
ನವದೆಹಲಿ: ಬೆಳಗಾವಿಯಲ್ಲಿ ಕೆಎಟಿ ಪೀಠ ಸ್ಥಾಪಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ. ಚಳವಳಿ ನಿರತ ವಕೀಲರು ಮುಷ್ಕರ ಕೈಬಿಡಬೇಕು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಮನವಿ ಮಾಡಿದ್ದಾರೆ. ತಾಂತ್ರಿಕ ಕಾರಣಗಳಿಗಾಗಿ ಕೆಎಟಿ ಪೀಠವನ್ನು ಘೋಷಣೆ ಮಾಡುತ್ತಿಲ್ಲ. ಕೆಎಟಿ ಎರಡು ಪೀಠಗಳಿಗೆ ನ್ಯಾಯಾಧೀಶರಿಲ್ಲ. ನ್ಯಾಯಾಧೀಶರ ನೇಮಕಕ್ಕೆ ಶಿಫಾರಸು ಮಾಡಲಾಗಿದೆ. ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಸಿದ್ಧರಾಮಯ್ಯ ವಿವರಿಸಿದ್ದಾರೆ.
ಕೇಂದ್ರ ಕಾನೂನು ಸಚಿವ ಸದಾನಂದ ಗೌಡ ಅವರೊಂದಿಗೆ ಈ ಬಗ್ಗೆ ಸಮಾಲೋಚಿಸಲಾಗಿದೆ. ಅವರು ತ್ವರಿತವಾಗಿ ನ್ಯಾಯಾಧೀಶರ ನೇಮಕ ಪ್ರಕ್ರಿಯೆ ಪೂರ್ಣಗೊಳಿಸುವ ಭರವಸೆ ನೀಡಿದ್ದಾರೆ. ಹಾಲಿ ಪೀಠಗಳಿಗೆ ನ್ಯಾಯಾಧೀಶರ ನೇಮಕವಾದ ನಂತರವಷ್ಟೇ ನಾವು ಬೆಳಗಾವಿಯಲ್ಲಿ ಹೊಸಪೀಠ ಘೋಷಣೆ ಮಾಡಬಹುದು. ಆದ್ದರಿಂದ ವಕೀಲರು ಚಳವಳಿ ಕೈ ಬಿಟ್ಟು ಸಹಕರಿಸಬೇಕು ಎಂದರು.
ಕಾಲಾವಕಾಶ ಕೋರಿಕೆ: ಪಶ್ಚಿಮ ಘಟ್ಟದ ಆಯ್ದ ಭಾಗವನ್ನು ಸೂಕ್ಷ್ಮ ಪ್ರದೇಶ ಎಂದು ಘೋಷಿಸುವ ಡಾ.ಕಸ್ತೂರಿ ರಂಗನ್ ವರದಿಗೆ ಅಭಿಪ್ರಾಯ ತಿಳಿಸಲು ರಾಜ್ಯ ಸರ್ಕಾರ ಕಲಾವಕಾಶ ಕೋರಲಿದೆ.
ಗುರುವಾರ ಮುಖ್ಯಮಂತ್ರಿ ಸಿದ್ಧರಾಮಯ್ಯ ರಾಜ್ಯದ ಸಂಸತ್ ಸದಸ್ಯರ ಸಭೆ ಬಳಿಕ ಈ ವಿಷಯ ತಿಳಿಸಿದ್ದಾರೆ.
Advertisement