.
ಅತಿ ಹೆಚ್ಚು ಓದುವ ಹವ್ಯಾಸ ಹೊಂದಿದ್ದ ಭಗತ್ ಸಿಂಗ್ ಓರ್ವ ಅದ್ಭುತ ಬರಹಗಾರರೂ ಆಗಿದ್ದರು. ಆಗಿನ ಕಾಲಕ್ಕೆ ಪತ್ರಿಕೆಗಳಿಗೆ ಬರೆಯುತ್ತಿದ್ದರು. Why I Am An Atheist ಎನ್ನುವುದು ಅವರ ಬುದ್ಧಿಮತ್ತೆಗೆ ಅತ್ಯುತ್ತಮ ಉದಾಹರಣೆಯಾಗಿತ್ತು.
ಭಗತ್ ಸಿಂಗ್ ಬಹುಮುಖಿ ಪ್ರತಿಭೆ, ನಟ. ಕಾಲೇಜು ದಿನಗಳಲ್ಲಿ ಆತ ವೇದಿಕೆಯ ಮೇಲೆ ನಟಿಸುತ್ತಿದ್ದದ್ದು ಜನಪ್ರಿಯತೆ ಗಳಿಸಿತ್ತು. ರಾಣಾ ಪ್ರತಾಪ್ ಹಾಗೂ ಚಂದ್ರ ಗುಪ್ತ ಮೌರ್ಯನ ಪಾತ್ರಗಳ ಅಭಿನಯ ಹೆಚ್ಚು ಜನಪ್ರಿಯತೆ ಗಳಿಸಿದ್ದವು.
ಕುಟುಂಬ ಸದಸ್ಯರು ತಮಗೆ ವಧುವನ್ನು ಹುಡುಕುತ್ತಿದ್ದಾರೆಂಬುದನ್ನು ಅರಿತ ಭಗತ್ ಸಿಂಗ್, ಮನೆ ಬಿಟ್ಟು ಹೋಗಿದ್ದರು. ನನ್ನ ಜೀವನ ದೇಶ ಹಾಗೂ ಸ್ವಾಂತ್ರ್ಯಕ್ಕೆ ಮುಡಿಪು ಎಂದು ಹೇಳಿದ್ದರು.
ಭಗತ್ ಜೀವನದಲ್ಲಿ ಆತನ ಮೇಲೆ ಹೆಚ್ಚು ಪರಿಣಾಮ ಬೀರಿದ್ದು ಜಲಿಯನ್ ವಾಲಾ ಭಾಗ್ ಘಟನೆ. ಅಲ್ಲಿ ಚೆಲ್ಲಿದ್ದ ರಕ್ತದ ಕಲೆಗಳುಳ್ಳ ಮಣ್ಣನ್ನು ತೆಗೆದುಕೊಂಡು ಸ್ವಾತಂತ್ರ್ಯಕ್ಕಾಗಿ ಪಣ ತೊಟ್ಟಿದ್ದರು ಭಗತ್ ಸಿಂಗ್.
ಭಗತ್ ಸಿಂಗ್ ಅವರನ್ನು ನಿಗದಿತ ಸಮಯಕ್ಕಿಂತಲೂ ಒಂದು ಗಂಟೆ ಮುಂಚೆ ಗಲ್ಲಿಗೇರಿಸಲಾಗಿತ್ತು ಬಳಿಕ ಅವರ ಪಾರ್ಥಿವ ಶರೀರವನ್ನು ಕುಟುಂಬಸ್ಥರಿಗೆ ನೀಡದೇ ಸಟ್ಲಜ್ ನದಿಯ ತಟದಲ್ಲಿ ಗೌಪ್ಯವಾಗಿ ಅಂತ್ಯಕ್ರಿಯೆ ಮಾಡಲಾಗಿತ್ತು.