3 ಕಡೆ ಸ್ಪರ್ಧೆ ಜೆಡಿಎಸ್ ಸ್ಪರ್ಧೆ ಇಲ್ಲ; ಕಡೆ ದಿನ 75 ಮಂದಿ ಪಟ್ಟಿ ಬಿಡುಗಡೆ

ಬಿಬಿಎಂಪಿ ಚುನಾವಣೆಗೆ ಅಂತಿಮ ದಿನದ ಕಸರತ್ತು ನಡೆಸಿ ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ಟಿಕೆಟ್ ವಂಚಿತರಾದವರಿಗೆ ಮಣೆ ಹಾಕಿ ಜೆಡಿಎಸ್ 75 ವಾರ್ಡ್‍ಗಳ...
ಬಿಬಿಎಂಪಿ ಕಚೇರಿ
ಬಿಬಿಎಂಪಿ ಕಚೇರಿ
Updated on: 

ಬೆಂಗಳೂರು: ಬಿಬಿಎಂಪಿ ಚುನಾವಣೆಗೆ ಅಂತಿಮ ದಿನದ ಕಸರತ್ತು ನಡೆಸಿ ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ಟಿಕೆಟ್ ವಂಚಿತರಾದವರಿಗೆ ಮಣೆ ಹಾಕಿ ಜೆಡಿಎಸ್ 75 ವಾರ್ಡ್‍ಗಳ ಎರಡನೇ ಪಟ್ಟಿಯನ್ನು ಸೋಮವಾರ ಮಧ್ಯಾಹ್ನ ಬಿಡುಗಡೆ ಮಾಡಿದೆ. ಆ.6ರ ಗುರುವಾರ 120 ಅಭ್ಯರ್ಥಿಗಳ ಮೊದಲ ಪಟ್ಟಿ ಬಹಿರಂಗ ಸಭೆಯಲ್ಲಿ ಬಿಡುಗಡೆ ಆಗಿತ್ತು. ಸೋಮವಾರ ನಾಮಪತ್ರ ಸಲ್ಲಿಸಲು ಅಂತಿಮ ದಿನವಾಗಿದ್ದರಿಂದ ಯಾವುದೇ ಸಮಾವೇಶ, ಪ್ರತಿಜ್ಞೆಗಳ ಸಂಭ್ರಮವಿಲ್ಲದೆ ಮಾಧ್ಯಮಗಳಿಗೆ ಪಟ್ಟಿಯನ್ನು ಜೆಡಿಎಸ್ ಬಿಡುಗಡೆ ಮಾಡಿದೆ. ಎರಡನೇ ಪಟ್ಟಿಯಲ್ಲಿ 75 ಅಭ್ಯರ್ಥಿಗಳಿದ್ದಾರೆ. ಇನ್ನುಳಿದ ಮೂರು ವಾರ್ಡ್‍ಗಳ ಅಂತಿಮ ಪಟ್ಟಿ ಸೋಮವಾರದ ಅಂತ್ಯದವರೆಗೂ ಬಿಡುಗಡೆ ಆಗಿರಲಿಲ್ಲ.

ಕೆಂಪೇಗೌಡ- ಲಾವಣ್ಯ ಎಂ. ಸುರೇಶ್, ಯಲಹಂಕ ಉಪನಗರ- ಹನುಮಂತೇಗೌಡ, ರಾಮಮೂರ್ತಿ ನಗರ- ಎಸ್. ಪದ್ಮಾವತಿ, ಕೆ.ಆರ್.ಪುರಂ- ಕೆ. ದೇವರಾಜ್, ಬಸವನಪುರ- ಅರುಣ್‍ಕುಮಾರ್, ಎಚ್‍ಎಲ್ ವಿಮಾನ ನಿಲ್ದಾಣ- ಗುರುರಾಜ್, ಬ್ಯಾಟರಾಯನಪುರ-ಕೆ.ಎನ್. ಪರಮೇಶ್, ಉಲ್ಲಾಳು- ರೇಖಾ ರಮೇಶ್, ಹೆಮ್ಮಿಗೆಪುರ- ಪಂಚಲಿಂಗಯ್ಯ, ಜೆಪಿ ಪಾರ್ಕ್- ವೆಂಕಟಲಕ್ಷ್ಮಿ ಗಂಗಮ್ಮ, ಲಕ್ಷ್ಮಿದೇವಿನಗರ- ರವಿಕುಮಾರ್,ರಾಜಗೋಪಾಲನಗರ- ಪದ್ಮಾವತಿ ನರಸಿಂಹಮೂರ್ತಿ, ಅರಮನೆನಗರ- ಜಯಂತಿ ಪೈ, ಮಲ್ಲೇಶ್ವರ- ಸುರೇಶ್ ಕುಮಾರ್, ರಾಜಮಹಲ್ ಗುಟ್ಟಹಳ್ಳಿ- ಮೊಸಿನ್ ಜುಬೀನ್, ಕಾಡು ಮಲ್ಲೇಶ್ವರ- ಎನ್. ಸೂರ್ಯನಾರಾಯಣ ರಾವ್, ಸಂಜಯ-ನಗರ- ಪುಟ್ಟಮ್ಮ, ಮನೋರಾಯನಪಾಳ್ಯ- ಅಶ್ವಕ್ ಅಹಮದ್, ಗಂಗೇನಹಳ್ಳಿ-ಎಂ.ಮುನಿರಾಜು, ಕಾಡುಗೊಂಡನಹಳ್ಳಿ-
ಜುಹೇದ್ ಅಹಮದ್, ಹೊಯ್ಸಳನಗರ- ರಘುನಂದ, ಹಲಸೂರು- ಅಶ್ವಿನಿ, ಶಿವಾಜಿನಗರ- ರಝೀಯಾ ಸುಲ್ತಾನ, ವಸಂತನಗರ- ಸಿ.ರವಿ, ಸಂಪಂಗಿರಾಮನಗರ- ಧನಲಕ್ಷ್ಮಿ, ಶಾಂತಿನಗರ- ಎಲ್.ಎನ್. ರಾಜು, ವನ್ನಾರ ಪೇಟೆ- ಸಲೀಂ ಅಹಮದ್, ದಯಾನಂದ
ನಗರ- ವಾಣಿ, ಪ್ರಕಾಶನಗರ- ಎಚ್.ಆರ್. ನಳಿನಿ, ಕಾಮಾಕ್ಷಿಪಾಳ್ಯ- ಪದ್ಮಾ, ಅಗ್ರಹಾರ ದಾಸರಹಳ್ಳಿ- ತೇಜಸ್ವಿನಿ, ಅತ್ತಿಗುಪ್ಪೆ- ಮೆಹಬೂಬ್, ಸುಧಾಮನಗರ- ಪ್ರವೀಣ್, ಧರ್ಮರಾಯಸ್ವಾಮಿ ದೇವಸ್ಥಾನ- ವನಿತಾಜೈಶಂಕರ್, ಹೊಂಬೇಗೌಡ ನಗರ- ಎಂ.
ಝಡ್. ಅಲಿ, ಬಸವನಗುಡಿ- ಆದಿಶೇಷ, ಗಿರಿ-ನಗರ- ಭವ್ಯ ಹನಮಂತೇಗೌಡ, ಕರಿಸಂದ್ರ- ಜಿ. ವಿದ್ಯಾ. ಬನಶಂಕರಿ ದೇವಸ್ಥಾನ- ರುಕ್ಸರ್ ಬಾನು, ಕುಮಾರಸ್ವಾಮಿ ಬಡಾವಣೆ- ಕೆ. ವೆಂಕಟೇಶ್, ಚಿಕ್ಕಲಸಂದ್ರ- ಜಿ.ಕವಿತಾ, ಲಕ್ಕಸಂದ್ರ-ಅನಂತ, ಈಜಿಪುರ- ವೈ.ಎನ್.ಅಶೋಕ-ಕುಮಾರ್, ಬೈರಸಂದ್ರ- ಲೋಕೇಶ್, ಜೆ.ಪಿ.-ನಗರ- ಎಸ್. ಲೀಲಾವತಿ, ಬೊಮ್ಮನಹಳ್ಳಿ-ಅಮುದಾ, ಪುಟ್ಟೇನಹಳ್ಳಿ- ರೆಹಮತ್ ಉನ್ನೀಸಾ, ಮಂಗಮ್ಮನಪಾಳ್ಯ- ಲಕ್ಷ್ಮಿ ಮಲ್ಲೇಶ್, ಬೇಗೂರು- ಕುಮಾರ್, ಕೋಣ- ನಕುಂಟೆ- ಪದ್ಮಾ ರಮೇಶ್‍ಬಾಬು, ಚೌಡೇಶ್ವರಿ- ಜಿ.ನಾಗಲಕ್ಷಿ, ಅಟ್ಟೂರು- ರತ್ನಮ್ಮ, ಥಣಿಸಂದ್ರ- ಚಂದ್ರಕಲಾ ವೆಂಕಟೇಶ್, ರಾಜರಾಜೇಶ್ವರಿ ನಗರ- ಬಂಗಾರಮ್ಮ ರಮೇಶ್, ಶಕ್ತಿ ಗಣಪತಿನಗರ- ಗಂಗಮ್ಮ ರಾಜಣ್ಣ, ನಂದಿನಿ ಬಡಾವಣೆ- ಸಿದ್ದಲಿಂಗೇಗೌಡ, ಗಂಗಾ-ನಗರ- ಹಸೀನಾ ತಾಜ್, ಪುಲಿಕೇಶಿ- ನಗರ- ಆಂಥೋನಿ ಸೆಲ್ವಂ, ನಾಗಾವರ- ಉಮಾ ಗಣೇಶ್, ಕಮ್ಮನಹಳ್ಳಿ- ಯುವರಾಣಿ ಮಂಜುಳಾ, ಚಿಕ್ಕಪೇಟೆ- ಎನ್. ಲಕ್ಷ್ಮಿದೇವಿ, ಬಿನ್ನಿಪೇಟೆ- ಕಲ್ಪನಾ, ಶ್ರೀರಾಮಮಂದಿರ-ಹೇಮಲತಾ ಹರೀಶ್, ಕತ್ರಿಗುಪ್ಪೆ- ಶಿವರಾಮೇಗೌಡ, ವಿದ್ಯಾಪೀಠ- ಶಿವಮ್ಮ ವೆಂಕಟೇಶ್, ಬೆನ್ನಿಗಾನಹಳ್ಳಿ- ಮುನಿ ನಂಜಮ್ಮ, ನ್ಯೂತಿಪ್ಪಸಂದ್ರ- ಎನ್. ಸುಮಿತ್ರಾ, ಡಾ. ರಾಜ್ ಕುಮಾರ್- ನವ್ಯಾ ವಿ. ಶಂಕರ್, ಮಾರುತಿಮಂದಿರ- ಡಿ. ಲೋಕೇಶ್, ದೊಡ್ಡ ನೆಕ್ಕುಂದಿ- ಜ್ಯೋತಿ, ಎಚ್‍ಎಸ್‍ಆರ್ ಲೇಔಟ್- ಸಫೀ ಉಲ್ಲಾ ಖಾನ್, ಚಾಮರಾಜಪೇಟೆ- ಆರ್. ಶೈಲಜಾ, ಸಿಂಗಸಂದ್ರ- ಮೀನಾಕ್ಷಿ ನಾರಾಯಣಪ್ಪ, ಕೆಂಗೇರಿ- ಜಾಕೀರ್ ಹುಸೇನ್, ಯಡಿಯೂರು- ಕುಸುಮಾ. ಭಿನ್ನಾಭಿಪ್ರಾಯ ಇಲ್ಲ

ಹೆಬ್ಬಗೋಡಿ: ಕೇವಲ ಆಶ್ವಾಸನೆ ಕೊಡುವುದು ಅಭ್ಯರ್ಥಿಯ ಕೆಲಸವಲ್ಲ. ಮತದಾರರು ಅಭ್ಯರ್ಥಿ ಈ ಹಿಂದೆ ಮಾಡಿದ್ದ ಉತ್ತಮ ಕೆಲಸಗಳನ್ನೂ ಸೂಕ್ಷ್ಮ ವಾಗಿ ಗಮನಿಸುತ್ತಾರೆ ಎಂದು ಶಾಸಕ ಸತೀಶ್ ರೆಡ್ಡಿ ಅಭಿಪ್ರಾಯಪಟ್ಟರು.
ದೂರು: ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಂ.189 ರ ಹೊಂಗಸಂದ್ರ ವಾರ್ಡ್‍ಗೆ ನಾಮಪತ್ರಸಲ್ಲಿಸಿದ್ದ ಮಹೇಶ್ವರಿ.ಕೆ ಎಂಬುವರ ದಾಖಲೆಯಲ್ಲಿ ಅಭ್ಯರ್ಥಿಯ ಜಾತಿ ಪ್ರಮಾಣಪತ್ರ ಇಲ್ಲ ಎಂದು ಶಾಸಕ ಸತೀಶ್ ರೆಡ್ಡಿ ಚುಣಾವಣಾಧಿಕಾರಿಗೆ ದೂರು ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com