ಕಾರ್ಮಿಕ ಇಲಾಖೆಗೆ 1000 ಕೋಟಿ ಪ್ರಸ್ತಾವನೆ

ನಿರುದ್ಯೋಗಿ ಯುವಕ ಯುವತಿಯರಿಗೆ ಕೌಶಲ ತರಬೇತಿ ನೀಡುವ ಯೋಜನೆಗಳು ಬಜೆಟ್‍ನಲ್ಲಿ ಪ್ರಕಟವಾಗಲಿದ್ದು, ಕಾರ್ಮಿಕ ಇಲಾಖೆಗೆ...
ಪರಮೇಶ್ವರ ನಾಯ್ಕ
ಪರಮೇಶ್ವರ ನಾಯ್ಕ
Updated on: 

ಬೆಂಗಳೂರು: ನಿರುದ್ಯೋಗಿ ಯುವಕ ಯುವತಿಯರಿಗೆ ಕೌಶಲ ತರಬೇತಿ ನೀಡುವ ಯೋಜನೆಗಳು ಬಜೆಟ್‍ನಲ್ಲಿ ಪ್ರಕಟವಾಗಲಿದ್ದು, ಕಾರ್ಮಿಕ ಇಲಾಖೆಗೆ 1000 ಕೋಟಿ ಅನುದಾನದ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದು ಕಾರ್ಮಿಕ ಖಾತೆ ಸಚಿವ ಪರಮೇಶ್ವರ ನಾಯ್ಕ ತಿಳಿಸಿದ್ದಾರೆ.ಕೌಶಲ ತರಬೇತಿಗೆ ಈ ಬಾರಿ ಹೆಚ್ಚಿನ ಒತ್ತು ನೀಡಲು ನಿರ್ಧರಿಸಲಾಗಿದೆ. ಬಜೆಟ್‍ನಲ್ಲಿ ಎಲ್ಲವೂ ಪ್ರಕಟವಾಗಲಿವೆ ಎಂದು ಸುದ್ದಿಗಾರರಿಗೆ ಬುಧವಾರ ತಿಳಿಸಿ ದರು. ಉದ್ಯೋಗ ತರಬೇತಿಗೆ ಕಳೆದ ಸಾಲಿನಲ್ಲಿ ರು. 399 ಕೋಟಿ ನೀಡಲಾಗಿತ್ತು. ಈ ಬಾರಿ ರು. 706 ಕೋಟಿ ಪ್ರಸ್ತಾಪ ಸಲ್ಲಿಸಲಾಗಿದೆ. ಹೊಸ ಐಟಿಐ ಕೇಂದ್ರಗಳಿಗೂ ಮೂಲಸೌಕರ್ಯ ಕಲ್ಪಿಸಬೇಕಾಗಿ ದೆ ಎಂದರು. ಬಾಯ್ಲರ್‍ಗಳಿಗೆ ಪ್ರಯೋಗಾಲಯದ ಕೊರತೆ ಇದ್ದು, ಸಕಾಲಕ್ಕೆ ಪರೀಕ್ಷೆ ವರದಿ ನೀಡುವಂತಹ ಪ್ರಯೋಗಾಲಯ ಸ್ಥಾಪನೆಗೆ ಚಿಂತಿಸಲಾಗಿದೆ. ಕಾರ್ಮಿಕ ಕಲ್ಯಾಣ ನಿಧಿಯಲ್ಲಿ 3000 ಕೋಟಿ ಇದ್ದು, ಇದನ್ನು ಶಿಕ್ಷಣ, ಕಾರ್ಮಿಕ ಕಲ್ಯಾಣ, ಸಮುದಾಯಭವನ ನಿರ್ಮಿಸಲು ಅನುವು ಮಾಡಿಕೊಡಲು ಕೇಳಿಕೊಳ್ಳಲಾಗಿದೆ. ಸಿನಿಮಾರಂಗದ ಕಾರ್ಮಿಕರು ಅಸಂಘಟಿತ ವಲಯದವ ರಾಗಿದ್ದು, ಅವರ ಸಮಸ್ಯೆಗಳು ಹಾಗೂ ನಿರ್ಮಾಪಕ ಸಂಕಷ್ಟವನ್ನು ನಟಿ ಹಾಗೂ ಶಾಸಕಿ ತಾರಾ ಸದನದಲ್ಲಿ ಪ್ರಸ್ತಾಪಿಸಿದ್ದರು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಪರಿಶೀಲನೆ ನಡೆಯುತ್ತಿದೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com