
ಮೊಟೇರಾದಲ್ಲಿನ ನವೀಕರಣಗೊಂಡ ಸರ್ದಾರ್ ಪಟೇಲ್ ಕ್ರೀಡಾಂಗಣವನ್ನು ಇನ್ನು ಮುಂದೆ ನರೇಂದ್ರ ಮೋದಿ ಸ್ಟೇಡಿಯಂ ಎಂದು ಕರೆಯಲಾಗುತ್ತದೆ.
1 / 12

ನವೀಕರಣಗೊಂಡ ಕ್ರೀಡಾಂಗಣದಲ್ಲಿ ಅಶ್ಚರ್ಯ ಎಂಬಂತೆ 1.32 ಲಕ್ಷ ಪ್ರೇಕ್ಷಕರು ಕೂರಲು ಅವಕಾಶ ನೀಡಬಹುದಾಗಿದೆ.
2 / 12

63 ಎಕರೆ ವಿಸ್ತೀರ್ಣದಲ್ಲಿ ವ್ಯಾಪಿಸಿರುವ ಈ ಸ್ಟೇಡಿಯಂನ್ನು ಅಂದಾಡು 800 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ.
3 / 12

ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ 90 ಸಾವಿರ ಪ್ರೇಕ್ಷಕರಿಗೆ ಅವಕಾಶವಿದೆ. ಆದರೆ, ಅದನ್ನು ಮೊಟೇರಾ ಕ್ರೀಡಾಂಗಣ ಮೀರಿಸಿದೆ.
4 / 12

ಅಧಿಕೃತ ಮಾಹಿತಿ ಪ್ರಕಾರ, ಮೊಟೇರಾ ಸ್ಟೇಡಿಯಂನ ಒಟ್ಟಾರೇ ಪ್ರದೇಶ, '32 ಒಲಿಂಪಿಕ್ ಗಾತ್ರದ ಸಾಕರ್ ಕ್ಷೇತ್ರಗಳನ್ನು ಒಟ್ಟುಗೂಡಿಸಲಾಗಿದೆ'
5 / 12

ಮೆಲ್ಬರ್ನ್ ಕ್ರಿಕೆಟ್ ಸ್ಟೆಡಿಯಂ ವಿನ್ಯಾಸಗೊಳಿಸಿರುವ ಅಸ್ಟ್ರೇಲಿಯಾದ ವಿನ್ಯಾಸ ಸಂಸ್ಥೆ ಪೊಂಪುಲಾಸ್ ಮತ್ತಿತರ ಸಂಸ್ಥೆಗಳು ನೂತನ ಸ್ಟೇಡಿಯಂನ್ನು ವಿನ್ಯಾಸಗೊಳಿಸಿವೆ.
6 / 12

ಈ ಸ್ಟೇಡಿಯಂನ ಕ್ರೀಡಾ ಸಂಕೀರ್ಣ ಕೇವಲ ಕ್ರಿಕೆಟ್ ಮಾತ್ರವಲ್ಲದೇ, ಪುಟ್ ಬಾಲ್, ಹಾಕಿ, ಬಾಸ್ಕೆಟ್ ಬಾಲ್,ಕಬ್ಬಡಿ, ಬಾಕ್ಸಿಂಗ್, ಲಾನ್ ಟೆನ್ನಿಸ್ ನಂತಹ ಇತರ ಕ್ರೀಡೆಗಳನ್ನು ಸಹ ಒಳಗೊಂಡಿದೆ.
7 / 12

ಹೆಚ್ಚಿನ ಪ್ರಕಾಶಮಾನದ ಫ್ಲೆಡ್ ಲೈಟ್ ಗಳ ಬದಲಾಗಿ ಆಟದ ಮೈದಾನದಲ್ಲಿ ಎಲ್ ಇಡಿ ಲೈಟ್ ಗಳನ್ನು ಅಳವಡಿಸಲಾಗಿದೆ. ಭಾರತದಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯ ವ್ಯವಸ್ಥೆ ಮಾಡಲಾಗಿದೆ.
8 / 12

ಆಟಗಾರರಿಗೆ ನಾಲ್ಕು ಡ್ರೆಸ್ಸಿಂಗ್ ಕೊಠಡಿಗಳನ್ನು ಹೊಂದಿರುವ ವಿಶ್ವದಲ್ಲಿನ ಮೊದಲ ಸ್ಟೇಡಿಯಂ ಇದಾಗಿದೆ. ಇದರಿಂದಾಗಿ ಒಂದೇ ದಿನ ಬ್ಯಾಕ್- ಟು ಬ್ಯಾಕ್ ಪಂದ್ಯಗಳನ್ನು ಆಡಬಹುದಾಗಿದೆ.
9 / 12

ಮೊಟೇರಾ ಕ್ರೀಡಾಂಗಣದಲ್ಲಿನ 11 ಪಿಚ್ ಗಳನ್ನು ಕೆಂಪು ಮತ್ತು ಕಪ್ಪು ಮಣ್ಣಿನಲ್ಲಿ ಮಾಡಲಾಗಿದೆ. ವಿಶ್ವದಲ್ಲಿಯೇ ಪ್ರಮುಖ ಮತ್ತು ತರಬೇತಿ ಪಿಚ್ ಗಳಿಗಾಗಿಗಿ ಮಣ್ಣಿನ ಮೇಲ್ಮೈಗಳು ಒಂದೇ ಇರುವುದಾಗಿ ವಿಶ್ವದಲ್ಲಿಯೇ ಇದೊಂದೇ ಕ್ರೀಡಾಂಗಣವಾಗಿದೆ.
10 / 12

ಸುಸಜ್ಜಿತ ಒಳಚರಂಡಿ ವ್ಯವಸ್ಥೆ ಹೊಂದಿದ್ದು, ಮಳೆ ಬಿದ್ದಂತಹ ಸಂದರ್ಭದಲ್ಲಿ ಕೇವಲ 30 ನಿಮಿಷಗಳಲ್ಲಿ ನೀರನ್ನು ಒದ್ದೆ ಮಾಡುತ್ತದೆ.
11 / 12

ಮೊಟೇರಾದಲ್ಲಿ ಕ್ರಿಕೆಟ್ ಅಕಾಡೆಮಿ, ಒಳಾಂಗಣ ತರಬೇತಿ ಪಿಚ್ ಗಳು, ಮತ್ತು ಸಣ್ಣ ಫೆವಿಲಿಯನ್ ಪ್ರದೇಶದೊಂದಿಗೆ ಎರಡು ಪ್ರತ್ಯೇಕ ತರಬೇತಿ ಮೈದಾನಗಳಿವೆ.
12 / 12
Stay up to date on all the latest ಕ್ರೀಡೆ news