ಟೋಲ್‍ಗೇಟಲ್ಲಿ ಆ್ಯಂಬುಲೆನ್ಸ್ ವಿಐಪಿಗಳಿಗೆ ಪ್ರತ್ಯೇಕ ಮಾರ್ಗ

ರಾಷ್ಟ್ರೀಯ ಹೆದ್ದಾರಿಗಳ ಟೋಲ್‍ಗೇಟ್‍ನಲ್ಲಿ ಆ್ಯಂಬುಲೆನ್ಸ್ ಹಾಗೂ ವಿಐಪಿ ವಾಹನಗಳಿಗೆ ಪ್ರತ್ಯೇಕ ವ್ಯವಸ್ಥೆ...
ಸಚಿವ ಎಚ್.ಆಂಜನೇಯ
ಸಚಿವ ಎಚ್.ಆಂಜನೇಯ

ವಿಧಾನಪರಿಷತ್: ರಾಷ್ಟ್ರೀಯ ಹೆದ್ದಾರಿಗಳ ಟೋಲ್‍ಗೇಟ್‍ನಲ್ಲಿ ಆ್ಯಂಬುಲೆನ್ಸ್ ಹಾಗೂ ವಿಐಪಿ ವಾಹನಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲೇಬೇಕು ಎಂದು ಸಮಾಜಕಲ್ಯಾಣ
ಇಲಾಖೆ ಸಚಿವ ಎಚ್.ಆಂಜನೇಯ ಸೂಚಿಸಿದ್ದಾರೆ.

ರಾಜ್ಯದ ನಾನಾ ರಾಷ್ಟ್ರೀಯ ಹೆದ್ದಾರಿಗಳ ಟೋಲ್‍ಗೇಟ್‍ನಲ್ಲಿ ಆ್ಯಂಬುಲೆನ್ಸ್‍ಗಳಿಗೆ ಸಮಸ್ಯೆಯಾಗುತ್ತಿರುವುದು ನನ್ನ ಗಮನಕ್ಕೂ ಬಂದಿದೆ. ಸರ್ಕಾರ ಈ ಬಗ್ಗೆ ಗಮನಹರಿಸುತ್ತಿದೆ. ಸಿಸಿಟಿವಿ ಅಳವಡಿಸಿ ಆ್ಯಂಬುಲೆನ್ಸ್‍ಗಳ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಅವರು ಬಿಜೆಪಿಯ ಅಶ್ವತ್ಥನಾರಾಯಣ ಅವರ ಪ್ರಶ್ನೆಗೆ ಉತ್ತರಿಸಿದರು.

ಟೋಲ್‍ಗೇಟ್‍ಗಳಲ್ಲಿ ಸಾರ್ವಜನಿಕ ರೊಂದಿಗೆ ಅಲ್ಲಿನ ಸಿಬ್ಬಂದಿಗಳು ಗೂಂಡಾ ಗಳಂತೆ ವರ್ತಿಸುತ್ತಾರೆ. ಸಣ್ಣ ಪುಟ್ಟ ಕಾರಣಗಳಿಗೆ ಜನಪ್ರತಿನಿಧಿಗಳೊಂದಿಗೂ ಗಲಾಟೆ ಮಾಡುತ್ತಾರೆ. ಕೆಲ ದಿನಗಳ ಹಿಂದೆ ವಿಧಾನ ಪರಿಷತ್ ಸದಸ್ಯರೊಬ್ಬರಿಗೆ ಅಪಘಾತ ವಾದಾಗ ಆ್ಯಂಬುಲೆನ್ಸ್‍ಗೆ ಹೋಗಲು ಇರುವ ಮಾರ್ಗದಲ್ಲಿಯೂ ಟೋಲ್ ವಿತರಿಸುತ್ತಿದ್ದರು. ಇದರಿಂದ ಸುಮಾರು 10 ನಿಮಿಷಗಳ ಕಾಲ ಕಾಯಬೇಕಾಯಿತು.

ಮಾನವೀಯತೆ ಇಲ್ಲದಂತೆ ಅಲ್ಲಿಯ ಸಿಬ್ಬಂದಿಗಳು ವರ್ತಿಸುತ್ತಾರೆ. ತನಗೆ ಸಂಬಂಧವಿಲ್ಲವೆಂದು ರಾಜ್ಯ ಸರ್ಕಾರ ನಿರ್ಲಕ್ಷ್ಯ ಮಾಡಬಾರದು. ಕೂಡಲೇ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಅಶ್ವತ್ಥನಾರಾಯಣ ಆಗ್ರಹಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com