ಗೆದ್ದೆನೆಂದು ಬೀಗುವಾಗ ಸೋತ ಸುದ್ದಿ ಬಂದಿತ್ತು!

Updated on: 

ರಾಜಕೀಯ ನಾಯಕರು ಗೆದ್ದಾಗ ಸಂಭ್ರಮಕ್ಕೆ ಪಾರವೇ ಇರುವುದಿಲ್ಲ. ಆದರೆ, ಗೆಲವಿನ ಸನಿಹದಲ್ಲಿದ್ದು ಸಂಭ್ರಮ ಆಚರಿಸುವಾಗ ಸೋತ ಸುದ್ದಿ ಬಂದರೆ ಪರಿಸ್ಥಿತಿ ಹೇಗಿರುತ್ತದೆ ನೋಡಿ! 2008ರ ಚುನಾವಣೆ ಸಮಯ. ಬಿಜಾಪುರ ಜಿಲ್ಲೆಯ ಇಂಡಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಯಶವಂತರಾಯಗೌಡ ಪಾಟೀಲ ಹಾಗೂ ಬಿಜೆಪಿಯಿಂದ ಡಾ. ಸಾರ್ವಭೌಮ ಬಗಲಿ ಸ್ಪರ್ಧಿಸಿದ್ದರು. ಮತ ಎಣಿಕೆ ತುರುಸಿನಿಂದ ನಡೆದಿತ್ತು. 14 ಸುತ್ತಿಗಳ ಪೈಕಿ 13ನೇ ಸುತ್ತು ಬಂದಾಗ ಪಾಟೀಲ್ ಅವರು 28,100 ಮತ ಪಡೆದು 446 ಮತಗಳಿಂದ ಮುಂದಿದ್ದರು. ಇನ್ನೇನು ಕೊನೆಯ ಸುತ್ತು. ಕೇವಲ 2,150 ಮತ ಎಣಿಕೆ ಬಾಕಿಯಿದೆ. ಗೆಲವು ನಮ್ಮದೇ ಎಂದು ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಸಂಭ್ರಮಾಚರಣೆ ಮಾಡತೊಡಗಿದರು. ಬಣ್ಣ ಎರಚಿ ಪಾಟೀಲ್ ಅವರನ್ನು ಹೊತ್ತು ಮೆರವಣಿಗೆಗೆ ಹೊರಡಲು ಅಣಿಯಾಗಿದ್ದರು. ಅಷ್ಟರೊಳಗೆ 14ನೇ ಸುತ್ತಿನ ಅಂದರೆ ಕೊನೆ ಸುತ್ತಿನ ಮತ ಎಣಿಕೆ ಫಲಿತಾಂಶ ಪ್ರಕಟವಾಯಿತು. ಬಗಲಿ ಅವರು 1800 ಮತಗಳನ್ನು ಪಡೆದು 571 ಮತಗಳ ಅಂತರದಿಂದ ಗೆಲವು ಸಾಧಿಸಿದ್ದರು. ಬಗಲಿ ಅವರು ಒಟ್ಟು 29,456 ಮತ ಪಡೆದಿದ್ದರೆ, ಯಶವಂತರಾಯಗೌಡ ಪಾಟೀಲ ಅವರು 28,885 ಮತಗಳನ್ನು ಪಡೆದು ಸೋಲುಂಡಿದ್ದರು. ಮೆರವಣಿಗೆ ಹೊರಟಿದ್ದ ಕಾರ್ಯಕರ್ತರು ಸುದ್ದಿ ಕೇಳಿ ಪಾಟೀಲ್ ಅವರನ್ನು ಕೆಳಗಿಳಿಸಿ ಮೌನಕ್ಕೆ ಶರಣಾದರೆ, ಯಶವಂತರಾಯಗೌಡರು ಹೂವಿನ ಹಾರ ತೆಗೆದು ಬಿಸಾಕಿ ಮನೆ ಕಡೆ ನಡೆದರು!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com