ಆಡಳಿತ ಪಕ್ಷ ನಾಯಕರಲ್ಲಿ ನಾಗರಾಜ ಕೋಟ್ಯಾಧೀಶ!

ಎನ್.ಆರ್ ರಮೇಶ್ ಹಾಗೂ ಅಶ್ವತ್ಥನಾರಾಯಣ ಗೌಡರು ಈ ಚುನಾವಣೆಯಲ್ಲಿ ಆಯೋಗವೇ ನಿಗದಿಪಡಿಸಿರುವ ತಲಾ ರೂ 5 ಲಕ್ಷ ಚುನಾವಣೆ ವೆಚ್ಚ ಭರೈಸಬೇಕಾದರೆ ಅದಕ್ಕೆ ಸಾಲ ಮಾಡಬೇಕು.
ಎನ್.ನಾಗರಾಜು
ಎನ್.ನಾಗರಾಜು

ಬೆಂಗಳೂರು: ಬಿಬಿಎಂಪಿಯಲ್ಲಿ ಆಡಳಿತ ಪಕ್ಷದ ನಾಯಕರಾಗಿ ದುಡಿದ ನಾಲ್ವರು ಇದೀಗ ಕಣದಲ್ಲಿದ್ದಾರೆ. ಮೂವರು ನೇರ ಕಣದಲ್ಲಿದ್ದರೆ, ಎನ್.ಆರ್ ರಮೇಶ್ ಪತ್ನಿಯನ್ನು ಸ್ಪರ್ಧೆಗಿಳಿಸಿದ್ದಾರೆ. ಅತ್ಯಂತ ಕುತೂಹಲಕಾರಿ ಅಂಶವೆಂದರೆ ಎನ್.ಆರ್ ರಮೇಶ್ ಹಾಗೂ ಅಶ್ವತ್ಥನಾರಾಯಣ ಗೌಡರು ಈ ಚುನಾವಣೆಯಲ್ಲಿ ಆಯೋಗವೇ ನಿಗದಿಪಡಿಸಿರುವ ತಲಾ ರೂ 5 ಲಕ್ಷ ಚುನಾವಣೆ ವೆಚ್ಚ ಭರೈಸಬೇಕಾದರೆ ಅದಕ್ಕೆ ಸಾಲ ಮಾಡಬೇಕು. ಏಕೆಂದರೆ ಇವರಿಬ್ಬರ ಕುಟುಂಬದ ಯಾರ ಕೈಯಲ್ಲೂ ಅಥವಾ ಬ್ಯಾಂಕ್ ಖಾತೆಯಲ್ಲೂ ಅಷ್ಟು ಹಣವೇ ಇಲ್ಲ.

ಬಿಜೆಪಿ ಆಡಳಿತಾವಧಿಯಲ್ಲಿ ಆಡಳಿತ ಪಕ್ಷದ ನಾಯಕರಾಗಿದ್ದ ಬಿ.ಆರ್ ನಂಜುಂಡಪ್ಪ ಕಣದಲ್ಲಿಲ್ಲ. ಮಾಜಿ ಮೇಯರ್ ಕಟ್ಟೆ ಸತ್ಯನಾರಾಯಣ ಕಣದಲ್ಲಿದ್ದಾರೆ. ಇನ್ನುಳಿದ ಮೂವರಲ್ಲಿ ಎನ್. ನಾಗರಾಜು ಅಶ್ವತ್ಥನಾರಾಯಣ ಗೌಡ ಅವರು ತಮ್ಮ ವಾರ್ಡ್ ನಲ್ಲೇ ಸ್ಪರ್ಧಿಸಿದ್ದಾರೆ. ಎನ್.ಆರ್ ರಮೇಶ್ ತಮ್ಮ ವಾರ್ಡ್ ಮಹಿಳೆಗೆ ಮೀಸಲಾಗಿದ್ದರಿಂದ ಪತ್ನಿಯನ್ನು ಕಣಕ್ಕಿಳಿಸಿದ್ದಾರೆ. ಅಶ್ವತ್ಥನಾರಾಯಣ ಗೌಡರು ಸಲ್ಲಿಸಿರುವ ಪ್ರಮಾಣಪತ್ರದ ಪ್ರಕಾರ ಅವರ ಒಟ್ಟಾರೆ ಅಸ್ತಿ ಮೌಲ್ಯವೇ ರೂ. 5 .60 ಲಕ್ಷ ಅವರು ಹಾಗೂ ಅವರ ಪತ್ನಿಯಲ್ಲಿರುವ ನಗದು ಹಾಗೂ ಬ್ಯಾಂಕ್ ಖಾತೆಯಲ್ಲಿರುವ ಹಣ ರೂ 51 ,781 ಮಾತ್ರ.

ಇನ್ನು ಎನ್.ಆರ್ ರಮೇಶ್ ಘೋಷಿಸಿರುವಂತೆ ರೂ 49 .74 ಲಕ್ಷ ಇದ್ದಾರೆ ಅದರಲ್ಲಿರುವ ಒಂದೇ ಒಂದು ಮನೆಯ ಮೌಲ್ಯ ರೂ 48 ಲಕ್ಷ. ಚಿನ್ನಾಭರಣ 1 .22 ಲಕ್ಷ. ಉಳಿದಿದ್ದು,  52 ಸಾವಿರ ಮಾತ್ರ ಹಣ. ಬೈರಸಂದ್ರದ ಎನ್.ನಾಗರಾಜು ಅವರ ಅಸ್ತಿ ಮೌಲ್ಯ ರೂ 9 .22 ಕೋಟಿ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com