ಆರಂಭದಲ್ಲೇ ಸರ್ಕಾರದ ವಿರುದ್ಧ ಸಿಡಿಮಿಡಿ

ಸದಸ್ಯರು ಕೇಳಿದ ಪ್ರಶ್ನೆಗಳಿಗೆ ಸರಿಯಾದ ಕ್ರಮದಲ್ಲಿ ಉತ್ತರ ನೀಡದ ಸರ್ಕಾರದ ವಿರುದ್ಧ ಪ್ರತಿಪಕ್ಷ ಸದಸ್ಯರು ತೀವ್ರ ವಾಗ್ದಾಳಿ ನಡೆಸಿದ ಪ್ರಸಂಗ ನಡೆಯಿತು...
ಸರ್ಕಾರದ ವಿರುದ್ಧ ಪ್ರತಿಪಕ್ಷ ಸದಸ್ಯರ ಸಿಡಿಮಿಡಿ
ಸರ್ಕಾರದ ವಿರುದ್ಧ ಪ್ರತಿಪಕ್ಷ ಸದಸ್ಯರ ಸಿಡಿಮಿಡಿ

ವಿಧಾನಪರಿಷತ್ತು: ಸದಸ್ಯರು ಕೇಳಿದ ಪ್ರಶ್ನೆಗಳಿಗೆ ಸರಿಯಾದ ಕ್ರಮದಲ್ಲಿ ಉತ್ತರ ನೀಡದ ಸರ್ಕಾರದ ವಿರುದ್ಧ ಪ್ರತಿಪಕ್ಷ ಸದಸ್ಯರು ತೀವ್ರ ವಾಗ್ದಾಳಿ ನಡೆಸಿದ ಪ್ರಸಂಗ ನಡೆಯಿತು.

ಸದನ ಆರಂಭವಾಗುತ್ತಿದ್ದಂತೆ ಸದಸ್ಯರ ಪ್ರಶ್ನೆಗಳಿಗೆ ಸರ್ಕಾರದಿಂದ ಉತ್ತರ ಮಂಡನೆಯಾಯಿತು. ಆದರೆ, ಪ್ರಶ್ನೆಗಳ ಸಂಖ್ಯೆಗೂ ಉತ್ತರಗಳ ಸಂಖ್ಯೆಗೂ ಅಜಗಜಾಂತರ ವ್ಯತ್ಯಾಸವಿತ್ತು. ಇದು ಪ್ರತಿಪಕ್ಷ ಸದಸ್ಯರ ಕೆಂಗಣ್ಣಿಗೆ ಗುರಿಯಾಯಿತು. 140 ಪ್ರಶ್ನೆಗಳ ಪೈಕಿ 43ಕ್ಕೆ ಮಾತ್ರ ಸರ್ಕಾರದಿಂದ ಉತ್ತರ ಬಂದಿತ್ತು. ಹಾಗೆಯೇ ಲಿಖಿತ ಮೂಲಕ ಕೇಳಲಾದ 15 ಪ್ರಶ್ನೆಗೆ 10ಕ್ಕೆ ಮಾತ್ರ ಉತ್ತರ ಬಂದಿತ್ತು.

ಈ ವೇಳೆ ಮುಖ್ಯಮಂತ್ರಿಯವರನ್ನುದ್ದೇಶಿಸಿ ಮಾತನಾಡಿದ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ, ಇಲ್ಲಿ ಸದಸ್ಯರ ಪ್ರಶ್ನೆಗೆ ಉತ್ತರ ಸಿಗುವುದಿಲ್ಲ ಎಂದರೆ ಏನರ್ಥ. ನೀವು ಸದನಕ್ಕೆ ಬರಬೇಡಿ ಎಂದರೆ ಬರುವುದಿಲ್ಲ ಎಂದು ತರಾಟೆಗೆ ತೆಗೆದುಕೊಂಡರು. ಅವರಿಗೆ ಪ್ರತ್ಯುತ್ತರ ನೀಡಿದ ಸಿಎಂ ಸಿದ್ದರಾಮಯ್ಯ, ನಿಮ್ಮನ್ನು ಜನ ಆಯ್ಕೆ ಮಾಡಿಕಳಿಸಿದ್ದಾರೆ ಅಥವಾ ನಿಮ್ಮ ಪಕ್ಷದವರು ಇಲ್ಲಿಗೆ ಕಳಿಸಿದ್ದಾರೆ.

ನಿಮ್ಮನ್ನು ಬರಬೇಡಿ ಎಂದು ಹೇಳುವ ಅಧಿಕಾರ ನಮಗಿಲ್ಲ ಎಂದರು. ವಾದ ತಾರಕಕ್ಕೇರುತ್ತಿದ್ದಂತೆ ಮುಖ್ಯಮಂತ್ರಿಯವರೇ ಸಮಾಧಾನ ಗೊಂಡು, ಮುಂದೆ ಈ ರೀತಿ ಆಗದಂತೆ ಕ್ರಮಕೈಗೊಳ್ಳಲಾಗುತ್ತದೆ. ಉತ್ತರ ಕೊಡಬೇಕೆಂಬ ಕಳಕಳಿ ನಮಗಿದೆ. ಅವಶ್ಯಬಿದ್ದರೆ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳುತ್ತೇವೆ ಎಂದು ಪ್ರತಿಪಕ್ಷಗಳಿಗೆ ಭರವಸೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com