ಡಿ.ಕೆ.ಶಿವಕುಮಾರ್
ಡಿ.ಕೆ.ಶಿವಕುಮಾರ್

ಇನ್ನೊಂದು ವರ್ಷದಲ್ಲಿ ವಿದ್ಯುತ್ ಸ್ವಾವಲಂಬನೆ

ರಾಜ್ಯದ ವಿದ್ಯುತ್ ಸಾಮರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಎಲ್ಲ ಕ್ರಮಕೈಗೊಂಡಿದೆ. ನಿರೀಕ್ಷೆಯಂತೆ ಯೋಜನೆಗಳು ...

ವಿಧಾನ ಪರಿಷತ್ತು: ರಾಜ್ಯದ ವಿದ್ಯುತ್ ಸಾಮರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಎಲ್ಲ ಕ್ರಮಕೈಗೊಂಡಿದೆ. ನಿರೀಕ್ಷೆಯಂತೆ ಯೋಜನೆಗಳು ಕಾರ್ಯಗತಗೊಂಡರೆ ಇನ್ನೊಂದು ವರ್ಷದಲ್ಲಿ ರಾಜ್ಯಕ್ಕೆ ಹೆಚ್ಚಾಗು ವಷ್ಟು ವಿದ್ಯುತ್ ಲಭ್ಯವಾಗಲಿದೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಬಿ.ಜೆ.ಪುಟ್ಟಸ್ವಾಮಿ ಪ್ರಶ್ನೆಗೆ ಉತ್ತ ರಿಸಿದ ಅವರು, ಸದ್ಯ ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆಗಿಂತ ಬೇಡಿಕೆ ಹೆಚ್ಚಿದೆ. ವಿದ್ಯುತ್ ಬೇಡಿಕೆ ನೀಗಿಸಲು ಸರ್ಕಾರ ಪವರ್ ಕಂಪನಿ ಆಫ್ ಕರ್ನಾಟಕ ಲಿಮಿಟೆಡ್ ವತಿಯಿಂದ ಅಲ್ಪಾವಧಿ  ಹಾಗೂ ಮಧ್ಯಮಾವಧಿ  ಆಧಾರದಲ್ಲಿ ವಿದ್ಯುತ್ ಖರೀದಿಗಾಗಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು. ಸದ್ಯಕ್ಕೆ ಕೆಪಿಸಿಎಲ್‍ನಿಂದ 700 ಮೆಗಾವಾಟ್ ಸಾಮರ್ಥ್ಯದ ಬಿಟಿಪಿಎಸ್ ಘಟಕ-3ರ ಸ್ಥಾಪನೆಗೆ ಕ್ರಮಕೈಗೊಳ್ಳಲಾಗಿದೆ, ಮುಂಬರುವ ಜೂನ್ ವೇಳೆಗೆ ಅದು ಚಾಲನೆಯಾಗಲಿದೆ. ಅದೇ ರೀತಿ 1600 ಮೆವಾ ಸಾಮರ್ಥ್ಯದ ಯರಮರಸ್  ಯೋಜನೆ ಸ್ಥಾಪನೆಗೆ ಕ್ರಮವಹಿಸಲಾಗಿದೆ. ಬಿಜಾಪುರ ಜಿಲ್ಲೆಯ ಕೂಡಗಿಯಲ್ಲಿ ಎನ್‍ಟಿಪಿಎಸ್ ಸಹಯೋ ಗದಲ್ಲಿ 4 ಸಾವಿರ ಮೆವಾ ಸಾಮರ್ಥ್ಯದ ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರದಿಂದ ರಾಜ್ಯಕ್ಕೆ 2 ಸಾವಿರ ಮೆವ್ಯಾ ಲಭ್ಯವಾಗಲಿದೆ. ರಾಯಚೂರು ಜಿಲ್ಲೆಯ ಯದ್ಲಾಪುರದಲ್ಲಿ 800 ಮೆವ್ಯಾ ಸಾಮರ್ಥ್ಯದ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆಗೆ ಕ್ರಮಕೈಗೊಳ್ಳಲಾಗಿದೆ. ಛತ್ತೀಸ್‍ಘಡದಲ್ಲಿ 1600 ಮೆವ್ಯಾ ಸಾಮರ್ಥ್ಯದ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆ, ಬಿಡದಿ ವಿದ್ಯುತ್ ಕೇಂದ್ರದಲ್ಲಿ ಮೊದಲ 700 ಮೆವ್ಯಾ ಸಾಮರ್ಥ್ಯದ ಅನಿಲಾಧಾರಿತ ಘಟಕ, ಖಾಸಗಿಯವರಿಂದ ಗುಲ್ಬರ್ಗ ಮತ್ತು ಘಟಪ್ರಭಾದಲ್ಲಿ ತಲಾ ೧೩೨೦ ಮೆಗಾ ವ್ಯಾಟ್ ಸಾಮರ್ಥ್ಯದ ಉಷ್ಣ  ವಿದ್ಯುತ್ ಸ್ಥಾಪನೆಗೆ ಕ್ರಮವಹಿಸಲಾಗಿದೆ. 2018-19ನೇ ಸಾಲಿನಿಂದ ವಿದ್ಯುತ್ ಉತ್ಪಾದನೆ ನಿರೀಕ್ಷಿಸುತ್ತಿರುವ ಯಲಹಂಕ ಗ್ಯಾಸ್ ಆಧಾರಿತ ವಿದ್ಯುತ್ ಘಟಕಕ್ಕೆ ಶೀಘ್ರವೇ ಶಂಕುಸ್ಥಾಪನೆ ನೆರವೇರಿಸಲಾಗು ತ್ತದೆ ಎಂದು ಸಚಿವರು ವಿವರಿಸಿದರು

Related Stories

No stories found.

Advertisement

X
Kannada Prabha
www.kannadaprabha.com