ಕೃಷಿ ಭೂಮಿ (ಸಾಂದರ್ಭಿಕ ಚಿತ್ರ )
ಕೃಷಿ ಭೂಮಿ (ಸಾಂದರ್ಭಿಕ ಚಿತ್ರ )

ಹೆಕ್ಟೇರ್‍ಗೆ ರು 25 ಸಾವಿರ ಪರಿಹಾರ: ಸಿಎಂ ಘೋಷಣೆ

ಉತ್ತರ ಕರ್ನಾಟಕದ 8 ಜಿಲ್ಲೆ ಗಳಲ್ಲಿ ಮಳೆಯಿಂದಾದ ಬೆಳೆ ಹಾನಿಗೆ ಪ್ರತಿ ಹೆಕ್ಟೇರ್‍ಗೆ ರು. 25 ಸಾವಿರ ಪರಿಹಾರ ನೀಡಲಾಗುವುದು ಎಂದು...

ವಿಧಾನಪರಿಷತ್ತು: ಉತ್ತರ ಕರ್ನಾಟಕದ 8 ಜಿಲ್ಲೆ ಗಳಲ್ಲಿ ಮಳೆಯಿಂದಾದ ಬೆಳೆ ಹಾನಿಗೆ ಪ್ರತಿ ಹೆಕ್ಟೇರ್‍ಗೆ ರು. 25 ಸಾವಿರ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಉತ್ತರ ಕರ್ನಾಟಕದ ಎಂಟು ಜಿಲ್ಲೆಗಳಲ್ಲಿ ಮಳೆಯಿಂದ ಹಾನಿಯಾಗಿದ್ದು, 6ರಿಂದ 7 ಮಿ.ಮೀ. ವಾಡಿಕೆ ಮಳೆಯÁಗುವ ಪ್ರದೇಶಗಳಲ್ಲಿ 50-150ಮಿ.ಮೀ ಮಳೆಯಾಗಿದೆ. ವಾಡಿಕೆ ಪ್ರಮಾಣಕ್ಕೆ ಹೋಲಿಸಿದರೆ 1ಸಾವಿರ ಪಟ್ಟು ಹೆಚ್ಚು ಮಳೆಯಾಗಿದೆ. ಇದರಿಂದ ಬೆಳೆಹಾನಿಯಾಗಿದ್ದು, ಪ್ರತಿ ಹೆ.
ಬೆಳೆಹಾನಿಗೆ ರು. 25ಸಾವಿರ ಪರಿಹಾರ ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಸೋಮವಾರ ಉಭಯ ಸದನಗಳಲ್ಲಿ ಚರ್ಚೆ ನಡೆದ ವೇಳೆ, ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (ಎನ್‍ಡಿಆರ್‍ಎಫ್ ) ಹಾಗೂ ರಾಜ್ಯ ವಿಪತ್ತು ಪರಿಹಾರ ನಿಧಿ(ಎಸ್‍ಡಿಆರ್‍ಎಫ್ ) ಮಾರ್ಗಸೂಚಿಗಿಂತ ಹೆಚ್ಚುವರಿಯಾಗಿ ಸೂಚಿಸುವುದಾಗಿ ಸರ್ಕಾರ ತಿಳಿಸಿತ್ತು. ಸಮೀಕ್ಷೆ  ಪೂರ್ಣಗೊಂಡಿದ್ದು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲು ಸಿದ್ಧತೆ ನಡೆಸಲಾಗಿದೆ. ಎಸ್‍ಡಿಆರ್‍ಎಫ್ ಮಾರ್ಗಸೂಚಿಯಲ್ಲಿನ ಪ್ರತಿ ಹೆಕ್ಟೇರ್‍ಗೆ ರು. 13,500 ಪರಿಹಾರಕ್ಕಿಂತ ಈಗ ಸರ್ಕಾರ ನೀಡಲಿರುವ ಪರಿಹಾರ ಎರಡು ಪಟ್ಟು ಹೆಚ್ಚಿದೆ.

Related Stories

No stories found.

Advertisement

X
Kannada Prabha
www.kannadaprabha.com