ಬೆಂಗಳೂರು: ಜೆಡಿಎಸ್ ಕಚೇರಿ ನಿರ್ಮಿಸಲು 1 ಎಕರೆ 10 ಗುಂಟೆ ಜಾಗ ನೀಡಲು ಬಿಬಿಎಂಪಿ ತೀರ್ಮಾನಿಸಿದೆ.
ವಯ್ಯಾಲಿಕಾವಲ್‌ನ ಚೌಡಯ್ಯ ಮೆಮೋರಿಯಲ್ ಹಾಲ್ ಹಿಂಭಾಗದಲ್ಲಿನ ರು.20 ಕೋಟಿ ಬೆಲೆ ಬಾಳುವ ಜಾಗವನ್ನು ಕೇವಲ ರು.1000 ಬಾಡಿಗೆಗೆ ನೀಡಲು ತೀರ್ಮಾನಿಸಲಾಗಿದೆ. ಬಿಬಿಎಂಪಿ ಸಭೆಯಲ್ಲಿ ಆಡಳಿತ ಪಕ್ಷದ ನಾಯಕ ಎನ್. ಆರ್.ರಮೇಶ್ ಮಂಡಿಸಿದ ನಿರ್ಣಯವನ್ನು ಮೇಯರ್ ಶಾಂತಕುಮಾರಿ ಅನುಮೋದಿಸಿದರು. ಈ ನಿರ್ಣಯ ಸರ್ಕಾರಕ್ಕೆ ಸಲ್ಲಿಕೆಯಾಗಿ ನಂತರ ಜೆಡಿಎಸ್‌ಗೆ ಜಾಗ ಮಂಜೂರು ಆಗಲಿದೆ. ಜೆಡಿಎಸ್ ಮನವಿ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ.
ನಿರ್ಣಯ: ಬೆಂಗಳೂರನ್ನು ಸ್ಮಾರ್ಟ್ ಸಿಟಿ ಎಂದು ಘೋಷಿಸುವಂತೆ ಕೇಂದ್ರ ಸರ್ಕಾರ ಕೈ ಕೋರಿಕೆ ಸಲ್ಲಿಸಲು ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ತೀರ್ಮಾನಿಸಿತು. ಬೆಂಗಳೂರನ್ನು ಸ್ಮಾರ್ಟ್ ಸಿಟಿ ಯೋಜನೆಗೆ ಸೇರಿಕೊಳ್ಳಬೇಕೆಂದು ರಾಜ್ಯ ಸರ್ಕಾರ ಕೇಂದ್ರಕ್ಕೆ ಕೋರಿಕೆ ಸಲ್ಲಿಸಬೇಕೆಂದು ಒತ್ತಾಯಿಸುವ ನಿರ್ಣಯ ಕೈಗೊಳ್ಳಲಾಯಿತು.
Advertisement