

ಬೆಂಗಳೂರು: ಸಿಎಂ ಇಬ್ರಾಹಿಂ ಅವರಿಗೆ ಕಾಂಗ್ರೆಸ್ ಹೈಕಮಾಂಡ್‍ನಿಂದ ದಿಢೀರ್ ಬುಲಾವ್ ಬಂದಿದೆ. ಸಿಎಂ ಇಬ್ರಾಹಿಂಗೆ ಶುಕ್ರವಾರ ರಾತ್ರಿ ಕರೆ ಬಂದಿದ್ದು, ಏ.4ರಂದು ಬೆ.11ಕ್ಕೆ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಲು ಸೂಚಿಸಲಾಗಿದೆ. ಈ ಹಿನ್ನೆಲೆಯಲ್ಲಿ
ಇಬ್ರಾಹಿಂ ದೆಹಲಿಗೆ ಪ್ರಯಾಣಿಸಲಿದ್ದು, ಹೈಕಮಾಂಡ್ ಭೇಟಿ ಮಾದಲಿದ್ದಾರೆ.ದಿಢೀರ್ ಬೆಳವಣಿಗೆಯಿಂದ ಕಾಂಗ್ರೆಸ್ ವಲಯದಲ್ಲಿ ಸಂಚಲನ ಉಂಟಾಗಿದ್ದು ಕೆಪಿಸಿಸಿ
ಅಧ್ಯಕ್ಷರ ಹುದ್ದೆ ನೇಮಕ ಹಾಗೂ ಸಚಿವ ಸಂಪುಟ ವಿಸ್ತರಣೆ ಸದ್ಯದಲ್ಲೇ ನಡೆಯಲಿರುವುದರಿಂದ , ಇಬ್ರಾಹಿಮ್ ಹೈಕಮಾಂಡ್ ಭೇಟಿ ಹೆಚ್ಚಿನ ಮಹತ್ವ ಪಡೆದು ಕೊಂಡಿದೆ. ಕೆಪಿಸಿಸಿ ಅಧ್ಯಕ್ಷರ ನೇಮಕ ಕುರಿತು ಚರ್ಚಿಸಲೆಂದೇ ಇಬ್ರಾಹಿಮ್ ಅವರನ್ನು ಕರೆಸಿಕೊಳ್ಳಲಾಗಿದೆ ಎಂಬ ಗುಮಾನಿಯಿದೆ.