ಸದ್ಯದ ಸ್ಥಿತಿಯಲ್ಲಿ ಒಂದಾಗಬೇಕಿದೆ ಜನತಾ ಪರಿವಾರ : ದೇವೇಗೌಡ

ಸದ್ಯದ ಪರಿಸ್ಥಿತಿಯಲ್ಲಿ ಜಾತ್ಯತೀತ ಶಕ್ತಿಗಳು ಒಂದಾಗಬೇಕಾಗಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ....
ಎಚ್.ಡಿ ದೇವೇಗೌಡ
ಎಚ್.ಡಿ ದೇವೇಗೌಡ

ಹಾಸನ: ಸದ್ಯದ ಪರಿಸ್ಥಿತಿಯಲ್ಲಿ ಜಾತ್ಯತೀತ ಶಕ್ತಿಗಳು ಒಂದಾಗಬೇಕಾಗಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ, ರಾಜ್ಯದಲ್ಲಿ ಜನತಾ ಪರಿವಾರ ಒಂದಾಗಬೇಕೆಂಬ ಪ್ರಾಮಾಣಿಕ ಇಚ್ಛೆ ಎಲ್ಲರಲ್ಲೂ ಇರಬೇಕು,'' ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದ್ದಾರೆ. ಹಾಸನದ ತಮ್ಮ ನಿವಾಸದಲ್ಲಿ ಶುಕ್ರವಾರ ಮಾತನಾಡಿದ ಅವರು, ``ಜನತಾ ಪರಿವಾರ ಒಂದಾಗುವುದಕ್ಕೆ ತರಾತುರಿ ಸಲ್ಲದು. ಇನ್ನು ನಾಲ್ಕು ತಿಂಗಳಲ್ಲಿ ಕೇರಳ ವಿಧಾನಸಭೆ ಚುನಾವಣೆ ನಡೆಯುತ್ತಿದೆ.

ಅಲ್ಲದೇ ರಾಜ್ಯದಲ್ಲಿ ಸದ್ಯದಲ್ಲೇ ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆಗಳು ನಡೆಯುತ್ತಿವೆ. ಇದರಿಂದ ಶೀಘ್ರಗತಿಯಲ್ಲಿ ಪರಿವಾರ ಒಂದಾಗುವುದು ಸದ್ಯಕ್ಕೆ ಕಷ್ಟ,'' ಎಂದರು.

ಪರಿವಾರ ಒಂದಾಗುವ ಬಗ್ಗೆ ಎಲ್ಲಾ ನಾಯಕರಿಗೂ ಮನಸ್ಸಿರಬೇಕು. ದೇಶ, ರಾಜ್ಯದಲ್ಲಿ ಪರಿವಾರ ಒಟ್ಟುಗೂಡುವ ವಿಚಾರದಲ್ಲಿ ರಾಜಕೀಯ ಮುಖಂಡರ ಸಭೆ ಕರೆದು ಚರ್ಚಿಸಿರುವುದು ಉತ್ತಮ ಬೆಳವಣಿಗೆ. ಅದಕ್ಕೆ ಪೂರಕವಾದ ಶಕ್ತಿ ತುಂಬುವುದು ಅಗತ್ಯ.  ಒಗ್ಗೂಡಲು 2 ವರ್ಷಗಳಿಂದ ಎರಡು ವರ್ಷಗಳಿಂದ ಪ್ರಯತ್ನ  ಮಾಡಲಾಗಿದೆ. ಆದರೂ, ಈವರೆಗೆ ಕಾಲ ಕೂಡಿಬಂದಿಲ್ಲ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com