ದಲಿತರ ಮೂಗಿಗೆ ಬೆಣ್ಣೆ ಹಚ್ಚುತ್ತಿರುವ ಕಾಂಗ್ರೆಸ್: ಶೆಟ್ಟರ್ ಆರೋಪ

ದಲಿತ ನಾಯಕರಿಗೆ 2018ರಲ್ಲಿ ಮುಖ್ಯಮಂತ್ರಿ ಹುದ್ದೆ ನೀಡಲಾಗುವುದು ಎಂಬ ಸುಳ್ಳು ಭರವಸೆ ಮೂಲಕ ಕಾಂಗ್ರೆಸ್ ದಲಿತರ ಮೂಗಿಗೆ ಬೆಣ್ಣೆ ಹಚ್ಚುತ್ತಿದೆ...
ಜಗದೀಶ್ ಶೆಟ್ಟರ್
ಜಗದೀಶ್ ಶೆಟ್ಟರ್

ವಿಧಾನಸಭೆ : ದಲಿತ ನಾಯಕರಿಗೆ 2018ರಲ್ಲಿ ಮುಖ್ಯಮಂತ್ರಿ ಹುದ್ದೆ ನೀಡಲಾಗುವುದು ಎಂಬ ಸುಳ್ಳು ಭರವಸೆ ಮೂಲಕ ಕಾಂಗ್ರೆಸ್ ದಲಿತರ ಮೂಗಿಗೆ ಬೆಣ್ಣೆ ಹಚ್ಚುತ್ತಿದೆ ಎಂದು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ವಿಧಾನಸಭೆಯಲ್ಲಿ ಆರೋಪಿಸಿದ್ದಾರೆ.

ರಾಜ್ಯಪಾಲರ ವಂದನಾ ನಿರ್ಣಯದ ಮೇಲೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಪರೋಕ್ಷವಾಗಿ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರ ಬಾಳಿಕೆ ಐದು ವರ್ಷ ಎಂದು ಸೀಮಿತಗೊಳಿಸಿದ್ದಾರೆ. ಅದರ ಜತೆಗೆ ದಲಿತರ ನಿರೀಕ್ಷೆಯನ್ನೂ ಹುಸಿ ಮಾಡುತ್ತಿದ್ದಾರೆ. 2018ಕ್ಕೆ ಕಾಂಗ್ರೆಸ್ ಮತ್ತೆ ಅ„ಕಾರಕ್ಕೆ ಬರುವುದು ಕೇವಲ ಕನಸು. ಹೀಗಾಗಿ ಕಾಂಗ್ರೆಸ್ ದಲಿತ ಮುಖಂಡರನ್ನು ಮುಖ್ಯಮಂತ್ರಿ ಹುದ್ದೆಯಲ್ಲಿ ಕುಳ್ಳಿರಿಸುವುದಿಲ್ಲ ಎಂದು ವ್ಯಂಗ್ಯವಾಡಿದರು. ಆದರೆ ಸರ್ಕಾರದೊಳಗೆ ನಡೆಯುತ್ತಿರುವ ಇಂಥ ಬೆಳವಣಿಗೆ ಬೇರೆಯದೇ ಆದ ಸಂದೇಶವನ್ನು ರವಾನೆ ಮಾಡುತ್ತಿದೆ. ಸಿದ್ದರಾಮಯ್ಯ ಬಹಳ ದಿನ ಇರುವುದಿಲ್ಲ. ದಲಿತರು ಸಿಎಂ ಆಗಬೇಕೆಂಬ ವಾದ ಬಲವಾಗುತ್ತಿದೆ ಎಂಬ ಕಾರಣ ನೀಡಿ ಅ„ಕಾರಿಗಳು ನಿರ್ಲಕ್ಷ್ಯ ಧೋರಣೆ ತಾಳುತ್ತಾರೆ. ಏಕೆಂದರೆ ಇಂಥದೊಂದು ವಾದ ಸರ್ಕಾರದೊಳಗಿನಿಂದಲೇ ಹುಟ್ಟಿದೆ. ಕಂದಾಯ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಅವರೇ ಪತ್ರಿಕಾ ಹೇಳಿಕೆ ಮೂಲಕ ಈ ವಾದವನ್ನು ಹುಟ್ಟುಹಾಕಿದ್ದಾರೆ. ಸಮಾಜ ಕಲ್ಯಾಣ ಸಚಿವರು 2018ರಲ್ಲಿ ದಲಿತರು ಸಿಎಂ ಆಗುತ್ತಾರೆ ಎಂದು ಸ್ಪಷ್ಟೀಕರಣ ನೀಡಿದ್ದು, ಮುಖ್ಯಮಂತ್ರಿ ಖುರ್ಚಿ ಖಾಲಿ ಇಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದಾರೆ. ಒಟ್ಟಿನಲ್ಲಿ ಕಾಂಗ್ರೆಸ್‍ನಲ್ಲಿ ವಾತಾವರಣ ಸರಿ ಇಲ್ಲ ಎಂಬ ಭಾವನೆ ಮೂಡುತ್ತಿದೆ ಎಂದು ಆರೋಪಿಸಿದರು. ಇದೆಲ್ಲ ಪತ್ರಿಕೆಗಳಲ್ಲಿ ಬಂದ ವಿಚಾರ ನಿಜವಾದರೂ, ನಿಮ್ಮದೇ ಸಚಿವರು ಹೇಳಿದ್ದು. ಹೀಗಾಗಿ ಸಿದ್ದರಾಮಯ್ಯನವರು ಪತ್ರಿಕಾ ಹೇಳಿಕೆಗಳೆಲ್ಲ ಸುಳ್ಳು ಎಂದು ಜಾರಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಸಂಪುಟದಲ್ಲಿ ಕುಂಟರು, ಕಿವುಡರು, ಮಾತು ಬಾರದವರು ಇದ್ದಾರೆ ಎಂದು ನಿಮ್ಮ ಶಾಸಕರೇ ಆರೋಪ ಮಾಡಿದ್ದಾರೆ. ಹೀಗಾಗಿ ಸಂಪುಟದಲ್ಲಿ ಖಾಲಿ ಇರುವ ಸ್ಥಾನವನ್ನು ಆದಷ್ಟು ಬೇಗ ತುಂಬಿ ಎಂದು ಸಿಎಂ ಸಿದ್ದರಾಮಯ್ಯನವರ ಕಾಲು ಎಳೆದರು.

ಯೂಟರ್ನ್: ಈ ಗೊಂದಲದ ಜತೆಗೆ ಸರ್ಕಾರ ಕೆಲವು ವಿಚಾರಗಳನ್ನು ಘೋಷಿಸಿ ಯೂಟರ್ನ್ ತೆಗೆದುಕೊಳ್ಳುತ್ತದೆ ಎಂಬ ಆರೋಪವಿದೆ. ಅಹಿಂದ ವಿದ್ಯಾರ್ಥಿಗಳಿಗೆ ಪ್ರವಾಸ, ಮೂಢನಂಬಿಕೆ ನಿಯಂತ್ರಣ, ಅದ್ದೂರಿ ವಿವಾಹ ನಿಯಂತ್ರಣ ಕಾಯ್ದೆ, ಮಠ ನಿಯಂತ್ರಣ ವಿಧೇಯಕಗಳು ಇದಕ್ಕೆ ಉದಾಹರಣೆ. ಕಾನೂನು ಸಚಿವ ಜಯಚಂದ್ರ ಅವರಂತೂ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನೀಡುವುದರಲ್ಲಿ ನಿಸ್ಸೀಮರು ಎಂದು ವ್ಯಂಗ್ಯವಾಡಿದರು.

ಅನುಷ್ಠಾನವಾಗಿಲ್ಲ: ಇದೆಲ್ಲದಕ್ಕಿಂತ ಮುಖ್ಯವಾಗಿ ಪ್ರದೇಶಾಬಿsವೃದ್ಧಿ ಮಂಡಳಿಗೆ ನಿಗದಿ ಮಾಡಿದ ಹಣವನ್ನು ಸಮರ್ಪಕವಾಗಿ ವೆಚ್ಚ ಮಾಡುತ್ತಿಲ್ಲ. ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ರು.600 ಕೋಟಿ ನಿಗದಿಯಾಗಿದೆ. ಆದರೆ ರು.100 ಕೋಟಿ ಮಾತ್ರ ಖರ್ಚಾಗಿದೆ. ಯಾವ ಪುರುಷಾರ್ಥಕ್ಕೆ 371 ಜೆ ತಿದ್ದುಪಡಿಯಾಗಿದೆ ಹಾಗಾದರೆ? ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಗೆ ರು.30 ಕೋಟಿ ನಿಗದಿಯಾಗಿದ್ದು, ರು.19 ಕೋಟಿ ಬಿಡುಗಡೆಯÁಗಿದೆ. ರು.10 ಕೋಟಿ ಮಾತ್ರ ಖರ್ಚಾಗಿದೆ. ಜಲಸಂಪನ್ಮೂಲ ಇಲಾಖೆಗೆ ರು.10000 ಸರ್ಕಾರ ನಿಗದಿ ಮಾಡಿದ್ದಷ್ಟೇ ಬಂತು. ಬಿಡುಗಡೆಯಾಗಿದ್ದು ರು.4917 ಕೋಟಿ ಮಾತ್ರ. ಕೇವಲ ಘೋಷಣೆಗೆ ಮಾತ್ರ ಸರ್ಕಾರ ಸೀಮಿತವಾಗಿದ್ದು, ಅಭಿವೃದ್ಧಿ ಶೂನ್ಯ ಎಂದು ಆಪಾದಿಸಿದರು.

ಕೈಗಾರಿಕಾ ಕ್ಷೇತ್ರದಲ್ಲಿ ಕರ್ನಾಟಕದ ಕತೆ ಮುಗಿದಿದೆ ಎಂಬ ವಾತಾವರಣ ಸೃಷ್ಟಿಯಾಗಿದೆ. ನಾವು ಅ„ಕಾರದಲ್ಲಿದ್ದಾಗ ಜಾರಿಗೆ ತಂದಿದ್ದು ಎಂಬ ಕಾರಣಕ್ಕೆ ವಿಶ್ವ ಬಂಡವಾಳ ಹೂಡಿಕೆ ಸಮಾವೇಶ (ಜಿಮ್) ಕೈ ಬಿಟ್ಟಿದ್ದಾರೆ. ಸರ್ಕಾರ ನಡೆಸಿದ ಉನ್ನತಮಟ್ಟದ ಸಮಿತಿ ಸಭೆ ಸೇರಿದ್ದರೂ ಇದುವರೆಗೆ 1100 ಮಂದಿಗೆ ಮಾತ್ರ ಉದ್ಯೋಗಾವಕಾಶ ಸೃಷ್ಟಿಸುವ ಸಾಮರ್ಥ್ಯದ ರು.335 ಕೋಟಿ ಹೂಡಿಕೆಯ ಒಂದು ಘಟಕ ಮಾತ್ರ ಅನುಷ್ಠಾನವಾಗಿದೆ. ರಾಜ್ಯದಿಂದ ಕೈಗಾರಿಕೆಗಳು ವಲಸೆ ಹೋಗುವುದಕ್ಕೆ ಸರ್ಕಾರದ ನೀತಿಯೇ ಕಾರಣ ಎಂದು ಆರೋಪಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com