ಕ.ಪ್ರ. ವಾರ್ತೆ ಉಡುಪಿ ಮಾ.28-
ಉಡುಪಿಯ ಬಿಜೆಪಿ ಶಾಸಕ ಕೆ.ರಘುಪತಿ ಭಟ್ ಅವರದ್ದು ಎನ್ನಲಾಗಿರುವ ಕಾಮಕೇಳಿಯ ಸಿಡಿಯೊಂದು ಬಹಿರಂಗಗೊಂಡಿದ್ದು ರಾಜ್ಯ ಬಿಜೆಪಿಯಲ್ಲಿ ಕೋಲಾಹಲವನ್ನೆಬ್ಬಿಸಿದೆ.
ಈ ಪ್ರಕರಣದೊಂದಿಗೆ ರಘುಪತಿ ಭಟ್ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಕಳೆದುಕೊಳ್ಳುವುದು ನಿಶ್ಚಿತವಾಗಿದೆ. ಈ ಸಿಡಿಯು ಕಳೆದೆರಡು ದಿನಗಳಿಂದ ಉಡುಪಿಯಲ್ಲಿ ಪಡ್ಡೆ ಹುಡುಗರ ಮೊಬೈಲ್ನಲ್ಲಿ ಚಲಾವಣೆಯಲ್ಲಿದ್ದು, ಗುರುವಾರ ಬೆಳಗ್ಗೆ ಟಿವಿ ಚಾನೆಲ್ಗಳಲ್ಲೂ ಪ್ರಸಾರವಾಯಿತು. ಈ ಸಿಡಿಯಲ್ಲಿ ಖಾಸಗಿ ಬದುಕಿನ ದೃಶ್ಯಗಳಿರುವುದರಿಂದ ಶಾಸಕರ ಮುಖ ಕಾಣದಂತೆ ದೃಶ್ಯಗಳನ್ನು ಪ್ರಸಾರ ಮಾಡಲಾಯಿತು. ಳಾಗಿರುವುದರಿಂದ ಚಾನೆಲ್ಗಳು ಪ್ರಸಾರ ಮಾಡದೇ ಕೇವಲ ಸುದ್ದಿಯನ್ನಷ್ಟೇ ಬಿತ್ತರಿಸಿದವು. ಈ ಘಟನೆಯಿಂದ ಬಿಜೆಪಿ ತೀವ್ರ ಮುಖಭಂಗ, ಮುಜುಗರಕ್ಕೊಳಗಾಗಿದೆ. ಫೆ.11ರಂದು ಈ ದೃಶ್ಯಗಳನ್ನು ಉಡುಪಿ ಮೂಲದ ಉದ್ಯಮಿಯ ಮುಂಬೈನ ಹೊಟೇಲ್ವೊಂದರಲ್ಲಿ ಚಿತ್ರೀಕರಿಸಲಾಗಿದ್ದ, ಭಟ್ ಅವರೊಂದಿಗೆ ಕಾಣಿಸಿಕೊಂಡ ಮಹಿಳೆ ನೇಪಾಳಿ ಕಾಲ್ಗರ್ಲ್ ಎನ್ನಲಾಗುತ್ತಿದೆ.
ಚುನಾವಣೆಯಲ್ಲಿ ಸೋಲಿಸಲು ಹುನ್ನಾರ: ಆದರೆ, ಈ ದೃಶ್ಯಗಳಲ್ಲಿರುವುದು ನಾನಲ್ಲ. ತಮ್ಮ ಫೋಟೋ ಬಳಸಿಕೊಂಡು ಆಧುನಿಕ ತಂತ್ರಜ್ಞಾನದ ಮೂಲಕ ನಕಲಿ ಸಿಡಿ ತಯಾರಿಸಲಾಗಿದೆ ಎಂದು ಭಟ್ ಹೇಳಿದ್ದಾರೆ.
'ಚುನಾವಣೆಯಲ್ಲಿ ನನ್ನನ್ನು ಸೋಲಿಸಲಾಗದ ಪ್ರತಿಪಕ್ಷದವರು ಈ ರೀತಿ ನಕಲಿ ಸಿಡಿ ತಯಾರಿಸಿ ಬಹಿರಂಗಗೊಳಿಸಿ ನನ್ನ ಮಾನಹಾನಿ ಮಾಡುತ್ತಿದ್ದಾರೆ. ಆ ಮೂಲಕ ನನ್ನನ್ನು ಸೋಲಿಸಲು ಹುನ್ನಾರ ನಡೆಸಿದ್ದಾರೆ' ಎಂದು ಅವರು ಆರೋಪಿಸಿದ್ದಾರೆ.