ಸಿದ್ದು ವಿರುದ್ಧ ಬಿಜೆಪಿ ಗಣಿ ಗದ್ದಲ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅರ್ಕಾವತಿ ಅಕ್ರಮ ಅರಗಿಸಿಕೊಳ್ಳುವ ಮುನ್ನವೇ ಪ್ರತಿಪಕ್ಷ ಬಿಜೆಪಿ ಅವರ ವಿರುದ್ಧ ಗಣಿ ಅಕ್ರಮದ ಆರೋಪ...
ಸಿದ್ದರಾಮಯ್ಯ
ಸಿದ್ದರಾಮಯ್ಯ
Updated on: 

ವಿಧಾನಪರಿಷತ್ತು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅರ್ಕಾವತಿ ಅಕ್ರಮ ಅರಗಿಸಿಕೊಳ್ಳುವ ಮುನ್ನವೇ ಪ್ರತಿಪಕ್ಷ ಬಿಜೆಪಿ ಅವರ ವಿರುದ್ಧ  ಗಣಿ ಅಕ್ರಮದ ಆರೋಪ ಹೊರಿಸಿದೆ. ಗಣಿ ಲೈಸನ್ಸ್ ನವೀಕರಿಸುವಲ್ಲಿ ಅಕ್ರಮ ನಡೆದಿದೆ ಎಂದು ದಾಳಿ ನಡೆಸಿದ ಬಿಜೆಪಿ, ಸರ್ಕಾರದ ಉತ್ತರ ಖಂಡಿಸಿ ಸಭಾತ್ಯಾಗ ಮಾಡಿತು. ಇದರೊಂದಿಗೆ 10ದಿನಗಳಿಂದ ನಡೆದ ಸದನ ಶುಕ್ರವಾರ ಗಣಿ ಗದ್ದಲದೊಂದಿಗೆ ಅಂತ್ಯವಾಯಿತು.
ಸಿಬಿಐ ತನಿಖೆಗೆ ಒಳಗಾಗಿರುವ ಸಂಸ್ಥೆಗಳಿಗೆ ಅಕ್ರಮವಾಗಿ ಗಣಿ ಪರವಾನಗಿ ನವೀಕರಿಸಿದ್ದು, ಇದರಲ್ಲಿ ರು. 2,500 ಕೋಟಿಗಳಷ್ಟು ಭಾರಿ ಅಕ್ರಮ ನಡೆದಿದೆ ಎಂದು ಪ್ರತಿಪಕ್ಷ ನಾಯಕ ಈಶ್ವರಪ್ಪ ಸರ್ಕಾರದ ವಿರುದ್ಧ  ನೇರ ಆರೋಪ ಮಾಡಿದರು. ಈ ಬಗ್ಗೆ ನಿಲುವಳಿ ಸೂಚನೆಯಲ್ಲಿ ಚರ್ಚಿಸಲು ಅವಕಾಶ ನೀಡಲಿಲ್ಲ. ಮುಖ್ಯಮಂತ್ರಿಗಳ ಉತ್ತರದ ಸಮಯದಲ್ಲೂ ಅವಕಾಶ ನೀಡುತ್ತಿಲ್ಲ. ಇದು ಸರಿಯಲ್ಲ ಎಂದು ಕೂಗಾಡಿದರು. ಇದಕ್ಕೆ ಆಕ್ಷೇಪಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯ, ನಮ್ಮ ಅವಧಿಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಅಕ್ರಮ ನಡೆದುರುವುದೆಲ್ಲ ನಿಮ್ಮ ಕಾಲದಲ್ಲೇ ಎಂದು ತಿರುಗೇಟು ನೀಡಿದರು. ಇದರಿಂದ ಸದನದಲ್ಲಿ ಭಾರಿ ಗದ್ದಲ ಉಂಟಾಗಿ ಬಿಜೆಪಿ ಸದಸ್ಯರು ಮುಖ್ಯಮಂತ್ರಿಗಳ ಉತ್ತರವನ್ನೇ ಧಿಕ್ಕರಿಸಿ ಸಭಾತ್ಯಾಗ ಮಾಡಿದರು.


ನಡೆದಿದ್ದೇನು?
ಗಣಿ ಲೈಸೆನ್ಸ್ ನೀಡಿಕೆ ಬಗ್ಗೆ ಮಾತನಾಡಿದ ಈಶ್ವರಪ್ಪ, ಗಣಿಗಾರಿಕೆ ನಡೆಸಲು ಅನುಮತಿ ಕೋರಿ ಸುಮಾರು 25,000 ಅರ್ಜಿಗಳು ಸಲ್ಲಿಕೆಯಾಗಿವೆ.  ಆದರೆ ಸರ್ಕಾರ ಕೇವಲ 8 ಸಂಸ್ಥೆಗಳಿಗೆ ಮಾತ್ರ ಲೈಸೆನ್ಸ್ ನವೀಕರಿಸಿದೆ. ಆದರೆ ಈ ಸಂಸ್ಥೆಗಳು ಇನ್ನೂ ಸಿಬಿಐ ತನಿಖೆ ಎದುರಿಸುತ್ತಿವೆ. ಆದ್ದರಿಂದ ಕೂಡಲೇ ನವೀಕರಿಸಿರುವ ಪರವಾನಗಿಗಳನ್ನು ರದ್ದು ಮಾಡಬೇಕು ಎಂದು ಆಗ್ರಹಿಸಿದರು. ಇದಕ್ಕೆ  ಪ್ರತಿಕ್ರಯಿಸಿದ ಮುಖ್ಯ ಮಂತ್ರಿ ಸಿದ್ದರಾಮಯ್ಯ, ಕಬ್ಬಿಣ ಕಾರ್ಖಾನೆಗಳಿಗೆ ಬೇಕಾದ ಅದಿರು ತೆಗೆಯಲು ಗಣಿಗಾರಿಕೆ ಅಗತ್ಯವಾಗಿರುವ ಕಾರಣ ಸುಪ್ರೀಂ  ಕೋರ್ಟ್ ರಾಜ್ಯದಲ್ಲಿ  30 ಮಿಲಿಯನ್ ಟನ್ ವರೆಗೂ ಅದಿರು ತೆಗೆಯಲು ಅನುಮತಿ ನೀಡಿದೆ. ಆದರೆ ಈಗಿರುವ ಆದರೆ ಈಗಿರುವ ಸಂಸ್ಥೆಗಳಿಂದ ಅನುಮತಿ ಸಿಕ್ಕಿರುವಷ್ಟು ಅದಿರು ತೆಗೆಯಸು ಆಗದೆ ಬರೀ 13 ಮಿಲಿಯನ್ ಟನ್ ಮಾತ್ರ ತೆಗೆಯಲಾಗಿದೆ. ಆದ್ದರಿಂದ ಗಣಿಗಾರಿಕೆ ಪರವಾನಗಿ ನವೀಕರಣಕ್ಕೆ ಅರ್ಜಿ ಸಲ್ಲಿಸಿದ್ದ 20 ಸಂಸ್ಥೆಗಳಲ್ಲಿ 8 ಕಂಪನಿಗಳ ನವೀಕರಣಕ್ಕೆಸ ಅರ್ಜಿ ಸಲ್ಲಿಸಿದ್ದ 20 ಸಂಸ್ಥೆಗಳಲ್ಲಿ 8 ಕಂಪನಿಗಳ ನವೀಕರಣಕ್ಕೆ ತಾತ್ವಿಕ ಒಪ್ಪಿಗೆಯನವ್ನು ನೀಡಲಾಗಿದೆ. ಇದಕ್ಕಾಗಿ ಅನೇಕ ಷರತ್ತುಗಳನ್ನೂ ವಿಧಿಸಲಾಗಿದೆ ಎಂದರು.

ತಾತ್ವಿಕ ಒಪ್ಪಿಗೆ ಪಡೆದಿರುವ ಈ 8 ಕಂಪನಿಗಳು ಇಂಡಿಯನ್ ಬ್ಯೂರೋ ಆಫ್  ಮೈನಿಂಗ್‍ನಿಂದ ಪ್ರಮಾಣ ಪತ್ರ ಪಡೆದಿವೆ. ಇದನ್ನಾಧರಿಸಿ ಪರಿಸರ  ಮತ್ತು  ಅನುಮತಿ ನೀಡಲಾಗಿದೆ ಇದನ್ನಾಧರಿಸಿ ಪರಿಸರ ಮತ್ತು ಅರಣ್ಯ ಅನುಮತಿ ಕಡ್ಡಾಯಗೊಳಿಸಿ ಅನುಮತಿ ನೀಡಲಾಗಿದೆ. ಆದ್ದರಿಂದ ಇದರಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಇದನ್ನು ರದ್ದುಗೊಳಿಸುವುದಕ್ಕೆ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು ಇದರಿಂದ ಸಿಟ್ಟಿಗೆದ್ದ ಈಶ್ವರಪ್ಪ,
ಗಣಿ ಲೈಸೆನ್ಸ್ ನವೀಕರಿಸಲು 25,000 ಅರ್ಜಿಗಳುಸಲ್ಲಿಕೆಯಾಗಿದ್ದರೂ ಸರ್ಕಾರ ತಮಗೆ ಬೇಕಾದ 8 ಸಂಸ್ಥೆಗಳನ್ನು ಮಾತ್ರ ಆಯ್ಕೆ ಮಾಡಿ ಅನುಮತಿ ನೀಡಿದೆ. ಇದರಲ್ಲಿ ಸುಮಾರು ರು.2,500 ಕೋಟಿ ಗಳ ಅಕ್ರಮ ನಡೆದಿದ್ದು, ಇದು ಅರ್ಕಾವತಿ ಡಿನೋಟಿಫಿಕೇಷನ್ ಅಕ್ರಮಕ್ಕಿಂತಲೂ ದೊಡ್ಡದು.
ಆದ್ದರಿಂದ ಇದರಿಂದ ನಿಮ್ಮ ಮೇಲೆ ಆಪಾದನೆ ಬರುವುದು ಖಚಿತ ಎಂದು ಎಚ್ಚರಿಸಿದರು.
ನಂತರ ಈಶ್ವರಪ್ಪ ವಿರುದ್ಧ ಕಾಂಗ್ರೆಸ್ ಸದಸ್ಯರು ವಾಗ್ದಾಳಿ ಆರಂಭಿಸಿದರು. ಜತೆಗೂಡಿದ ಮುಖ್ಯಮಂತ್ರಿ, ಇದೆಲ್ಲಾ ಬೇಜವಾಬ್ದಾರಿ  ಹೇಳಿಕೆಯಾಗಿದ್ದು, ಇದರಿಂದ ಯಾವುದೇ  ಪ್ರಯೋಜನ ಆಗುವುದಿಲ್ಲ ಎಂದು ರೇಗಿದರು. ಸಿಟ್ಟಿಗೆದ್ದ ಈಶ್ವರಪ್ಪ ಹಾಗೂ ಬಿಜೆಪಿ ಸದಸ್ಯರು ಸರ್ಕಾರದ ಅಕ್ರಮವನ್ನು ಸಹಿಸುವುದಿಲ್ಲ ಎಂದು ಸಭಾತ್ಯಾಗ ಮಾಡಿದರು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com