
ಬೆಂಗಳೂರು: ಆ. 22ರಂದು ನಡೆಯಲಿರುವ ಬಿಬಿಎಂಪಿ ಚುನಾವಣೆಗೆ ಚುನಾವಣಾ ಆಯೋಗ ಅಧಿ ಸೂಚನೆ ಹೊರಡಿಸಿದ್ದು, ಸಿದ್ಧತೆ ಆರಂಭವಾಗಿದೆ ಎಂದು ಚುನಾವಣಾ
ಧಿಕಾರಿ, ಬಿಬಿಎಂಪಿ ಆಯುಕ್ತ ಕುಮಾರ್ ನಾಯಕ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣಾ ಆಯೋಗ ಅಧಿಸೂಚನೆ ಹೊರಿಡಿಸಿದ್ದು, ಈಗಾಗಲೇ ಸಿದ್ಧತೆ ನಡೆದಿದೆ. 4 ಜಿಲ್ಲಾ ಚುನಾವಣಾಧಿ ಕಾರಿ, 28 ಅಧಿಕ ಜಿಲ್ಲಾ ಚುನಾವಣಾಧಿಕಾರಿ, 53 ಚುನಾವಣಾಧಿಕಾರಿ, 53 ಹೆಚ್ಚುವರಿ ಚುನಾವಣಾಧಿಕಾರಿ, 198 ಸಹಾಯಕ ಚುನಾವಣಾಧಿಕಾರಿ, 27 ಮತದಾರರ ನೋಂದಣಾಧಿಕಾರಿಗಳು, 63 ಸಹಾಯಕ ಮತದಾರರ ನೋಂದಣಾಧಿಕಾರಿ, 5 ವಿಶೇಷ ಚುನಾವಣಾ ವೀಕ್ಷಕರು, 27 ಚುನಾವಣಾ ವೀಕ್ಷಕರು, 88 ನೋಡಲ್ ಅಧಿಕಾರಿಗಳ ನೇಮಿಸಲಾಗಿದೆ ಎಂದರು. ಮತದಾರರ ಹೆಚ್ಚಳ: 37,68,498 ಪುರುಷಮತದಾರರು, 34,10,388 ಮಹಿಳಾ ಮತದಾರರು ಸೇರಿದಂತೆ ಒಟ್ಟು 71,80,027 ಮಂದಿ ಪಟ್ಟಿಗೆ ಸೇರಿದ್ದಾರೆ.
6,733 ಮತಗಟ್ಟೆ ಗುರುತಿಸಿದ್ದು, ಪ್ರತಿ ಮತಗಟ್ಟಗೆ ಕನಿಷ್ಠ 1,500 ಮತದಾರರನ್ನು ನಿಗದಿಮಾಡಲಾಗಿದೆ. ಇದಕ್ಕಿಂತ ಹೆಚ್ಚಿನ ಮತದಾರರರಿರುವ ಸ್ಥಳಗಳಲ್ಲಿ ಆಕ್ಸಿಲರಿ ಮತಗಟ್ಟೆ ಆರಂಭಿಸಲಾಗುವುದು. 9309 ಕಂಟ್ರೋಲ್ ಯುನಿಟ್, 11,635 ಬ್ಯಾಲೆಟ್ ಯುನಿಟ್ ಇದೆ. ನಾಮಪತ್ರ ಸಲ್ಲಿಸುವ ಕಡೆಯ ದಿನವಾದ ಆ.10ರವರೆಗೆ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊ ಳಿಸಲು ಅವಕಾಶವಿದೆ ಎಂದರು.
ಸಹಾಯವಾಣಿ
ಚುನಾವಣಾ ಆಯೋಗ
080 - 2237 4740
ಬಿಬಿಎಂಪಿ
080 - 2224748
2222 1188
Advertisement