ರಾಜ್ಯದಲ್ಲಿ 305 ಬಾಂಗ್ಲಾ ನುಸುಳುಕೋರರ ಪತ್ತೆ

ಗೃಹ ಸಚಿವ ಕೆ.ಜೆ.ಜಾರ್ಜ್
ಗೃಹ ಸಚಿವ ಕೆ.ಜೆ.ಜಾರ್ಜ್
Updated on: 

ವಿಧಾನಪರಿಷತ್: ರಾಜ್ಯದಲ್ಲಿ 305 ಬಾಂಗ್ಲಾದೇಶೀಯರು ಪತ್ತೆಯಾಗಿದ್ದಾರೆ. ಹೀಗೊಂದು ಆತಂಕದ ಸಂಗತಿಯನ್ನು ಗೃಹ ಸಚಿವ ಕೆ.ಜೆ.ಜಾರ್ಜ್ ಅವರೇ ಹೇಳಿದ್ದಾರೆ.

ಹಾಗೆಯೇ ಅಕ್ರಮ ನುಸುಳುಕೋರರನ್ನು ಗಡೀಪಾರು ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ. ಬಿಜೆಪಿ ಸದಸ್ಯ ಮಹಾಂತೇಶ ಕವಟಗಿಮಠ ಅವರ ಪ್ರಶ್ನೆಗೆ ಮಂಡಿಸಿದ ಲಿಖಿತ ಉತ್ತರದಲ್ಲಿ ಸಚಿವರು ಈ ಮಾಹಿತಿ ನೀಡಿದ್ದಾರೆ.

ಪತ್ತೆಯಾಗಿರುವ 305 ಬಾಂಗ್ಲಾದೇಶೀಯರ ಪೈಕಿ ಪಾಸ್‍ ಪೋರ್ಟ್ ಮತ್ತು ವೀಸಾ ಇಲ್ಲದೆ ಅನಧಿಕೃತವಾಗಿ ವಾಸಿಸುತ್ತಿರುವ 240 ಮಂದಿ ವಿರುದ್ಧ 61 ಪ್ರಕರಣಗಳನ್ನು ದಾಖಲಿಸಲಾಗಿದ್ದು, ಕಾನೂನು ಕ್ರಮ ಜರುಗಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಅನಧಿಕೃತವಾಗಿ ಪತ್ತೆಯಾಗುವ ಬಾಂಗ್ಲಾದೇಶೀಯರನ್ನು ಗಡೀಪಾರು ಮಾಡುವವರೆಗೆ ಸೂಕ್ತ ಭದ್ರತೆಯಲ್ಲಿ ಇಡಲು ವಿದೇಶೀಯರ ಬಂಧನ ಕೇಂದ್ರ ಸ್ಥಾಪಿಸುವ ಕುರಿತಂತೆ ಬೆಂಗಳೂರು ಕಾರಾಗೃಹದ ಒಂದು ಭಾಗದಲ್ಲಿ ಪ್ರತ್ಯೇಕ ಕೋಣೆ ವ್ಯವಸ್ಥೆ ಮಾಡಲಾಗಿದೆ. ಅಕ್ರಮ ವಾಸಿಗಳನ್ನು ಈ ಕೋಣೆಯಲ್ಲಿ ಇಡಲಾಗಿದೆ.

ಪತ್ತೆಯಾಗಿರುವ 305 ಬಾಂಗ್ಲಾದೇಶೀಯರ ಪೈಕಿ 257 ಮಂದಿ ಬೆಂಗಳೂರಿನಲ್ಲಿದ್ದರು. ಉಳಿದಂತೆ ಮೈಸೂರು ನಗರ- 16, ಉಡುಪಿ- 14, ರಾಮನಗರ- 13, ಮಂಗಳೂರು ನಗರ- 4 ಮತ್ತು ವಿಜಯಪುರದಲ್ಲಿ ಒಬ್ಬರು ಪತ್ತೆಯಾಗಿದ್ದಾರೆ ಎಂದು ಸಚಿವರು ಉತ್ತರಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com